ನೋವು ನಲಿವ ನಡುವಲ್ಲಿ
ತಾಯಿಯಾಗಾಗುವ ಭಾಗ್ಯವಿರಲು
ನಿನ್ನ ಆಗಮನದ ನಿರೀಕ್ಷೆಯೊಳು
ನನ್ನೊಳು ತಾಯಿತನದ ಪ್ರೀತಿ ತುಂಬಿದೆ.
ನಿನ್ನೊಡನೆ ಮಾತನಾಡಬೇಕೆಂದು ನನ್ನಲ್ಲಿ
ಹಲವಷ್ಟು ಭಾಷೆ ಅಡಗಿರಲು
ನಿನ್ನ ನೋಡುವ ತವಕದೊಳು
ನನ್ನಿ ಹೃದಯ ಮಿಡಿಯುತಿದೆ-
ಮಧುಮತಿ
(ಮಧುಮತಿ)
1.0k Followers · 191 Following
ಹೆಸರು ಪೂಜಾ ದೇಸಾಯಿ
1997 ರಲ್ಲಿ ಕನ್ನಡದ ಮಗಳಾಗಿ ಜನಿಸಿ
ಮೂಲತಃ ನಾನು ಉತ್ತರ ಕರ್ನಾಟಕದ ಕಲ್ಬುರ್ಗಿ ಹುಡುಗ... read more
1997 ರಲ್ಲಿ ಕನ್ನಡದ ಮಗಳಾಗಿ ಜನಿಸಿ
ಮೂಲತಃ ನಾನು ಉತ್ತರ ಕರ್ನಾಟಕದ ಕಲ್ಬುರ್ಗಿ ಹುಡುಗ... read more
Joined 6 January 2019
29 DEC 2023 AT 19:31
11 NOV 2023 AT 20:57
ಬೆಳಕೆಂದರೆ ನಗು ಸಹಜ
ಅದ ನೀಡುವದು ಪ್ರೋತ್ಸಾಹ
ಬೆಳಕಿನೊಂದಿಗೆ ನಡೆ ಮನುಜ
ಬೆಳಕೆಂದರೆ ಉತ್ಸಾಹ-
19 OCT 2023 AT 21:38
ನನ್ನಲ್ಲಿ ನಿನಗೇನು ಇಷ್ಟ ಗೆಳತಿ ಎಂದು ನೀ ಪ್ರತಿ ಬಾರಿಯು ಕೇಳಿದಾಗ ನಾ ಹೇಳುವುದೊಂದೆ ಗೆಳೆಯ ಮೊದಲ್ನೋಟದ ಮಾತಲ್ಲಿ ನಿನ್ನ ನಗುಮೊಗದ ಮೇಲೆ ಒಲವಾಗಿತ್ತು ಎಂದು....
-
20 JUL 2022 AT 19:43
ಏಕೋ ನಾ ಕಾಣೆ ಗೂಡಲ್ಲಿ
ಸೆರೆಯಾದಂತೆ ಭಾಸವಾಗಿದೆ ಮನಕಿಂದು
ಗರಿಬಿಚ್ಚಿ ಹಾರಬೇಕೆನ್ನಲು ಬಂಧನದ
ಗಂಟು ತಡೆಹಿಡಿದಂತಾಗಿದೆ ನನಗಿಂದು-
20 JUL 2022 AT 18:35
ನೀ ಏಕೆ ನನ್ನವನಾದೆ ಇನಿಯ
ಮನದೊಳು ಸಂತಸದ ಸುರಿಮಳೆಯೇ ಆಗಿದೆ
ನಿನ್ನಯ ಹೃದಯದಿ ನೀ ಎನ್ನ ಸೆರೆಹಿಡಿದಿರಲು
ನಿನ್ನೊಡನೆ ಕಳೆಯುವ ಸಮಯವೆಲ್ಲವೂ ವಿಸ್ಮಯವಾಗಿದೆ-
26 JUN 2022 AT 17:47
ನಿನ್ನ ಚರಣದೊಳ್ ಎನ್ನ ಚಿತ್ತವಿಡುವೆ
ಮನ್ನಿಸಿ ಮಮತೆಯ ತೋರುವೆಯೋ
ಮುನಿಸಿಕೊಂಡು ಪರೀಕ್ಷಿಸುವೆಯೋ
ಇದ ನಾ ಅರಿಯೆ....
ಪ್ರಶ್ನೆಗಳ ಪುಷ್ಪಮಾಲೆಯ ನಿನಗರ್ಪಿಸಿರಲು
ಉತ್ತರವ ಅನುಗ್ರಹಿಸು ತಂದೆ ಎಂದಷ್ಟೇ ಪೆಳುವೆ-