ನಿಮ್ಮೊಳಗೊಬ್ಬ ನಾರಾಯಣ  
76 Followers · 34 Following

Joined 25 October 2018


Joined 25 October 2018

ಸಕಲ ಜೀವರಾಶಿಗಳನ್ನು ಪೋಷಿಸುವ ರೈತ ನೆಮ್ಮದಿಯಾಗಿಲ್ಲ ಎಂಬುದೇ ದುರಂತ.

ರೈತ ವ್ಯಾಪಾರಿಯಾದಾಗ ಮಾತ್ರ ಅವರ ಬದುಕಿಗು ಒಂದು ಮಹತ್ವ.

-



ಷಡ್ಯಂತ್ರಗಳು ಫಲಿಸಬಹುದು

ಆದರೆ ಅದೆಂದಿಗೂ ಶಂಡತನ ಎನ್ನಿಸಿಕೊಳ್ಳುತ್ತದೆ

-



ನನಗಿಂತ ಹೆಚ್ಚು ನಿನ್ನನ್ನೆ ಅವಲಂಬಿತವಾಗಿದೆ ಮನಸ್ಸು.

ಅದಕ್ಕೆ ಆಗಾಗ ಮುನಿಸು

-



ನನ್ನ ವಿದ್ಯೆ ಬಗ್ಗೆ ಕೀಳಿರಿಮೆ ಇಲ್ಲ.
ಸಿಕ್ಕಷ್ಟನ್ನೆ ಬೆಟ್ಟದಷ್ಟು ಉಪಯೋಗಿಸಿಕೊಳ್ತಿನಿ.

ನನ್ನ ಅಹಂಕಾರದ ಬಗ್ಗೆ ಕೀಳಿರಿಮೆ ಇದೆ ನನಗಿಂತ ಅರ್ಹರಿಗೆ ಇಲ್ಲದ್ದು ನಾನು ಹೊತ್ತು ಮೆರೆಸುತ್ತಿರುವೆ ಎಂದು.

-



ಬದುಕೆ ಸವೆಸಿ ಬೆಳಕು ತುಂಬಿದಾಗಲೇ
ದೀಪಗಳು ಕೂಡ ನಗುವುದು.

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

-



ನಕ್ಕಿದ್ದು ನಾನೇ ನೊಂದುಕೊಂಡಿದ್ದು ನಾನೇ.
ನಿನ್ನದೇನಿಲ್ಲಾ ನೀ ನನ್ನ ಪ್ರತಿಬಿಂಬ ಆಗಿದ್ದೆ ಅಷ್ಟೆ.

ಆಹಾ ಅದೆಷ್ಟು ಚೆಂದ ನಗುತ್ತಿದ್ದಾರೆ ಎಂಬ ಸಂಭ್ರಮ ನನ್ನದಾದ್ದರೆ. ಆ ನಗುವಿನಲ್ಲಿ ಇರುವ ಬಗೆಯನ್ನು ಅರಿಯದ ಮೂರ್ಖತನವ ನೋಡಿ ಇನ್ನಷ್ಟು ಕುಹಕವಾಗಿ ನಕ್ಕರು.

ಯಾರೊ ಅಂಟಿಸುವ ಲೇಬಲ್ ನಾವಲ್ಲ ಅನಿಸಿದರು. ಆ ಲೇಬಲ್ ಗಳಲ್ಲಿ ನಾವು ಕಾಣುತ್ತಿರುವ ರೀತಿ ಬಿಂಬಿತವಾಗುತ್ತಿರುವ ರೀತಿ ನಮ್ಮ ವ್ಯಕ್ತಿತ್ವದ ಎಚ್ಚರಿಕೆಯೆಂಬುದನ್ನು ಮರೆತುಬಿಡುತ್ತೇವೆ.

ನಗು ವಂಗ್ಯ ಕುಚೋದ್ಯ ಹಾಸ್ಯ ಅಪಹಾಸ್ಯ ಕಿಡಿಗೇಡಿತನ ಹೀಯಾಳಿಸುವಿಕೆ ದ್ವೇಷ ಕುತಂತ್ರ ಎಲ್ಲದರೂ ಇದೆ. ನಕ್ಕವರೆಲ್ಲಾ ಸ್ನೇಹಿತರಲ್ಲ.


ಏನೆಂದು ದೂರಲಿ ನಾನೇ ಸರಿಯಿಲ್ಲದಿರುವಾಗ ಈ ಸಮಾಜವನ್ನ. ಸಂತಸಗಳನ್ನು ಹಂಚಿಕೊಳ್ಳುವುದು ಮತ್ತು ತೋರ್ಪಡಿಸಿಕೊಳ್ಳುವುದರ ವ್ಯತ್ಯಾಸ ಅರಿಯಬೇಕಿದೆ ನಾವೀಗ.😊

-



ಆಡ್ಕೊಳೊರನ್ನ ಮೆಟ್ಟಿಲು ಮಾಡ್ಕೊಳೊ ಧೈರ್ಯ ಇಲ್ಲದಿದ್ದರೆ ಅವರು ನಮ್ಮನ್ನ ಚಪ್ಪಲಿ ಮಾಡ್ಕೊತ್ತಾರೆ.

-



ನೊಂದೊಕೊಳ್ಳಲೆಂದೆ ಕೆಲವೊಂದನ್ನು ಇಷ್ಟ ಪಡುತ್ತೇವೆ.

ನೋವು ಕೂಡ ಇಷ್ಟವೆ ಇಲ್ಲಿ.😜

-



ಈ ಜಗತ್ತಿನಲ್ಲಿ ಯಾರನ್ನು ಧ್ವೇಷಿಸದೆ ಸರಳವಾಗಿ ಬದುಕಿಬಿಡಬಹುದು.

ಕೆಲವೊಂದನ್ನು ಅದ್ಭುತವಾಗಿ ನಿರ್ಲಕ್ಷಿಸುವುದನ್ನ ಕಲಿತರೆ.

-



ಈ ಬದುಕಲ್ಲಿ 99% ಕುಟುಂಬಕ್ಕೆ ಜವಾಬ್ದಾರಿಗೆ ಸಂಬಂಧಿಕರಿಗೆ ಸಮಾಜಕ್ಕೆ ಅಂತಾನೇ ಬದುಕ್ತಿವಿ.

ಇನ್ನೂಳಿದ 1% ಅಷ್ಟೇ ನಮಗಾಗಿ ಬದುಕೋದು.

ಆ 1% ಬದುಕೋದಕ್ಕೂ ಸಮಾಜದಿಂದ ನೂರೆಂಟು ಪ್ರಶ್ನೆ ನೂರೆಂಟು ಕುಹುಕಗಳು.

-


Fetching ನಿಮ್ಮೊಳಗೊಬ್ಬ ನಾರಾಯಣ Quotes