ಮುಗ್ದತೆಯ ತೋರಣ ಮುಂದಾಳತ್ವ ತೋರಲಿ
ಪೆದ್ದು ಮುದ್ದು ಒಂದು ಗೂಡಿ
ಸಂಭ್ರಮಿಸುವುದೊಂದೆ ತಿಳಿದಿರಲಿ..-
ಇಲ್ಲಿ ಮೂಡಿ ಬಂದಂತಹ ಸಾಲುಗಳು ಕಾಲ್ಪನಿಕ ಅಷ್ಟೇ...
ಕ... read more
ಇಲ್ಲಿ ನಮ್ಮವರಾರು???
ನಮ್ಮ ತಮ್ಮವರೆಂದು
ಹಿಂದೆ ಮುಂದೆ
ಬಿಟ್ಟು ಬಿಡದೆ ಸುತ್ತು ಹೊಡೆದು
ಕೊನೆಗೆ ನಂಬಿಕೆಗೆ ಕೊಡಲಿ ಏಟು
ಕಳಚಿತೆ ನೆಂಟರೆಂಬ ನಂಟು..
ಕಳೆದು ಹೋಯಿತೆ ನೆಮ್ಮದಿಯ ಗಂಟು...-
ಪರೀಕ್ಷೆಗಳು ಬಿಟ್ಟು ಬಿಡದೆ ಕಾಡಿದಾಗ
ಜೊತೆಗಾರರ ತಳ್ಳಲೋ
ದೇವರ ದೂರಲೋ
ದೂರು ದೂರಗಳ ಮಧ್ಯೆ ಸಿಲುಕುವ ಬಾಳು
ಸಾಕು ಸಾಕೆಂದರೂ ಕಿರಿ ಕಿರಿ ಗೋಳು
ಎಲ್ಲರಲ್ಲೂ ಇದೆ
ಒಂದಲ್ಲ ನೂರು ಅಳಲು....
ಎಲ್ಲವೂ ಮೆಟ್ಟಿಲುಗಳೇ
ಮುಗಿಲೆತ್ತರ ಏರಿ ಬೆಳೆಯಲು....
-
ಒದ್ದೆಯಾದುದರ ಕಾರಣ..
ಮುಚ್ಚಿಡುವಂತಿಲ್ಲ
ಬಿಚ್ಚಿಡುವಂತಿಲ್ಲ
ಒದ್ದೆ ಕಣ್ಣಿನ ಅಂತಃಕರಣ..-
ಪುಟ್ಟ ದೋಣಿಯಲಿ
ಹುಟ್ಟು ಹಾಕುತಲಿ
ಜೀವ ಜೀವನ ಸಾಗುತಿದೆ
ಸಂಭ್ರಮದಲಿ
ಸಂತಸವ ಹಂಚುತಲಿ
ಸವಾಲುಗಳ ಸರಿಸಿ ವೇಗದಲಿ
ಬಂಗಾರದಂತಹ ಬಂಧಗಳ
ಜೊತೆಯಲಿ ಹೀಗೆ ಸಾಗಲಿ
ಸಾಗುತಲಿರಲಿ .....-
ಸಂತೆಯಲಿ ಸಾಕು ಸಾಕೆನ್ನುವವರು ಎರಡು ಒಂದು
ಬೇಕು ಬೇಕೆನ್ನುವುದರ ಬಾಕಿ ಮಾಡರು ಇವರು....
ಇರುವುದರ ಮರೆತು
ಬರುವುದೋ ಸಿಗುವುದೋ ಎಂದು ಕುಳಿತು
ಇರುವುದೆಲ್ಲವ ಬಿಟ್ಟು
ಹುಡುಕ ಹೊರಟರು ಅಂಧಕಾರವ ಹೊತ್ತು....-
ಕನಸಿಗೆ ಕಳೆ ನೀಡುವ ಹಬ್ಬ
ಹಣತೆ ತುಂಬಿ ಬೆಳಕ ನೀಡುವ ಹಬ್ಬ
ಹಾರೈಸುವ ಕುಟುಂಬ ಒಂದಾಗುವ ಹಬ್ಬ
ಇದೇ ಬೆಳಕಿನ ಹಬ್ಬ ಮನೆ ಬೆಳಗುವ ಹಬ್ಬ..
ಕತ್ತಲೆ ಕವಿದು ಬೆಳಕು ಮೂಡಲಿ
ಬೆಳಕು ಕೂಡಿದ ಜೀವನ ಸಂಭ್ರಮದಿಂದ ಸಾಗಲಿ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...-
ವ್ಯಾಪಾರ ಚೆನ್ನಾಗಿ ನಡೆಯುವಂತಿತ್ತೋ ಏನೋ...!!
ಕಿಕ್ಕಿರಿದ ಜನ ಗುಂಪುಗಳ
ನಿರ್ವಹಣೆಯೇ ಕಾಯಕವಾಗಿತ್ತೇನೋ.....!!-