ನೀರಿಲ್ಲದೆ ಬದುಕಲಾರೆ
ಎಂದ ಮೀನು
ಮರಣ ಸಮಯ ಬಂದಾಗ
ನೀರಿನೊಳಗಿದ್ದರೂ ಪ್ರಾಣ ಬಿಟ್ಟಿತು-
ನನ್ನವರು ಯಾರೂ ಕೈ ಹಿಡಿಯಲಿಲ್ಲ
ಸ್ಮರಿಸದಿದ್ದರೂ ನೀ ನನ್ನ ಕೈ ಬಿಡಲಿಲ್ಲ
ಅರಿವಾಯಿತು ನೀನೊಬ್ಬನೇ ನನಗೆಂದೂ
ಮರೆಯಲಾರೆ ಮಧುಸೂದನ ಇನ್ನೆಂದೂ
-
ನನಗೆಂದೇ ನೀ ಬರೆದ ಸಾಲುಗಳು
ಓದಿದಷ್ಟು ಮತ್ತೆ ಮತ್ತೆ ಓದುವಾಸೆ
ಅಷ್ಟು ಚಂದ ನಿನ್ನ ಬರವಣಿಗೆ
ತುಟಿಯಂಚಿನಲ್ಲಿ ನಗು ತಂದಿದ್ದು ಎಷ್ಟು ಸತ್ಯವೋ
ಕಂಗಳು ಕಣ್ಣೀರು ಸುರಿಸಿದ್ದು ಕೂಡಾ ಅಷ್ಟೇ ಸತ್ಯ
ಅಸಹಾಯಕಿ ನಾ ನಿನಗೂ ಗೊತ್ತು
ಕ್ಷಮಿಸು ಎಂದಷ್ಟೇ ಹೇಳಬಲ್ಲೆ
-
ಹೆತ್ತವರ ಮನಸ್ಸು ಅರ್ಥ ಮಾಡಿಕೊಳ್ಳದವರು ಎಷ್ಟು ಓದಿ ಬುದ್ಧಿವಂತರಾಗಿದ್ದರೇನು
ತಂದೆ ತಾಯಿಯ ಹೊರೆ ಎಂದು ಭಾವಿಸುವವರು ಎಷ್ಟು ಹಣ ಸಂಪಾದಿಸಿದರೇನು-
ಪ್ರೀತಿಯೇ ದೇವರು
ಎಂದು ಪ್ರತಿಕ್ಷಣ
ಬದುಕಿದ್ದವಳು ಆಕೆ
ನೋವ ಮರೆತು
ಆತನ ನಗು
ಬಯಸಿದ್ದವಳು ಆಕೆ
ಬಾಳಿನುದ್ದಕ್ಕೂ ಜೊತೆ
ನಡೆವ ಕನಸ
ಕಟ್ಟಿದವಳು ಆಕೆ
ವಿಧಿಯಾಟಕ್ಕೆ ಕಂಗೆಟ್ಟು
ನೊಂದು ಮೌನವಾಗಿ
ಉಳಿದವಳು ಆಕೆ-
ನಿನ್ನ ಕೋಪ,ಹಠಕ್ಕೆ ಬಲಿಯಾದದ್ದು
ನನ್ನ ಮುಗ್ಧ ಭಾವನೆಗಳು
ನಾ ಕಂಡ ಕನಸುಗಳು
ಇನ್ನೆಂದೂ ಅರಳದು
ಇನ್ನೆಂದೂ ಚಿಗುರದು
ಸೋಲಿಸಿದೆ ನೀ ನನ್ನ
ಅತೀ ಪ್ರೀತಿಗೆ ನೀ ಕೊಟ್ಟ
ಉಡುಗೊರೆ ಮರೆಯಲಾರೆ
-