ಹುಡುಕಾಟ
ಸುತ್ತೆಲ್ಲ ಮೌನ, ನನ್ನೊಳಗಿದೆ ಕಿರಿ-ಕಿರಿ
ನಾ ನಾನಾಗಿ ಇಲ್ಲವೆಂಬುವುದು ಖಾತರಿ,
ಎಲ್ಲೋ ಕೆಳೆದುಹೋದೆನೆಂಬ ಗಾಬರಿ
ನಾ ನಾನಾಗಲು ಹುಡುಕಬೇಕೀಗ ರಹದಾರಿ.
ಮನದ ಸಂಭಾಷಣೆಗೆ ಭಾಷೆಯ ಹಂಗಿಲ್ಲ
ಮೌನ ಭಾಷೆಗೂ ಮಿಗಿಲಾದ ದುಃಖ ಬೇರೆ ಇಲ್ಲ,
ಅನುಭವ ಮಂಟಪದಲ್ಲಿ ಕಲಿತಿದ್ದರೆ ಎಲ್ಲ
ನನ್ನ ನಾ ಎಲ್ಲಿಯೂ ಕಳೆದುಕೊಳ್ಳುತ್ತಿರಲಿಲ್ಲ.
ಹುಡುಕಾಟವೇನು ಹೊಸದಲ್ಲ ನನಗೆ
ಏರು-ಪೇರಿನ ಜೀವನವು ಇರುವುದೇ ಹೀಗೆ,
ಕಳೆದುಹೋಗಿಹ ನನ್ನೊಳಗಿನ ಹೂನಗೆಗೆ
ನಗುವೆಂಬ ಮುಖವಾಡದಿಂದ ತೀರಿಸುವೆನು ಹಗೆ.-
ಚೊಕ್ಕವಾಗಿ ಬರೆಯದಿದ್ದಲ್ಲಿ
ಚಕ್ಕನೆ ತಿಳಿಸಿಬಿಡಿ
ಚುಕ್ತಗೊಳಿಸುವೆನು
ಚಕಾರವೆತ್ತದೆ
ಚಕಿತಗೊಂಡ
ಚುಕ... read more
ಮನಸ್ಸಿನಿಂದ ಮಾಡುವ ನಿಜ ಪ್ರೀತಿಗೆ
ಎಂದೆಂದಿಗು ಸಾವು ಇರುವುದಿಲ್ಲ.
ಮನೆ, ಮನಿ ಅಥವಾ ಆಕರ್ಷಣೆಯ ಮೋಡಿಗೊಳಗಾಗಿ
ಪ್ರೀತಿಸಿದರೆ ಅದು ಬಹು ಕಾಲ ಉಳಿಯುವುದಿಲ್ಲ-
ಅವಕಾಶವನ್ನು ಕಸಿದವಗೆ ಪ್ರತಿಭೆ ಕಸಿಯಲಾಗದ ಮೇಲೆ ಏನು ಬಂತು
ಮರವ ಕಡಿದವ ಬೇರನ್ನು ಕಡಿಯಲು ಮರೆತಂತಾಯಿತು.-
ದೀಪದಂತ ಮನಸ್ಸುಳ್ಳವ ಕತ್ತಲೆಗೆ ಭಯಪಡನು,
ಕತ್ತಲಂತ ಮನಸ್ಸುಳ್ಳವ ಬೆಳಕ ಕಂಡು ಹೆದರುವನು.-
*ಅವನೆಂಬ ಕವಿತೆ*
ಮೌನವಾಗಿ ಎದೆಯ ಗೂಡಲ್ಲಿ
ಸದ್ದು ಮಾಡುತ್ತಿರುವ ಅವನೆಂಬ
ಕವಿತೆಗಳೆಂದರೆ ಹಾಗೇಯೇ, ಅದು...
ಹಾಡಾಗದೆ ಕಾಡುವ ಸಾಲುಗಳಾಗಿ
ಬೆಂಬತ್ತಿ ಬರುವ ನೆರಳಂತೆ
ಬೇಕೆಂದಾಗ ಜೊತೆಯಿರುವುದು
ಬೇಡವೆಂದಾಗಲೂ ಜೊತೆಯಿರುವುದು.-
ಅಭಿನಂದನೆಗಳು ಅನ್ವೇಷಕ..
೧೦೦+ ಬರಹ..
🌸🌸🌸🌸🌸🌸🌸
ಅರ್ಥಗರ್ಭಿತ ಬರಹದೊಂದಿಗೆ yqನಲ್ಲಿ
ಮುಂದುವರೆಯುತ್ತಿರುವ ನಿಮ್ಮಿಂದ ಇನ್ನಷ್ಟು ಹೆಚ್ಚು ಬರಹಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.-
*ಮುಖವಾಡ*
ನಾ ಮುಖವಾಡ ತೊಟ್ಟು
ಮತ್ತೊಬ್ಬರ ಮೆಚ್ಚಿಸಿದರೆ,
ಅದು ಮುಖವಾಡ ಇರುವ ತನಕ
ಉಳಿಯಬಹುದು ಅಷ್ಟೆ...
ನಾ ಮುಖವಾಡ ತೊಡದೆ
ಮತ್ತೊಬ್ಬರ ಮೆಚ್ಚಿಸಿದರೆ,
ನಾ ಕೊನೆ ತನಕ ಅವರಿಟ್ಟ
ನಂಬಿಕೆಯ ಉಳಿಸಬಹುದು..
ಯಾವಾಗ ಮುಖವಾಡವನ್ನು
ಹಾಕಬೇಕು ಮತ್ತು ಹಾಕಬಾರದು
ಎಂಬುವುದ ಕೂಡ ಈಗೀಗ
ನಾ ಕಲಿಯಲೆ ಬೇಕಾಗಿದೆ...
ಮುಖವಾಡ ಹಾಕುವುದು
ಮತ್ತು ಅದನ್ನು ಹಾಕದಿರುವುದು
ಎದುರಿಗಿರುವ ವ್ಯಕ್ತಿಯ ಮೇಲೆ
ಅವಲಂಬಿತವಾಗಿರುವ ಆಟ...!-
ಏನು ಮಾತನಾಡಬೇಕೆಂದು ಯೋಚಿಸಿದರೆ
ಎಲ್ಲವೂ ಶಾಂತಿಯುತವಾಗಿರುತ್ತದೆ.
ಬಾಯಿಗೆ ಬಾಯಿ ಸೇರಿಸಿ ಮಾತನಾಡುತ್ತಿದ್ದರೆ
ಸಂತೆಯ ಗದ್ದಲ ತುಂಬಿದ ಸ್ಮಶಾನದಂತೆ ಜೀವನ.-
ನನ್ನ ದುಃಖವೆಂಬ ಖುಷಿಯನ್ನು ಆಲಿಸಲು ಕಿವಿಗಳು ನೂರಾರು
ನನ್ನ ದುಃಖವೆಂಬ ನೋವನ್ನು ಹೇಳದೆ ತಿಳಿಯುವರು ನನ್ನವರು...-