ನಾಲ್ಕು ನಲವತ್ತಾಗಿ, ನಾನೂರಾಗಿ, ನಾಲ್ಕು ಜನುಮಗಳೇ
ಕಳೆದರೂ ನನ್ನಾತ್ಮ ನಿನ್ನನ್ನೇ ಅರಸುವುದು.....♡-
ದೇಹದಿಂದ ದೂರಿದ್ದು ಆತ್ಮದಿಂದ ನನ್ನೆರಳಾಗಿ ಸದಾ ನನ್ನೊಡನಿರುವವನ ಪರಿಚಯಕೆ ಮೂರು ಮುತ್ತಿನಂತ ವರುಷಗಳು!!
•💞🫂•
— % &-
ಅದೆಷ್ಟೋ ಅರ್ಧ ಸತ್ತ ಭಾವನೆಗಳ
ಆಕ್ಸಿಜನ್ ಕೊಟ್ಟು ಉಳಿಸಿದ್ದೆ
ನಿನ್ನಿಂದ ಮರುಜೀವ ಪಡೆಯುತ್ತವೆಂದು
ಪಾಪ! ಅವು ಕೊಳೆತು ನಾರುತ್ತಿರುವುದು
ನನ್_ಮೂಗಿನವರೆಗೇ ತಲುಪಲಿಲ್ಲ
ಇನ್ನು ನಿನ್_ಕಣ್ಣಿನೆದುರಂತೂ..
ಸಾಕು ಬಿಡು ಮತ್ಮತ್ ಯಾಕೆ!
ಅದೇ ಹೊಸ-ಹಳೇ ಕ್ಯಾಸೆಟ್....-
ಅಲ್ಲೇ ಮರೆಯಾಗಿದ್ದೆಯಲ್ಲ ಅದೇ..
ನನ್ನ ಕಣ್ಣಂಚಿನ ದೂರದ ಮೂಲೆಯಲ್ಲಿ
ದಯಮಾಡಿ ಹಾಗೆಯೇ ಹೊರಟಿಬಿಡು
ಮತ್ಮತ್ತೆ ನನ್ನೆದೆ ಸೂಜಿ ನೋವನ್ನ
ಸಹಿಸಿಕೊಳ್ಳುವಷ್ಟು ಮಂದವಾಗಿಲ್ಲ;
ಮತ್ತಾ ಸೂಜಿಯಂತೂ ನನ್ನೆದೆ ಪೂರಾ
ಹರಿದೋಗೋವರೆಗೂ ಮೊಂಡಾಗುವುದಿಲ್ಲ!-
ಹುಟ್ಟು-ಸಾವು, ಏಳು-ಬೀಳು, ಕನಸು-ನನಸು, ಮಾತು-ಮೌನ ಎಲ್ಲಕ್ಕೂ ದನಿ_ಯಾದದ್ದು/ಯಾಗೋದು ಅದೇ....
ನನ್_ಕನ್ನಡ!
💛
❤️
(ಅಡಿಬರಹ)-
ಹುಟ್ಟಿದಬ್ಬದ ಆತ್ಮೀಯ ಶುಭಾಶಯಗಳು ಅಣ್ಣಯ್ಯ..
ಬರಹಕ್ಕೂ ಸಂತುಷ್ಟಿ ಭಾವ ಕೊಟ್ಟವರು ನೀವು!
ನಂಬಿಕೆಯ ಬೆಳಕಾಗಿ, ಕಾಳಜಿಯ ಪ್ರತಿರೂಪವಾಗಿ
ಪ್ರೀತಿಯ ಹೊನಲಿನಲ್ಲಿರುವ ಅಪರೂಪದ ಮುತ್ತು ನೀವು
ಅವಳೆಡೆಗಿನ ಪ್ರೇಮದೊಲವ ಗೀಚುತ್ತಾ ಅಕ್ಷರಗಳಿಗೆ
ನಿಮ್ಮನ್ನು ನೀವೇ ಸಮರ್ಪಿಸಿಕೊಂಡಿದ್ದೀರಿ..
ಹೀಗೇ ಅನಂತದವರೆಗೂ ನಕ್ಕು ನಲಿಯುತ್ತಾ,
ಗೀಚುತ್ತಾ, ಎಲ್ಲರೊಂದಿಗೂ ಬೆರೆಯುತ್ತಾ,
ಸುಖದಿಂದಿರಿ ಅಣ್ಣಯ್ಯ.
ಬರಹದೊಳಗಿನ ಭಾವವ ಜೀವಿಸುವ ಬೇಂದ್ರೆಪ್ರಿಯರಿಗೆ
ಹೆಚ್ಚೆಚ್ಚು..ಕೊನೆಯಿರದಷ್ಟು ಒಳಿತಾಗಲಿ
ಕೆಟ್ಟದ್ದೆಂಬುದು ನಿಮ್ಮ ನೆರಳನ್ನೂ ತಾಕದಿರಲಿ.
ಬದುಕ ಪಯಣದ ಕೊನೆಯವರೆಗೂ ತರ್ಪೂರ್ಣ
ಪೂರ್ಣವಾಗಿ ಒಟ್ಟಾಗಿಯೇ ಉಳಿಯಲೆಂದಾಶಿಸುವೆ..
ಇನ್ನೂ ಹೆಚ್ಚೆಚ್ಚು ಗೀಚುತ್ತಾ ಕನ್ನಡಕ್ಕೆ ಕೀರ್ತಿ ತರುವಂತವರಾಗಿ..
ಶುಭವಾಗಲಿ ನಿಮಗೆ ಶುಭವಷ್ಟೇ ಆಗಲಿ..!!-
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ 🎂💐
ಬರವಣಿಗೆಯ ಲೋಕದಿ
ಸದಾಕಾಲಕ್ಕೂ ಮರೆಯಾಗದೆ
ಅಜರಾಮರವಾಗಲಿ
ನಿಮ್ಮಯ ಹೆಸರು!
ಬದುಕೆಂಬ ವಿದ್ಯಾಲಯದಲಿ
ಕನ್ನಡವ ಕಲಿಯುತ್ತಾ,
ಬಳಸುತ್ತಾ,ಕಲಿಸುತ್ತಾ,
ಕನ್ನಡಕ್ಕೂ ಹೆಮ್ಮೆ
ತರುವಂತಾಗಲಿ
ನಿಮ್ಮಯ ಜ್ಞಾನ!
ಹೆಚ್ಚೆಂದರೆ ಹೆಚ್ಚೇ ಆಗಲಿ
ನೋವಲ್ಲ, ನಲಿವು.
ಮರೆಯಾಗುವುದಾದರೆ ಮರೆಯೇ ಆಗಲಿ
ಸುಖವಲ್ಲಾ, ನಿಮ್ಮೆಲ್ಲಾ ಸಂಕಷ್ಟಗಳು!
ಇಪ್ಪತ್ನಾಲ್ಕು ಗಂಟೆಗಳ
ಐವತ್ತೆರಡು ವಾರಗಳ
ಪ್ರತಿವರುಷದ ಪ್ರತಿಕ್ಷಣವೂ ಅವಿಸ್ಮರಣೀಯವಾಗಿರಲೆಂದು
ಮನದುಂಬಿ ಆಶಿಸುವೆ!-
ಸ್ವೋಪಜ್ಞತೆ ಉಳ್ಳವನಿಗೆ
ಸ್ವಾಭಿಮಾನವಂತೂ ಇರಲೇಬೇಕು! ಆದರೆ,
ಅಹಂಕಾರವೆಂಬುದು ತಲೆಯೊಳಗಲ್ಲ; ಅಕ್ಕಪಕ್ಕದಲ್ಲೂ ಸುಳಿಯಬಾರದು.-
ಜನುಮ ದಿನದ ಶುಭಾಶಯಗಳು
ಗುಬ್ಬಿಯ ಗೂಡಿಗೆ ❤️
ಹರುಷದ ಹೊನಲಲಿ
ಕೊನೆಯುಸಿರಿರೋವರೆಗೂ
ಸಂಭ್ರಮಿಸುತ್ತಿರಿ..
ಬೊಗಸೆಯಷ್ಟಿರುವೀ ಜೀವನದಲಿ
ಸಂತಸವೇ ತುಂಬಿರಲಿ;
ಕೆಲ ಅವಮಾನ, ಅಪಮಾನಗಳಿಂದ
ಕಲಿತ ಪಾಠವೂ ಜೊತೆಗಿರಲಿ!
ನಿರ್ಮಲ ಮನದ ಸ್ವಚ್ಛಂದ
ಪ್ರೀತಿಯು ಹೀಗೇ
ಸದಾಕಾಲವೂ ಹಸಿರಾಗಿರಲಿ..
ಹೆತ್ತವರ ಕನಸಿನ ನನಸಾಗಿ,
ಅವರ್ನೋವಿಗೆ ಹೆಗಲಾಗಿ,
ಅನುಕ್ಷಣವೂ ಆನಂದದಿಂದಿರಿ!!
ಈ ದಿನದ ಸಂತಸ,ಸಂಭ್ರಮ
ಕ್ಷಣ ಕ್ಷಣವೂ ದುಪ್ಪಟ್ಟಾಗಲಿ,
ಗಣೇಶ ನಿಮ್ಗಾಯಸ್ಸಾರೋಗ್ಯ ಕೊಟ್ಟು
ಇನ್ನೊಂದ್ ಎಪ್ಪತ್ವರ್ಷ ಕಾಪಾಡ್ಲಿ.-
ಈಗಿನ್ ಜನ ಹೆಂಗಂದ್ರೆ,,
ಹೇಳ್ದಾಗ ನಂಬ್ದಿರೋರು
ಸ್ಕ್ರೀನ್ಶಾಟ್ ಕಳ್ಸಿದ್ಮೇಲೆ ಹು ಅಂತಾರೆ.-