Vinaya Hegde   (ನಿಶ್ಯಬ್ದ)
506 Followers · 9 Following

Joined 29 January 2017


Joined 29 January 2017
13 MAR 2024 AT 10:12

ಎಲ್ಲರನ್ನೂ ಕಾಡೋ ಮುತ್ತಿಗೂ
ನಿನ್ನ ಮುತ್ತಿನ ಬಯಕೆ...

-


9 FEB 2024 AT 12:02

ಪದಗಳಿಗೂ ಬರಗಾಲ
ನಿನ್ನ ವರ್ಣಿಸಲು..
ನಿನ್ನ ಕಣ್ಣೋಟವೊಂದೇ ಸಾಕು
ನನ್ನ ಸೋಲಿಸಲು.!

-


23 MAY 2023 AT 10:01

ಸಕ್ಕರೆಗೂ ಜೇನಿಗೂ
ಜಗಳವಂತೆ
ತಾನು ಹೆಚ್ಚು ಸಿಹಿಯೆಂದು
ಬಹುಶಃ
ತಾಕಿರಲಾರರು ಇಬ್ಬರೂ
ನನ್ನವಳ ತುಟಿಯನ್ನು...

-


10 FEB 2023 AT 0:14

ಅವಳ ಸೆರಗು..!

-


13 JAN 2023 AT 20:29

ನೀ ಬಿಟ್ಟು ಹೋದ
ನೆನಪುಗಳೇಲ್ಲವೂ
ಇಂದೆನಗೆ ಅಪರಿಮಿತ ನಶೆ

ಅದೆಷ್ಟೇ ಕುಡಿದರೂ
ಆ ಮತ್ತ ಕೊಡದು
ತುಂಬಿದ ಸಾರಾಯಿ ಶೀಶೆ..

-


12 JAN 2023 AT 22:02

ಬೆಡಗಿಗೆ‌ ಒಲಿದು
ಚಂದಿರನ ಕೊರೆದು
ಮಾಡಿಹೆನು ತೂಗುಯ್ಯಾಲೆ

ಪ್ರೀತಿಯನು ಹಿಡಿದು
ಹೃದಯವನು ತೆರೆದು
ಕುಳಿತುನೋಡೊಮ್ಮೆ ಅದರ ಮ್ಯಾಲೆ

-


11 JAN 2023 AT 22:13

ಈ ಚಳಿಗೆ..
ಕಿಚ್ಚಿಗೂ ಕೂಡ ಚಳಿ ಹೆಚ್ಚು

ಅವಳ್ ಹತ್ತಿರವಾದಂತೆ
ಉರಿಯುವುದು ಹೆಚ್ಚೆಚ್ಚು!

-


26 DEC 2022 AT 22:54

ಬಿಸಿಯ ನಶೆಯೇರಿಸೊ ಚಹಕಿಂದು
ಹಿತ್ತಾಳೆಯ ಹೊದಿಕೆ

ಆದರೂ... ಅದಕೆ

ನಿತ್ಯವೂ ತನ್ನ ಹಿಡಿವ ಅವನ ಕೈ
ಅತ್ತ ಸರಿದರೆಂಬ ಹೆದರಿಕೆ!

-


30 SEP 2022 AT 0:39

ಮನ ಸೋತಿದೆ
ನೋಡಿ ನಿನ್ನಯ ಲಜ್ಜೆ

ಅದರ ಗುರುತಲ್ಲವೇ?
ನಾ ಕಟ್ಟಿದ ಕಾಲ್ಗೆಜ್ಜೆ

-


12 APR 2022 AT 8:44

ನಿನ್ನ‌ ನೆನಪುಗಳ ಹನಿಯೊಂದ
ಹೊರ ಹಾಕುತಲಿರುವಾಗ
ಮತ್ತೆ ಇಂಗಿ ಹೋಯಿತು
ಕೆನ್ನೆಗಳ ಮರುಭೂಮಿಯಲಿ

-


Fetching Vinaya Hegde Quotes