ಬರೆಯ ಹೊರಟೆ ಕೆಲವು ಸಾಲುಗಳಲಿ ನಿನ್ನ ಪ್ರೀತಿಯ ಲಹರಿ
ಕಿರು ಹನಿಯೊಂದು ತಣಿಸಿತು ಕೆನ್ನೆಯ,ಕಣ್ಣಂಚಿಂದ ಜಾರಿ.-
ವಿದ್ಯಾವಂತಳಾದ ಮಗಳ
ಮುಂದೆ
ಅಪ್ಪ ಸುಮ್ಮನಿದ್ದ,
ಮದುವೆಯ ದಿನ
ಅಪ್ಪನ ಜವಾಬ್ದಾರಿಯುತ
ವಿದ್ಯೆಯನ್ನು ಅರಿತುಕೊಂಡು,
ಮಗಳ ಕಣ್ಣೀರು ಒರತೆಗಳ
ರೂಪದಲ್ಲಿ ಹರಿಯುತ್ತಲೇ ಇತ್ತು.
ಕೊನೆಗೆ ಮಗಳ ಧ್ವನಿ ಹೀಗಿತ್ತು!!
ಕ್ಷಮಿಸು ಅಪ್ಪಾ,,,,
"ಅಕ್ಷರಸ್ಥ" ಅಪ್ಪನ_ ನಿಜವಾದ ಪ್ರೀತಿ
"ಅನಕ್ಷರಸ್ಥ" ಮಗಳಿಗೆ ತಿಳಿಯದಾಯಿತು.-
ನನ್ನ ಮುಗಿಲೆತ್ತರ ಕನಸುಗಳಿಗೆ ಎಣಿಯಾಗಿರುವಿರಿ
ನಿಮ್ಮ ಹೆಗಲಲ್ಲಿ ಲೋಕವ ಪರಿಚಯಿಸುವಿರಿ
ನೋವೆಂದಾಗ ತಾಯಿಯಾಗುವಿರಿ
ಮಕ್ಕಳೇ ನನ್ನ ಸರ್ವಸ್ವವೆನ್ನುವಿರಿ
ನಮ್ಮಯ ನಗುವಲ್ಲಿ ನಿಮ್ಮ ನೋವ ಮರೆಯುವಿರಿ
ಮುಗುಳು ನಗೆಯಲ್ಲಿ ನಿಮ್ಮ ಕಷ್ಟಗಳ ಮರೆಮಾಚುವಿರಿ
ಅಪ್ಪ ನಿವೇ ನನ್ನ ಪ್ರಪಂಚವಾಗಿರುವಿರಿ
-
ಪುಟ್ಟ ಹೆಜ್ಜೆ ,ದೊಡ್ಡ ಕನಸು..
ಅಪ್ಪನೆಂಬ ಸಿಹಿ ಮನಸು..
ಅಪ್ಪ ನನ್ನಮ್ಮನಂತೆ!!
ಸದಾ ಮುಗ್ಧ ಕೂಸು..
ನನ್ನ ಮೊದಲ ಹೆಜ್ಜೆಗೆ ನಕ್ಕು..
ಎಡವಿದಾಗ ಕೈ ಹಿಡಿದು ನಡೆಸಿ,
ಮುತ್ತಿಟ್ಟ ಹಣೆ ಇಂದು ನಗುತಿದೆ.
ತಪ್ಪು ಹೆಜ್ಜೆಗಳೂ ಮುದ ನೀಡಿವೆ...!
ಕೂಡಿಟ್ಟಂತ ಕನಸುಗಳಿಂದು ನನಸಾಗಿವೆ..
ಕಾಲುದಾರಿಯಲಿ ಹೆಜ್ಜೆಗಳು ಸಾಗುತಿವೆ..
ಅಪ್ಪನ ಎದೆಗವಚಿ ನಿದ್ದೆ ಹೋದಂತ ನೆನಪಲಿ..
ನನ್ನ ಕಾಲ್ಗೆಜ್ಜೆಯ ದನಿಗೆ ಅಪ್ಪ ನಕ್ಕಂತ ನಗುವಲಿ...!!-
ಮಗಳೇ ನೀನೀಗ ಸ್ವಾಭಿಮಾನಿ
ನಾನಿಲ್ಲದೆ, ನನ್ನ ಪ್ರೀತಿಯಿಲ್ಲದೆ
ನನ್ನ ಸಿಡುಕು ಮಾತಿಲ್ಲದೇ
ನನ್ನ ರಕ್ಷಣೆಯು ಇಲ್ಲದೇ ಬದುಕಬಲ್ಲೇ
ಆದರೆ ನೀನಿರದೆ, ನಿನ್ನ ಮಾತಿಲ್ಲದೇ
ನಿನ್ನ ನಗುವಿಲ್ಲದೆ, ನಾ ಜೀವಂತ ಶವವಷ್ಟೇ...
ಪ್ರೀತಿಯ ಹೆಸರಲ್ಲಿ ಎಲ್ಲವನ್ನು ದಿಕ್ಕರಿಸಿ
ಹೊರ ನಡೆದ ನಿನಗೆ ಹೆತ್ತು ಹೊತ್ತು ತುತ್ತು ನೀಡಿ
ದೃಢತೆಯ ತುಂಬಿ ಬದುಕ ನೀಡಿದ
ಈ ಅಂತಃಕರಣದಲ್ಲಿ ಪ್ರೀತಿ ಕಾಣದೇ ಹೋಗಿದ್ದು
ವಿಪರ್ಯಾಸವಲ್ಲದೇ ಮತ್ತೇನು..?
ನನ್ನ ಮುಪ್ಪಿನ ಇಳಿ ಸಂಜೆಯಲ್ಲಿ
ನೀ ದಾರಿ ತಪ್ಪಿ ಈ ಅಪ್ಪನ ಬಳಿಗೆ
ಬಂದರೇ, ನನ್ನ ಹೂತು ಹೋದ
ಕಣ್ಣಲ್ಲೊಮ್ಮೆ ಇಣುಕಿ ನೋಡು
ನಿನ್ನಾಡಿಸಿ ಮುದ್ದಿಸಿ ಬೆಳೆಸಿದ
ಅಪ್ಪನ ಪ್ರೀತಿ ತುಸುವಾದರು ಕಾಣಸಿಕ್ಕರೆ
ಕಿವಿಯಲೊಮ್ಮೆ ಅಪ್ಪಾಆಆ
ಎಂದೊಮ್ಮೆ ಎದೆತುಂಬಿ ಕರೆಯುವೆಯಾ
..............ಇಂತಿ ನಿನ್ನ ನತದೃಷ್ಟ ಅಪ್ಪ
--Chand Bhat ❤️-
👧: ಅಪ್ಪಾ, ನಿನ್ನ ಹೆಗಲ ಅಂಬಾರಿಯಲ್ಲಿ ಕುಳಿತು ಜಗತ್ತು ಕಾಣುವಾಸೆ..
👨: ಕೇಳುವುದೇನಿದೆ.!? ಏರು ಬಾ ಈ ಜೀವ ನಿನಗಾಗಿ ಕೂಸೇ....-
ಅಪ್ಪ ಯಾಕೊ ಹಿಂದೆ ಉಳಿದು ಬಿಟ್ಟ....
- ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕುತ್ತಾಳೆ ಅಮ್ಮ,,
ಇಪ್ಪತೈದು ವಷ೯ ಬೆಳೆಸುತ್ತಾನೆ ಅಪ್ಪ ಆದರೂ ಏನನ್ನು ಹೇಳದೆ ಹಿಂದೆ ಉಳಿದು ಬಿಟ್ತಾನೆ..
- ಜೀತ ತೆಗೆದುಕೊಳ್ಳದೆ ಜೀವನ ಪೂತಿ೯ ಮನೆಗಾಗಿ ದುಡಿತಾಳೆ ಅಮ್ಮ,,
ತನ್ನ ಜೀತನೆ ಮನೆಗೆ ಖಚು೯ಮಾಡ್ತಾನೆ ಅಪ್ಪ.ಇಬ್ಬರೂ ಶ್ರಮ ಪಟ್ಟು ಸಮನಾಗಿ ದುಡಿದರೂ ಅಪ್ಪ ಯಾಕೊ ಹಿಂದೆ ಉಳಿದು ಬಿಡ್ತಾನೆ..
- ಎಷ್ಟು ಬೇಕಾದ್ರು ಊಟ ಮಾಡೊ ಕಂದ ಅನ್ನುವ ಅಮ್ಮ,,
ಬೇಕಾದ್ದು ತಗೊ ಎಂದು ಹೇಳುವ ಅಪ್ಪ .ಇಬ್ಬರ ಪ್ರೀತಿನು ಸಮವಾಗಿದ್ರು ಅಪ್ಪ ಯಾಕೊ ಹಿಂದೆ ಉಳಿದು ಬಿಟ್ಟ..
- ಫೋನ್ ಅಲ್ಲು ಅಮ್ಮ ಏಟು ಬದ್ದಾಗಲು ಅಮ್ಮ ಎಂದು ಕರಿತೀವಿ,,
ಅವನ ಪ್ರೀತಿಯ ಉಯ್ಯಾಲೆಯಲ್ಲೆ ತೂಗೊ ಅಪ್ಪ. ಅವನ ಹೆಸರು ಕೂಗಿಲ್ಲ ಎಂದು ಯಾವತ್ತು ಕೊರಗಲ್ಲ ಅವಾಗ್ಲು ಹಿಂದೆ ಉಳಿದು ಬಿಟ್ಟ ಅಪ್ಪ..
- ಅಮ್ಮನಿಗೆ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳು ಬೀರೋವಿನಲ್ಲಿ,,
ಆದರೆ ಅಪ್ಪನ ಬಟ್ಟೆಗಳು ಅಲ್ಲಲ್ಲಿ ತೇಪೆ ಬಿದ್ದ ಸೂಜಿದಾರದ ಬರೆಗಳು ಅವಾಗ್ಲು ಅಮ್ಮನ್ನೆ ಮುಂದೆ ಬಿಟ್ಟು ಅಪ್ಪ ಹಿಂದೆ ಉಳಿದು ಬಿಟ್ಟ..
ವಯಸ್ಸಾದ ಮೇಲೆ ತನ್ನಮ್ಮ ಮನೆ ಕೆಲಸ ಮಾಡ್ತಾಳೆ ಎಂದು ಸುಮ್ಮನಿರುವ ಮಕ್ಕಳು,ಅಪ್ಪ ಸುಮ್ಮನೆ ಮನೇಲಿ ಕೂರುತ್ತಾನೆ ಊಟಕ್ಕೂ ದಂಡ ಅಂದು ಕೊಳ್ಳುವ ಕೆಲ ಮಕ್ಕಳು ಹಂತ ಹಂತವಾಗಿ ಸಾಯಿಸಿಬಿಡ್ತಾರೆ,ಅಪ್ಪ ಸಾವಿನಲ್ಲಿ ಮುಂದೆ ಹೋಗಿ ಅಮ್ಮನನ್ನ ಹಿಂದೆ ಉಳಿಸಿ ಬಡ್ತಾನೆ....
ಹೀಗೆ ಅಪ್ಪ ಎಲ್ಲಾ ವಿಷಯದಲ್ಲು ತನ್ನ ಸಂಸಾರಕ್ಕಾಗಿ ಹಿಂದೆ ಉಳಿದು ಬಿಡ್ತಾನೆ..........
-
ಮಗಳಿರಬೇಕು ಮನೆಯಲ್ಲಿ
ಅಪ್ಪ ಎಂದು ಹಸಿವು ಅನ್ನುವುದಿಲ್ಲ.
ಮಗಳಿರಬೇಕು ಜೊತೆಯಲ್ಲಿ
ಅಪ್ಪ ಎಂದು ಏಕಾಂಗಿಯಾಗುವುದಿಲ್ಲ.
ಮಗಳಿರಬೇಕು ನಮ್ಮ ಬದುಕಲ್ಲಿ.
ಸಾಯುವವರೆಗೂ ತಾಯಿಯ
ಕೊರತೆ ಬರುವುದಿಲ್ಲ
ಮಗಳೆಂದರೆ ಮನೋಬಲ
ಮಗಳೆಂದರೆ ಜವಾಬ್ದಾರಿ
ಮಗಳೆಂದರೆ ವಾತ್ಸಲ್ಯ.-
ಜಗವೇ ನಿನ್ನ ಕಣ್ಣಂಚಿನ ಕವಿತೆ ಶಿಕಾರಿ....
ಜೋಗದ ಸಿರಿ ನಿನ್ನ ಕಣ್ಣಂಚಾಗಿ ತೋರಿ....
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪೋರಿ....
ಶಶಿವದನು ನಾಚಿ ನೀರಾಗುವ ಸೌಂದರ್ಯ ಲಹರಿ....
ಸುಡುವ ಸೂರ್ಯನು ನಿ ಬರಲು ಹೋಗುವನು ಹಾರಿ....-