ಈಗಲೂ ನೆನಪಿದೆ ಆ ನಗು, ಆ ಮಾತು
ಕಳೆದೋಗಿದ್ದೆ ಅಂದು ಆ ತುಂಟ ನಗುಭರಿತ ಮಾತಿಗೆ
ಇನ್ನೂ ಜೀವಂತ ಆ ಮಾತುಗಳು ಈ ಹೃದಯದ ಒಳಗೆ
ಮರೆಯೆನು ಎಂದೂ ಆ ತುಂಟ ನೋಟವ
ಅದೇ ಇಂದಿಗೂ ನನ್ನೆದೆಯಲಿ ಅರಳಿಸುವುದು ಒಲವಿನ ಪುಳಕವ — % &-
ಹೇ ಇವನೇ ಕೇಳಿಲ್ಲಿ...
ಎದೆಯಾಳದಲ್ಲಿ ನಿನಗಾಗಿ ತುಡಿಯುತ್ತಿರುವ ಒಲವ ಒಪ್ಪಿಕೋ ನನ್ನೊಲವೆ...— % &-
ನೀನೋ... ಅಂದಾಡಿದ ಮಾತುಗಳ ಮರೆತು ಕುಂತಿರುವೆ
ಆದರೆ,ಆಕೆಗೆ ಆ ಮಾತುಗಳೇ ಮುಖದಲ್ಲಿ ನಗುವರಳಿಸುವ ಸೆಲೆಯಾಗಿದೆ...-
ಸಹಜ ಸ್ನಿಗ್ಧ ಸುಂದರಿ...
ಮನಸೂರೆಗೊಂಡಿರುವ ವೈಯಾರಿ...
ಸೌಂದರ್ಯದ ಗಣಿ...
ಮೋಹಕ ಕೃಷ್ಣವೇಣಿ...
ಕಾತರಿಸುತಿದೆ ಮನ...
ಸವಿಯಲು ಹನಿಜೇನ...
ಸೋತಿರುವೆ ಚೆಲುವೆ...
ಮುದ್ದಿನ ನನ್ನೊಲವೆ...
-
ತಿಳಿದೆ ನಾನು, ನೀನು ನನ್ನವನೆಂದು..
ಹೋದೆ ನೀನು, ನಾನವನಲ್ಲವೆಂದು..
ಕಾದೆ ನಿನಗಾಗಿ ಮರಳಿ ಬರುವೆಯಾ ಎಂದು..
ಕೊನೆಗೂ ಕಾಣದೆ ಹೋದೆ ನಿನ್ನ ಆಗಮನವನ್ನು..
-
ನನ್ನ ಮುದ್ದು ಸಹೋದರಿ ಈಕೆ
ನನ್ನೆಲ್ಲಾ ನೋವು ನಲಿವಿಗೂ ಜೊತೆಯಾಗುವಾಕೆ
ತನ್ನವರಿಗಾಗಿ ಬಾಳ ಸವೆಸುತಿರುವಾಕೆ
ನಗುನಗುತ್ತಲೇ ನೋವ ಮರೆಯುವಾಕೆ
ಹೆತ್ತಮ್ಮ ಬೇರೆಯಾದರೂ ಪ್ರೀತಿಗಿಲ್ಲಿ ಬರವಿಲ್ಲ
ನಮ್ಮ ಪ್ರೀತಿಯ ಕಂಡು ಕರುಬುತ್ತಿರುವರೆಲ್ಲ
ಯಾರ ಕಣ್ಣೂ ಬೀಳದಿರಲಿ ನಮ್ಮಿಬ್ಬರ ಪ್ರೀತಿಗೆ
ಏನೇ ಆದರೂ ಬೇರೆಯಾಗದು ನಮ್ಮಿಬ್ಬರ ಬಂಧವು
ಇವಳು ಹೋದಲೆಲ್ಲಾ ನಗುವಿನದೇ ಹಬ್ಬವು
ಇವಳ ಜೊತೆಯಲ್ಲಿದ್ದರೆ ನಾನಾಗುವೆ ಪುಟ್ಟ ಮಗುವು
ಬಾಲ್ಯದಲಿ ನೀಡಿದ ಪ್ರೀತಿಯ ಮರೆಯಲುಂಟೆ
ಬಯಸುವೆನು ಇನ್ನೊಮ್ಮೆ ಆ ಬಾಲ್ಯ ಮರಳಿ ಬರಲೆಂದು
ಜನುಮದಿನವಿಂದು ಈಕೆಗೆ ಹಾರೈಸಿ ಎಲ್ಲರೂ
ನೂರ್ಕಾಲ ನಗುನಗುತಾ ಬಾಳು ನೀ ಎಂದಿಗೂ
ನಿನಗಿರುವ ಕಷ್ಟವೆಲ್ಲಾ ಕರಗಿ ನೀರಾಗಲಿ
ಕೊರಗಜ್ಜನ ಆಶೀರ್ವಾದವು ಸದಾ ನಿನ್ನ ಜೊತೆಗಿರಲಿ-
ಅದೆಷ್ಟೇ ನೋವಿದ್ದರೂ ಮನದಲ್ಲಿ
ತಾಯಿಯ ಮೊಗ ಕಂಡೊಡನೆ ಮಾಯವಾಗುವುದು ಕ್ಷಣದಲ್ಲಿ-
ಹತ್ತಿರವಿದ್ದು ದೂರವಿರುವ ಪರಿಚಿತರಿಗಿಂತ
ದೂರವಿದ್ದೂ ಹತ್ತಿರವಾಗಿರುವ ಅಪರಿಚಿತರ ಸ್ನೇಹವೇ ಉತ್ತಮ-
🌹ಹುಟ್ಟುಹಬ್ಬದ ಶುಭಾಶಯಗಳು🌹🌹
❤❤❤❤❤❤❤❤❤❤❤
😍ಕವಿತೆಗಳ ಸರದಾರ😍
🥰ಕನಸ ಕಾಣೋ ಕನಸುಗಾರ🥰
🤩ಭಾವ ತುಂಬಿದ ಬರಹಗಾರ🤩
💞ಅಪ್ಪ ಅಮ್ಮನ ಮುದ್ದಿನ ಕುವರ💞
😘ನನ್ನೊಲುಮೆಯ ಸಹೋದರ😘
🎉ಜನುಮದಿನವಿಂದು ನಿನ್ನದು🎉
🌹ಸಂತಸದಿ ಹಾರೈಸುವೆ ಶುಭಾಶಯ ನಾನಿಂದು🌹
❤❤❤❤❤❤❤❤❤❤❤❤❤
💗ಗೆಳತಿಯರ ಬಳಗದ ಒಬ್ಬನೇ ತಮ್ಮಯ್ಯ💗
💓ಸಹೋದರಿಯರ ಮುದ್ದಿನ ಅಣ್ಣಯ್ಯ 💓
😛ಕೋಪವಿರುವುದು ಮೂಗಿನ ತುದಿಯಲಿ😛
💖ಆದರೂ ಪ್ರೀತಿಗೇನು ಕೊರತೆಯಿರದು💖
😇ಎಲ್ಲರ ನಗುವ ಬಯಸೋ ಮನಸಿವನದು😇
😊ತಿಳಿದರಷ್ಟೇ ಅರಿವುದು ಇವನ ಮನವೇನೆಂಬುದು
❤❤❤❤❤❤❤❤❤❤❤
-