Malakappa Ingaleshwar   (ಮಾಸ್ಟರ್ ಮಲಕು)
62 Followers · 19 Following

read more
Joined 3 September 2018


read more
Joined 3 September 2018
9 JUN AT 0:44

ಈ ಕಥೆಯು ಮಲೆನಾಡಿನ ರೈತ ದಂಪತಿಗಳಾದ ಸುರೇಶ್ ಮತ್ತು ಗೌರಿಯರ ಸುತ್ತ ಸುತ್ತುತ್ತದೆ. ಒಂದು ವಿಚಿತ್ರ ಸನ್ನಿವೇಶದಲ್ಲಿ ಅವರು ಭೂಗತ ಲೋಕದ, ಅಂದರೆ ಕಳ್ಳಸಾಗಣೆ ಮತ್ತು ಅಪರಾಧಗಳ ಜಾಲಕ್ಕೆ ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆಯುವ ಘಟನೆಗಳು, ಓದುಗರನ್ನು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತವೆ. ಪುಸ್ತಕದ ಪ್ರತಿ ತಿರುವೂ ಕುತೂಹಲ ಕೆರಳಿಸುತ್ತದೆ. ಸುರೇಶ್ ಮತ್ತು ಗೌರಿ ಈ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ? ಈ ಭೂಗತ ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ? ಇವೆಲ್ಲ ಪ್ರಶ್ನೆಗಳು ನಮ್ಮನ್ನು ಕಥೆಯೊಳಗೆ ಸೆಳೆದು ಇಟ್ಟುಕೊಳ್ಳುತ್ತವೆ. ತೇಜಸ್ವಿ ಅವರು ಮಲೆನಾಡಿನ ಆಡುಭಾಷೆಯನ್ನು ಬಳಸಿ ಕಥೆಗೆ ಇನ್ನಷ್ಟು ನೈಜ ಸ್ಪರ್ಶ ನೀಡಿದ್ದಾರೆ. ನಾವು ಆ ಕಥಾಪಾತ್ರಗಳ ಜೊತೆಗೇ ಬದುಕುತ್ತಿರುವ ಅನುಭವ ನೀಡುತ್ತದೆ. ಮಲೆನಾಡಿನ ಪರಿಸರ ವರ್ಣನೆ, ದಟ್ಟ ಕಾಡುಗಳ ನಡುವಿನ ರೈಲು ಪ್ರಯಾಣ, ಮಂಜು ಮುಸುಕಿದ ಪರ್ವತಗಳು - ಇವೆಲ್ಲವೂ ಓದುವಾಗ ನಮ್ಮ ಕಣ್ಮುಂದೆ ಜೀವಂತವಾಗಿ ನಿಲ್ಲುತ್ತವೆ. ಇದು ಕಥೆಯೂ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶ ಮತ್ತು ಕಳ್ಳಸಾಗಣೆಯಂತಹ ಸಮಸ್ಯೆಗಳ ಕುರಿತೂ ಒಳನೋಟ ನೀಡುತ್ತದೆ. ಗೌರಿಯ ಪಾತ್ರ ನಿರ್ದಿಷ್ಟವಾಗಿ ಗಮನ ಸೆಳೆಯುತ್ತದೆ. ಸಮಸ್ಯೆಗಳು ಬಂದಾಗ ಆಕೆ ತೋರುವ ಧೈರ್ಯ, ಅವುಗಳನ್ನು ಎದುರಿಸುವ ರೀತಿ ನಿಜಕ್ಕೂ ಅದ್ಭುತ. ಕಥೆಯಲ್ಲಿನ ಸಣ್ಣ ಸಣ್ಣ ಪಾತ್ರಗಳು ಕೂಡ ಅಷ್ಟೇ ಆಳವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. "ಜುಗಾರಿ ಕ್ರಾಸ್" ಅದರ ಮೂಲಕ ತೇಜಸ್ವಿ ಅವರು ಜೀವನದ ಜಟಿಲತೆ, ಮನುಷ್ಯ ಸಂಬಂಧಗಳು, ಮತ್ತು ಆಧುನಿಕತೆಯ ಆಮಿಷಕ್ಕೆ ಸಿಲುಕುವ ಅಮಾಯಕರ ಬದುಕಿನ ಬಗ್ಗೆ ಬಹಳ ಸೊಗಸಾಗಿ ಹೇಳುತ್ತಾರೆ.
--- ಎಂ ಎಸ್ ಇಂಗಳೇಶ್ವರ• ✨

-


9 JUN AT 0:40

ವಿಚಾರ- ವಿಮರ್ಶೆಗಳ ಗುರು, ವಿಧ್ಯಾ ಗುರು,
ವಿಶ್ವ -ವಿಪರ್ಯಟನೆ ಗುರು ಎಲ್ಲವೂ ಒಬ್ಬನಾಗಿಹ ಊಹೆಗೂ ನಿಲುಕದಷ್ಟು ಎತ್ತರಕ್ಕೆ ನಿಂತಿಹ "ಪೂರ್ಣ-ಚಂದ್ರ"• ಇಂದು ಹಾಗೇ ನೆನಪಾದರಗಳಿಗೆಗೆ--
ಕಛೇರಿ ಕೆಲಸದ ಒತ್ತಡದ ಮಧ್ಯೆ ಓದಿನ ಆಸಕ್ತಿ - ಅಭಿರುಚಿಗಳನ್ನೆ ಮಾಸುಹೋಗಿ ಬರೀ ಹಾಸಿಗೆಯೇ ಪರಮೋಚ್ಚ ಧ್ಯೇಯವಾಗಿಸಿಕೊಂಡ ಬದುಕು. ಒಂದಗ್ಗಳಿಗೆ ಆನ್ಲೈನ್ ಲೋಕದ ಕಥಾ ಹಂದರದಿಂದ ಜಾರಿ ಪುಸ್ತಕ ಲೋಕದ ತೇಜಸ್ವಿಯ 'ಜುಗಾರಿ ಕ್ರಾಸ್ ' ಕಡೆಗೆ ಕರೆದೊಯಿತು. ಹಲವಾರು ಬಾರಿ ಓದಿದಾಗ್ಯೂ ಈ ಬಾರಿ ಏನೋ ವಿಶೇಷ ಸಂತೋಷ. ಪರಸ್ಪರ ವ್ಯರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ 'ಜುಗಾರಿ ಕ್ರಾಸ್ ' ಅಸಂಖ್ಯಾತ ಆಲೋಚನೆಗಳ ತಾಣ ಎಂದರೆ ತಪ್ಪಾಗಲಾರದು.•
' ಜುಗಾರಿ ಕ್ರಾಸ್ ' ಇನ್ನೂರ ಇಪ್ಪತೈದು ಪುಟಗಳಿದ್ದರು ಅದೊಂದು ಇಪ್ಪತ್ತಾನಾಲ್ಕು ಗಂಟೆಗಳ ಸಣ್ಣಕಥೆ. ಏಕೆಂದರೆ ಸಹ್ಯಾದ್ರಿಯ ಸಾಮಾಜಿಕ ಸ್ಥಿತ್ಯಂತರಗಳ ಕಾಣ್ಕೆಯನ್ನು ಒಂದೇ ಒಂದು ಮಿಂಚಿನಲ್ಲಿ ನಮಗೆ ತೋರಿಸುತ್ತದೆ.
ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಯಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿ ಕೊಡುತ್ತದೆ....

-


6 FEB 2023 AT 21:25

#ನೆಚ್ಚಿನ ಕನ್ನಡತಿ.❤️

ಕನ್ನಡತನವನ್ನೇ ತನು ಮನದ ಭಾಗವಾಗಿಸಿ ಜೀವ
ಭಾವ ತುಂಬಿ ಮಿತ ಭಾಷೆಯ
ನುಡಿಯವಳು.
ಕೋಗಿಲೆ ಕಂಠದ ಶೃಂಗಾರ ಸಿರಿ ಹೊತ್ತ ಕವಿ ಕಂಡ
ಹೊನ್ನಿನ ಚರಿತೆಯ
ಕಾವ್ಯಯವಳು.
ಬದುಕಿನ ಆದರ್ಶ- ಸರಳತೆ ಮೌಲ್ಯವಾಗಿಸಿ
ಸಾರುತಿಹ ಸರಳತೆಯ
ಸಾಕಾರಮೂರ್ತಿಯವಳು.
ನಿಷ್ಕಲ್ಮಶ ಮನಸ್ಸು ಹೊದ್ದು ಬಡತನದಿ ನೊಂದು
ಬೆಂದರು ಪರರಿಗೆ ಉಪಕಾರ
ಮಾಡುತಿಹಳು.
ಸ್ವಾಭಿಮಾನಿ ಸ್ವರೂಪಿಣಿ, ಸರ್ವರ ಪ್ರಶಂಸೆಗೆ
ಪಾತ್ರಧಾರಿ, ಸಂಬಂಧಗಳಿಗೆ
ಸೂತ್ರಧಾರಿಯವಳು.
ಕಷ್ಟಕ್ಕೆ ಕುಗ್ಗದೆ, ಸುಖಕ್ಕೆ ಹಿಗ್ಗದೆ ನಗುಮೊಗದಿ ನಲ್ಮೆ
ಬಿರುತಿಹ ಸ್ವಾಭಿಮಾನಿ
ಉಪಮೇಯದವಳು.
ತನ್ನನು ಜಗವೆಲ್ಲ ಜರಿದರೂ, ಜಾಣ್ಮೆಯಿಂದ
ಜತನದಿಂದ ಹಿತವವಚನ
ಕಾಪಡುವಳು.
ಪ್ರೀತಿ ಪಾತ್ರರ ಕಣ್ಮಣಿ ಈ ಕನ್ನಡತಿ, ಕರುಣೆಯ
ಕಣ್ಮನದಿಂದ ಕೋಟಿ
ಹೃದಯದಲ್ಲಿಹಳು.
ಕನ್ನಡತನ ಪ್ರೇಮದಿಂದ ಕನ್ನಡಿಸುತ,
ಕಾವ್ಯಸುಧೆಯಾಗಿ ಮೆಚ್ಚಿನ
ಭುವಿಯಾಗಿಹಳು.
❤️💞💕💗

-


22 FEB 2022 AT 12:22

ಮನುಜ ಮತ, ವಿಶ್ವ ಪಥ.!

ವಿಶ್ವಮಾತೆಯ ಗರ್ಭದಲ್ಲಿ ಅರಿವಿಲ್ಲದೆ ಅವತರಿಪ
ನಾವು ಬಕುಲದ ಹೂವಿನಾಗೆ ಬಾಗಿ ಬಳುಕುತ ಭರತ
ಖಂಡದಿ ಬದುಕುತಿಹ, ಗತ ಸಾಹಸ ಸಾರುತಿಹ
ಸಾಮಂತರ ವಾಣಿ "ಜಯ ಭಾರತಿ"ಯೆಂದು
ಬೆಳದಿಂಗಳದಿ ಬಿಗುತಿಹುದಲ್ಲವೇ.?

ಹಿಂದೂ ಮುಸಲ್ಮಾನ ಕ್ರೈಸ್ತ ಪಾರಸಿಕ
ಜೈನರುದ್ಯಾನವಾಗಿಹ ಸತ್ಯ ಮತದ ಮತಿ ನಿತ್ಯ
ಸವಿಯ ಸಕ್ಕರೆಯೊಳಗೆ, ಅತ್ತ ಸಾವಿರ ಕಣ್ಣು ತೆರದಿಹ
ಲೋಕಕೆ ಬೆಳಕು ಹರಿಸಿ ಎದೆಯೊಲುಮೆಗೆ
ಕಾಮನಬಿಲ್ಲಿನಂತೆ ಕಂಗೊಳಿಸುತಿದೆಯಲ್ಲವೇ.?

ಬುದ್ದ-ಬಸವ ರನ್ನ-ಪೊನ್ನ ಪಂಪ-ಕುಮಾರವ್ಯಾಸ
ಕಂಬಾರ-ಕುವೆಂಪು ವಿಶ್ವ ಮಾನವರಾಗಿ ತೋರುತಿಹ
ಹೃದಯ ವೇದಿಕೆಗೆ ಇದುವೇ ತಲೆಕಿರೀಟ. ಮತವೆಂಬ
ಬತ್ತಿದ ಕೆರೆಯೊಳಗೆ ಬಲೆಯೇಕೆ? ಆ ಹೊಗೆಯ
ಧಗೆಯಿಂದ ಬನ್ನಿರೈ ಹೊರಕೆ! ಸಂಸ್ಕೃತಿಯ ದೃಶ್ಯ
ವೈವಿಧ್ಯರಚಿತ ಭುವನ ಕವಿ ಸಗ್ಗಕ್ಕೆ ಇರಲೊಲ್ಲವೇ.?

-


5 JAN 2022 AT 14:12

# ನನ್ನ ಕನಕಾಂಗಿ.💗💗

-


30 OCT 2021 AT 11:56

#ದಿಗಂತದಡೆಯಲಿ ರಾಜಕುಮಾರ.

ಯಾರ ಕಣ್ಣಿಗೂ ಕಾಣದ ದೇವನೇ? ಅನುದಿನ ನಿನಗೆಂದು ಕೋಟಿ ಹೃದಯಗಳು
ಹೊತ್ತು ತಂದವು ಬೆಟ್ಟದಷ್ಟು ಹೂವ. ಅನುಕ್ಷಣವು ಪ್ರೀತಿ ಹೊತ್ತು, ನಮ್ಮೆಲ್ಲರ ಕಂಗಳ ಪೊರೆಯುವ "ಬೆಟ್ಟದಹೂವ" ಕಿತ್ತುಕೊಂಡು ದಿಗಂತದಡೆ ಮರೆಯಾದೆಯಲ್ಲ.?

ಈ ನಗು ಕಂಡಾಗ ಮೊಗವೆಲ್ಲ ಅರಳಿ, ಮುಗುಳ್ನಗೆ ಮನವೆಲ್ಲ ಆವರಿಸಿತ್ತು ಅಂದು. ಇಂದದೇಕೊ ನೋಡಿದಡೆಯಲ್ಲ, ಮೌನದಿಂದ ಮನಕೆರಳಿ ಮೌನದಿಂದಲೇ ಮನೆಮಾಡಿದೆಯಲ್ಲ. ರಾಜಕುಮಾರನಿಲ್ಲದೆ ಹೃದಯ ಸಾಮ್ರಾಜ್ಯವಿ ಬಡತನದಿ ಬರಡಾಗಿದೆಯಲ್ಲ.?

ಮಗುಮನದ ಅಪ್ಪಿಗೆಯಲಿ ಮುಪ್ಪಾಗುವ ಮುನ್ನ, "ಅಪ್ಪು"ವನ್ನು ಅಪ್ಪಿಕೊಂಡು ತೆಪ್ಪಗೆ ದೂರ ಸರಿದು, ಪ್ರೀತಿ ತುಂಬಿದ ಹೃದಯ ಬಡಿತ ನಿಲ್ಲಿಸಿ, ಕ್ಷಣದಲ್ಲೇ ನಮ್ಮನೆಲ್ಲ ಈ ತರಹ
ಬೆಪ್ಪರನ್ನಯಾಗಿಸಿದೆಯಲ್ಲ.?

ಪ್ರೇಮದ ಕಾಣಿಕೆಯಲಿ ಅನುರಣಿಸುವ ಅಮ್ಮನಂತಹ "ಅಶ್ವಿನೀ" ತಾರೆಯ ಹರಿಸುತ ಬಾನ ದಾರಿಯಲಿ ಚಂದ್ರನಂತೆ ನಿತ್ಯವೂ ಬೆಳಗಲಿ ನಮ್ಮೀ ಈ ಚೇತನ. ಹರಿಸುವ ರಾಜರತ್ನನ ಲೋಹಿತದ ಭಾವ ಅನುದಿನ ತುಂಬಿ ತುಳುಕಲಿ ಆ ಮಕ್ಕಳಲ್ಲಿ. ಕೋಟಿ ಮನೆಯ ಮನಗಳ ಹರಿಸಲಿ ನಿನ್ನಿಂದಲೇ
ಅನುದಿನ.?

-


23 JUL 2020 AT 23:32

ಕರಿಮುಗಿಲ ಕೈಬೀಸಿ ಕರೆಯತಾದ...!!

✍️ ( Read a more in caption )

-


24 OCT 2021 AT 12:37

#ಅವ್ವ

ತುಟಿಯ ತೆರೆದರೆ ಸಾಕು "ಅವ್ವ."
ಎಂಬ ಮಂತ್ರ ಹೊರುಡುತಿದು
ಜಗವೆಲ್ಲಡೆಯಲ್ಲ.
ಉದಯಾಸ್ತಗಳ ಜನ್ಮ ಮರಣ
ಚಕ್ರ ಮೀರಿ ನಿನ್ನ ಕೀರುತಿ
ಬೆಳಗುತಿದೆಯಲ್ಲ.
ತಾಯ ನಿನ್ನ ಮಮತೆ ಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು, ನಿನ್ನ
ರೂಪದಿ ಬಂದು ನಿತ್ಯ ಸಲುಹುತಿಹ
ಅವತಾರದೆನ್ನನಿಂದು.
ನಿನ್ನ ಮಡಿಲು ಅನುದಿನ ನೇನಿವೆನೆಂದು,
ಸಿಕ್ಕು ದಣಿವಿಲ್ಲದಂತೆ ನಡೆಯಿದಕೆ
ನಿಲ್ಲದಂತೆ.
ಹೃದಯದೋಟದ ನೆರಳು
ಗಾಳಿ ನಿನಾಗಿರುವಾಗ. ತಾಯಿ ನೀನೇ
ನನಗೆ ದೈವ, ನೀನೇ ನನ್ನ ದೇವ
ಜೀವ ಇರುತಕೆ.

-


2 JUN 2021 AT 12:13

ಒಲವೆಂಬ ತನ್ಮಯ.
Read a more in caption,,,,, ✍️👇

-


2 JUN 2021 AT 11:24

ಒಲವೇ ಜೀವದ ಭಾವ ತೋರಿಹ, ನನ್ನದೆಯ ಗರ್ಭಗುಡಿಯ ಒಳಗೆ ದಿನ ಪೂಜಿಸುತ, ನನ್ನೊಲುಮೆಯ ಲತಾಂಗಿ ದಿನ ಸಾಗಿ ನೂರು
ನೆನಪು ಮಾಸಿದರು. ಅಚ್ಚಳಿಯದೆ ನಿಲ್ಲವುದು
ನಿನದೆ ಪ್ರತಿರೂಪ ನನ್ನದೆ ದೇವಮಂದಿರದಲ್ಲಿ.

-


Fetching Malakappa Ingaleshwar Quotes