ಆಹ್ಲಾದ! 💙   (ಹರ್ಷಿತ.ಆರ್)
4.2k Followers 0 Following

Joined 27 August 2017


Joined 27 August 2017
28 MAR 2023 AT 9:56

ನಾಲ್ಕು ನಲವತ್ತಾಗಿ, ನಾನೂರಾಗಿ, ನಾಲ್ಕು ಜನುಮಗಳೇ
ಕಳೆದರೂ ನನ್ನಾತ್ಮ ನಿನ್ನನ್ನೇ ಅರಸುವುದು.....♡

-


28 MAR 2022 AT 22:05

ದೇಹದಿಂದ ದೂರಿದ್ದು ಆತ್ಮದಿಂದ ನನ್ನೆರಳಾಗಿ ಸದಾ ನನ್ನೊಡನಿರುವವನ ಪರಿಚಯಕೆ ಮೂರು ಮುತ್ತಿನಂತ ವರುಷಗಳು!!

•💞🫂•



— % &

-


24 JAN 2022 AT 22:05

ಅದೆಷ್ಟೋ ಅರ್ಧ ಸತ್ತ ಭಾವನೆಗಳ
ಆಕ್ಸಿಜನ್ ಕೊಟ್ಟು ಉಳಿಸಿದ್ದೆ
ನಿನ್ನಿಂದ ಮರುಜೀವ ಪಡೆಯುತ್ತವೆಂದು
ಪಾಪ! ಅವು ಕೊಳೆತು ನಾರುತ್ತಿರುವುದು
ನನ್_ಮೂಗಿನವರೆಗೇ ತಲುಪಲಿಲ್ಲ
ಇನ್ನು ನಿನ್_ಕಣ್ಣಿನೆದುರಂತೂ..
ಸಾಕು ಬಿಡು ಮತ್ಮತ್ ಯಾಕೆ!
ಅದೇ ಹೊಸ-ಹಳೇ ಕ್ಯಾಸೆಟ್....

-


23 JAN 2022 AT 22:57

ಅಲ್ಲೇ ಮರೆಯಾಗಿದ್ದೆಯಲ್ಲ ಅದೇ..
ನನ್ನ ಕಣ್ಣಂಚಿನ ದೂರದ ಮೂಲೆಯಲ್ಲಿ
ದಯಮಾಡಿ ಹಾಗೆಯೇ ಹೊರಟಿಬಿಡು
ಮತ್ಮತ್ತೆ ನನ್ನೆದೆ ಸೂಜಿ ನೋವನ್ನ
ಸಹಿಸಿಕೊಳ್ಳುವಷ್ಟು ಮಂದವಾಗಿಲ್ಲ;
ಮತ್ತಾ ಸೂಜಿಯಂತೂ ನನ್ನೆದೆ ಪೂರಾ
ಹರಿದೋಗೋವರೆಗೂ ಮೊಂಡಾಗುವುದಿಲ್ಲ!

-


20 JAN 2022 AT 16:19

ಹುಟ್ಟು-ಸಾವು, ಏಳು-ಬೀಳು, ಕನಸು-ನನಸು, ಮಾತು-ಮೌನ ಎಲ್ಲಕ್ಕೂ ದನಿ_ಯಾದದ್ದು/ಯಾಗೋದು ಅದೇ....

ನನ್_ಕನ್ನಡ!
💛
❤️


(ಅಡಿಬರಹ)

-


14 OCT 2021 AT 0:02

ನನ್ನನ್ನೇ ಹೋಲೋ ನಾನಲ್ಲ; ಅವಳು!

【Mirror】
•💞•

-


24 SEP 2021 AT 19:32

ಒಂದಿಷ್ಟು ಒಲವ ಕಿಲೋ ಲೆಕ್ಕದಲ್ಲಿ ಮಾರಲಿಡು ಸಖ
ಇಡೀ ಅಂಗಡಿಯನ್ನೇ ಕೊಂಡುಕೊಳ್ಳುವೆ ಪ್ರೀತಿಯನ್ನಡವಿಟ್ಟು!

-


8 AUG 2021 AT 15:13

ಹುಟ್ಟಿದಬ್ಬದ ಆತ್ಮೀಯ ಶುಭಾಶಯಗಳು ಅಣ್ಣಯ್ಯ..

ಬರಹಕ್ಕೂ ಸಂತುಷ್ಟಿ ಭಾವ ಕೊಟ್ಟವರು ನೀವು!
ನಂಬಿಕೆಯ ಬೆಳಕಾಗಿ, ಕಾಳಜಿಯ ಪ್ರತಿರೂಪವಾಗಿ
ಪ್ರೀತಿಯ ಹೊನಲಿನಲ್ಲಿರುವ ಅಪರೂಪದ ಮುತ್ತು ನೀವು
ಅವಳೆಡೆಗಿನ ಪ್ರೇಮದೊಲವ ಗೀಚುತ್ತಾ ಅಕ್ಷರಗಳಿಗೆ
ನಿಮ್ಮನ್ನು ನೀವೇ ಸಮರ್ಪಿಸಿಕೊಂಡಿದ್ದೀರಿ..
ಹೀಗೇ ಅನಂತದವರೆಗೂ ನಕ್ಕು ನಲಿಯುತ್ತಾ,
ಗೀಚುತ್ತಾ, ಎಲ್ಲರೊಂದಿಗೂ ಬೆರೆಯುತ್ತಾ,
ಸುಖದಿಂದಿರಿ ಅಣ್ಣಯ್ಯ.

ಬರಹದೊಳಗಿನ ಭಾವವ ಜೀವಿಸುವ ಬೇಂದ್ರೆಪ್ರಿಯರಿಗೆ
ಹೆಚ್ಚೆಚ್ಚು..ಕೊನೆಯಿರದಷ್ಟು ಒಳಿತಾಗಲಿ
ಕೆಟ್ಟದ್ದೆಂಬುದು ನಿಮ್ಮ ನೆರಳನ್ನೂ ತಾಕದಿರಲಿ.
ಬದುಕ ಪಯಣದ ಕೊನೆಯವರೆಗೂ ತರ್ಪೂರ್ಣ
ಪೂರ್ಣವಾಗಿ ಒಟ್ಟಾಗಿಯೇ ಉಳಿಯಲೆಂದಾಶಿಸುವೆ..

ಇನ್ನೂ ಹೆಚ್ಚೆಚ್ಚು ಗೀಚುತ್ತಾ ಕನ್ನಡಕ್ಕೆ ಕೀರ್ತಿ ತರುವಂತವರಾಗಿ..
ಶುಭವಾಗಲಿ ನಿಮಗೆ ಶುಭವಷ್ಟೇ ಆಗಲಿ..!!

-


2 JUL 2021 AT 22:54

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ 🎂💐

ಬರವಣಿಗೆಯ ಲೋಕದಿ
ಸದಾಕಾಲಕ್ಕೂ ಮರೆಯಾಗದೆ
ಅಜರಾಮರವಾಗಲಿ
ನಿಮ್ಮಯ ಹೆಸರು!

ಬದುಕೆಂಬ ವಿದ್ಯಾಲಯದಲಿ
ಕನ್ನಡವ ಕಲಿಯುತ್ತಾ,
ಬಳಸುತ್ತಾ,ಕಲಿಸುತ್ತಾ,
ಕನ್ನಡಕ್ಕೂ ಹೆಮ್ಮೆ
ತರುವಂತಾಗಲಿ
ನಿಮ್ಮಯ ಜ್ಞಾನ!

ಹೆಚ್ಚೆಂದರೆ ಹೆಚ್ಚೇ ಆಗಲಿ
ನೋವಲ್ಲ, ನಲಿವು.
ಮರೆಯಾಗುವುದಾದರೆ ಮರೆಯೇ ಆಗಲಿ
ಸುಖವಲ್ಲಾ, ನಿಮ್ಮೆಲ್ಲಾ ಸಂಕಷ್ಟಗಳು!

ಇಪ್ಪತ್ನಾಲ್ಕು ಗಂಟೆಗಳ
ಐವತ್ತೆರಡು ವಾರಗಳ
ಪ್ರತಿವರುಷದ ಪ್ರತಿಕ್ಷಣವೂ ಅವಿಸ್ಮರಣೀಯವಾಗಿರಲೆಂದು
ಮನದುಂಬಿ ಆಶಿಸುವೆ!

-


20 JUN 2021 AT 23:56

ಹುಟ್ಟು ಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು ಅಪ್ಪಾ!! 👑❤️🌏

ಅರ್ಧಶತಕ-ವರುಷಗಳೀ ಪಯಣದಲಿ
ಅದೆಷ್ಟೋ ಸವಾಲುಗಳ ಎದುರಿಸಿದ್ದೀರಿ,
ಅದೆಷ್ಟೋ ಮುಖವಾಡಗಳ್ಹಿಂದಿನ ಮುಖವ ಕಂಡಿದ್ದೀರಿ,
ಅದೆಷ್ಟೋ ಕಿರಿಯರಿಗೆ ಮಾರ್ಗದರ್ಶನ ನೀಡಿದ್ದೀರಿ,
ಅದೆಷ್ಟೋ ಸೋಲುಗಳ ದಾಟಿ ಗೆಲುವೆಂಬ ಬೆಳಕಲ್ಲಿ ರಮಿಸಿದ್ದೀರಿ,
ಅದೆಷ್ಟೋ ಒಡಲಾಳದ ನೋವುಗಳ ಒಬ್ಬರೇ ನುಂಗಿದ್ದೀರಿ,
ಅದೆಷ್ಟೋ ಅಪರಿಮಿತ ಬಯಕೆಗಳ ಮನದಲ್ಲೇ ಬಚ್ಚಿಟ್ಟಿದ್ದೀರಿ,
ಅದೆಷ್ಟೋ ಸಂತಸದ ಕ್ಷಣಗಳ ಮನೆವರಿಗೆಲ್ಲಾ ಹಂಚಿದ್ದೀರಿ,
ಅದೆಷ್ಟೋ ಬಾರಿ ಪ್ರೀತಿ, ಕಾಳಜಿಯ ತೋರ್ಪಡಿಸಲಾಗದೆ ಚಡಪಡಿಸಿದ್ದೀರಿ,
ಅದೆಷ್ಟೋ ಬದುಕಿನ ಪಾಠವ ನಾ ನಿಮ್ಮಿಂದ ಎನ್ನುವುದಕಿನ್ನ ನಿಮ್ಮ ನೋಡೇ ಕಲಿತಿದ್ದೀನಿ!

ಈ ಬಂಧ ಎಂದೂ ಅಳಿಯದೇ ಹೀಗೆಯೇ ಉಳಿದುಬಿಡಲಿ ಅಪ್ಪ..
ನಿಮ್ಮೊರತಾದ ಜಗತ್ತಿನ ಪರಿಕಲ್ಪನೆಯ ಬಾಗಿಲಿನ ಬಳಿಯೂ,,
ಹೋಗುವ ಆಸೆಯಾಗಲೀ, ಧೈರ್ಯವಾಗಲಿ ಎರಡೂ ನನ್ನಲ್ಲಿಲ್ಲ!
ನೀವೆನ್ನ ಪರಪಂಚ ಎಂದರಷ್ಟೇ ಸಾಲದು;
ನೀವೇ ನನ್ನ ಬದುಕ ನಂದಾದೀಪ!
ನಿಮ್ಮೆಡೆಗಿನ ನನ್ನ ಪ್ರೀತಿ ಅನಂತವಾದದ್ದು
ಅದಕ್ಕಾವ ಬಿಂಕು ಬಿನ್ನಾಣಗಳು ಬೇಕಿಲ್ಲ
ಆಣೆ ಪ್ರಮಾಣವೂ:)

ನನ್ನ ಬದುಕಿನ ಶಿಕ್ಷಣದ ಶಿಕ್ಷಕರು ನೀವು
ನನ್ನ ಖುಷಿಯ ಮಂತ್ರ ನೀವು, ನನ್ನೋವ ಮರೆಸೋ ಚಿಕಿತ್ಸಕ ನೀವು
ನನ್ನೇಳಿಗೆಯ ಬೆನ್ನೆಲುಬು ನೀವು, ನನ್ನಾಸರೆಯ ಹೆಗಲು ನೀವು..!!
ಸದಾಕಾಲಕ್ಕೂ ಹೀಗೇ ನಗು ನಗುತ್ತಾ ಸಂತಸದಿಂದಿರಿ ನನ್ನಾತ್ಮದ ದೈವ..
ನಿಮ್ಮನ್ನು ಅನಂತದವರೆಗೂ ಸುಖವಾಗಿಡಲೆಂದು ಗಣೇಶನಲ್ಲಿ ಅನುಕ್ಷಣವೂ ಪ್ರಾರ್ಥಿಸುವೆ..!! ❤️

-


Fetching ಆಹ್ಲಾದ! 💙 Quotes