QUOTES ON #ಅಮ್ಮ

#ಅಮ್ಮ quotes

Trending | Latest
12 MAY 2019 AT 8:30

ನೂರು ಜನ್ಮದ ಪುಣ್ಯ ಫಲವು, ನಾ ಪಡೆದನು ಅಮ್ಮನೊಲವು;
(Read caption....👇...)

-


19 APR 2021 AT 22:00

ಹೆತ್ತವಳನ್ನು ಪದಗಳಲ್ಲಿ ಸೆರೆ ಹಿಡಿಯಲು
ಪ್ರಯತ್ನಿಸುತ್ತಿರುವಾಗಲೇ ಲೇಖನಿ ನನಗೆ
ಮೂರ್ಖನೆಂದು ನಾಮಕರಣ ಮಾಡಿತ್ತು...

-



ಗಜಲ್..

ಅಮ್ಮ..ನಿನ್ನ ತನು-ಮನದ ಉಸಿರಿನ ಒಂದಂಶದವನು ಕಣೇ ನಾನು ನಿನ್ನನ್ನು ಹೆರಿಗೆಯ ಯಮಯಾತನೆಗೆ ನೂಕಿದವನು ಕಣೇ ನಾನು

ಅಮ್ಮ.. ನಿನ್ನುದರದ ಕರುಳ ಬಳ್ಳಿಯ ಪ್ರತಿಬಿಂಬದ ಕೂಸು ನಾನು
ದೈಹಿಕವಾಗಿ ನಿನ್ನ ದುರ್ಬಲಳನ್ನಾಗಿ ಮಾಡಿದವನು ಕಣೇ ನಾನು

ಅಮ್ಮ..ಬಡತನ ಬವಣೆಯಲಿ ರೋಗ-ರುಜಿನುಗಳಿಗೆ ತುತ್ತಾಗಿಸಿದೆ
ನೋವಿನ ಸರಮಾಲೆಯನು ನಿನಗೆ ತೊಡಿಸಿದವನು ಕಣೇ ನಾನು

ಅಮ್ಮ.. ತಿನ್ನೋಕೆ ಸತಾಯಿಸುತ ನಿನ್ನ ಜೀವ ತಿಂದವನು ನಾನು
ನಿನ್ನ ಹಸಿವನ್ನು ಮರೆಸಿ ಉಪವಾಸ ಕೆಡವಿದವನು ಕಣೇ ನಾನು

ಅಮ್ಮ... ನಿನಗೆ ಕೂಡಿಸಿ ಸೇವೆ ಮಾಡಲಾಗದ ಪಾಪಿ ಈ ಮಲ್ಲಿ
ಇಂದಿಗೂ ನಿನ್ನ ಅಡುಗೆಗಾಗಿಯೇ ಕಾಯುತ್ತಿರುವವನು ಕಣೇ ನಾನು

-


21 SEP 2020 AT 19:16

ಅಮ್ಮಾ‌ ನೀನೊಬ್ಬಳು ಸುಳ್ಳುಬುರುಕಿ
-ನಿಶ್ಯಬ್ದ

(ಕಣ್ಣು ಅಡಿಬರಹದೆಡೆಗೆ)

-


31 MAY 2019 AT 22:42

ಪಂಜರದ ಗಿಣಿಯಾದರು
ಪಂಜಿನಂತೆ ಉರಿಯುತ್ತಿದ್ದರು
ಪ್ರಜ್ವಲಿಸುವ ದೇವರು.

-



ಅಮ್ಮನೊಲವ ಪ್ರೀತಿ
ಪದಗಳ ಮೆರವಣಿಗೆಯಲಿ
ಹುಡುಕಿದರು ಸಿಗಲಾರದು
ಅಚಿಂತ್ಯ ಸಾಗರದ ಅಲೆಗಳ ರೀತಿ

ಸಾವಿರ ಕಾಲಕ್ಕೂ
ಬದುಕಿಗೆ ಆರತಿ
ಅಜಸ್ರ ಪ್ರೀತಿಯ
ಧಾರೆ ಎರೆವ ಅನುಪಮ ಜ್ಯೋತಿ

ಅನಘ್ಯ ಭಾವನೆಗಳಿಗೆ
ಸ್ಪಂದಿಸೋ ಅಪ್ರತಿಮ ದೇವತೆ
ಅಮೂಲ್ಯ ರತ್ನಗಳಂತೆ
ಹೊಳೆಯುವ ನೀತಿ...

-


29 SEP 2020 AT 7:01

ರಾಗವ ಮಾಡಿ
ಜೋಗುಳ ಹಾಡಿದ
ತ್ಯಾಗದ ಮೂರ್ತಿ
ನಮ್ಮಮ್ಮ...❤️

-


19 JAN 2021 AT 14:50

ಅಮ್ಮ
-------
❤️ನನ್ನ ಅಮ್ಮ❤️
❤️ನನ್ನ ಜೀವ ನೀವಮ್ಮ❤️
❤️ನಿಮ್ಮ ಹಾರೈಕೆಯೇ ನನ್ನ ಬಲವಮ್ಮ❤️
❤️ಇಂದಿಗೂ ನಾ ನಿಮ್ಮ ಪುಟ್ಟ ಕಂದನಮ್ಮ❤️

(Read Caption)

-


20 MAR 2020 AT 20:11

ಅಂಬರದ ವಿಶಾಲದಂತೆ ಮಡಿಲು
ಅಮ್ಮನ ಈ ವಾತ್ಸಲ್ಯದೊಡಲು
ಅಚಿರಪ್ರಭೆಯ ಮನದ ಕಡಲು
ಅನುರಾಗದ ಅದ್ಭುತಕ್ಕೂ ಮೊದಲು
ಆತ್ಮಾನುಬಂಧದ ಕರುಳಬಳ್ಳಿಯೊಲು
ಅಡಗಿದೆ ಅಮೃತಧಾರೆಯ ತೊಟ್ಟಿಲು.!

-



ನನ್ನಿಂದಾಗಿ ಎಲ್ಲರ್ಹತ್ರ
ಮಾತ್ಗಳ್ ಕೇಳೋ ಅಮ್ಮ
ನಾನು ಮತ್ ಅವ್ಳು ಇಬ್ರೇ ಇದ್ದಾಗ
ಚಕ್ರಬಡ್ಡಿನೂ ಸೇರ್ಸಿ
ನಂಗ್ ವರ್ಗಾಯ್ಸ್ತಾಳೆ!

-