Anjana Karanth   (Anjana...)
33 Followers · 5 Following

read more
Joined 29 May 2018


read more
Joined 29 May 2018
11 MAR 2019 AT 19:01

ಅಮ್ಮನಿಲ್ಲದ ತವರು...
ಮನದಡಿಯಲಿ ಸಾವಿರ ನೆನಪುಗಳ ಬೇರು..
ಸಂಬಂಧಗಳೋ ಚೂರು ಪಾರು..
ಆಡಿಕೊಂಡು ನಕ್ಕವರು ಕೆಲವರು...
ತಾನು ಒಳ್ಳೆಯವರೆಂದು ನಟಿಸಿದವರು ಹಲವರು..!

ಕೋಪವೋ,ಅನುಕಂಪವೋ..
ದ್ವೇಷವೋ,ಸ್ವಾರ್ಥವೋ..!!
ಪ್ರೀತಿ ಇಲ್ಲವೆಂದ ಮೇಲೆ ಎಲ್ಲವೂ ಮುಖವಾಡವೇ...
ಇಲ್ಲಿ ನಮ್ಮವರೆಂಬುದೆಲ್ಲ ಕೇವಲ ನಾಟಕವೇ..!

ಅತ್ತ ಮನೆಯಿಲ್ಲ..ಇತ್ತ ಮನಸೂ ಇಲ್ಲ...
ನಮಗಾಗಿ ದಾರಿ ಕಾಯುವವರು ಮೊದಲೇ ಇಲ್ಲ...!
ಬಿಕ್ಕಿ ಅತ್ತರೇನುಂಟು? ಮತ್ತೆ ನಗಲೇಬೇಕು...
ಯಾರಿಲ್ಲದಿದ್ದರೇನು?
ನಮಗೆ ನಾವಾಗಿ,ನಮ್ಮ ಗೆಲುವಿಗಾಗಿ,
ದಾರಿ ಸಾಗಲೇ ಬೇಕು‌...!
ಈಜಿ ದಡವ ಸೇರಲೇಬೇಕು...!!

-


8 MAR 2019 AT 10:26

ಹೆಣ್ಣೆಂದರೆ ಅವಳೇ..!
ಭಾವ ತುಂಬಿದ ಮನಕೆ ಹೊಂಬಣ್ಣ ಕೊಡುವವಳು..
ಅತ್ತು ಬೇಸತ್ತರೂ,ನಗು ಮೊಗದಿ ನಲಿಯುವವಳು..
ಅಮ್ಮ,ಅಕ್ಕ,ತಂಗಿ,ಪತ್ನಿ,ಮಗಳೆನ್ನುವುದೆಲ್ಲಾ,
ಸಂಬಂಧದ ಸೇತುವೆಗಳಷ್ಟೇ..!
ಎಲ್ಲರಲ್ಲೂ ಇರುವುದು ಹೆಣ್ಣೆಂಬ ಶಕ್ತಿಯ ಪರಾಕಾಷ್ಟೆ..!

ಮನದ ನೂರು ರಂಪಾಟಗಳಿಗೆ ಒಬ್ಬಳೇ ಹೋರಾಡಿ..
ಮನೆ ಎಂಬ ಹೂ ಬನಕೆ ಸಂತಸದ ನಗು ಬೀರಿ..
ತಾನೆಲ್ಲಿ ಕಳೆದ್ಹೋದರೂ ಮತ್ತೆ ತಾನಾಗಿ..
ಒಮ್ಮೆ ಅಮ್ಮನಾಗಿ,ಇನ್ನೊಮ್ಮೆ ಮಗಳಾಗಿ,ಕನಸ ಹೊರುವಳು ಹೆಣ್ಣಾಗಿ..!

ಅವಳೋ ಭಾವನೆಗಳ ಒಡತಿ...
ಮೊಗದ ಮೂಗುತಿ,ಹಣೆಯ ಸಿಂಧೂರ..
ಕಣ್ಣ ಕಾಡಿಗೆಗೂ ಗೊತ್ತವಳ ಗತ್ತು..!!
ಏನಿಲ್ಲದಿದ್ದರೂ ಎಲ್ಲವೂ ಇದ್ದಂತೆ...
ಮಾತು ಮುಗಿದರೂ ಮತ್ತೆ ನೆನಪಾದಂತೆ..
ಬದುಕು ಸಾಗಿಸುವಳು ಛಲ ಬಿಡದಂತೆ,ಹೊಸ ಕನಸಿನಂತೆ!!

-


31 DEC 2018 AT 17:28

ಮತ್ತೊಂದು ಹೊಸ ವರುಷ...
ಬದಲಾಗಿದ್ದು ದಿನಗಳೇ ಹೊರತು ಮನಸ್ಸಲ್ಲ,
ಜೀವನವೂ ಅಲ್ಲ...!
ಕಂಡ ಕನಸುಗಳು ಇಟ್ಟಂತ ಹೆಜ್ಜೆಯ ದಾರಿ ಕಾಯುತಿವೆ...
ಕೂಡಿಟ್ಟ ನೆನಪುಗಳು ಸದ್ದಿಲ್ಲದೇ ಮೂಲೆ ಸೇರಿವೆ..!
ಸೋಲು ಜೀವಕೋ,ಮನದ ಭಾವಕೋ??
ಗೆಲುವು ಮಾತ್ರ ಕನಸೇ ಸರಿ !
ಸುಮ್ಮನಿದ್ದರೂ...,ಬದುಕು ಸಾಗಲೇ ಬೇಕು...
ಒಮ್ಮೆ ನಕ್ಕು,ಇನ್ನೊಮ್ಮೆ ಅಳಲೇ ಬೇಕು...
ಮುಗಿಯದ ಪಯಣವಿದು,ಗುರಿ ಸೇರಲೇ ಬೇಕು...!

-


7 DEC 2018 AT 10:31

ಜೀವನವಿಲ್ಲಿ ಶರಧಿಯ ಒಡಲು..
ಸಾವಿರ ಅಲೆಗಳ ಅಬ್ಬರದ ಮಡಿಲು..
ಇಲ್ಲಿ ಸಂಬಂಧಗಳೆಲ್ಲ ಅಷ್ಟಕ್ಕಷ್ಟೆ..🙃
ಪ್ರೀತಿ-ಸ್ನೇಹಗಳೆಲ್ಲ ಚೂರು-ಪಾರು..!
ನಗುಮೊಗವೇ ಸತ್ಯವೆಂದಲ್ಲ..😐
ಕಣ್ಣೀರು ನಿಜವೂ ಅಲ್ಲ..!
ಅನಾಮಿಕನ ಬದುಕಿದು,ನಿಂತ ನೀರಲ್ಲ...
ಮುಗ್ಗರಿಸಿ ಬಿದ್ದರೂ ಸಾಗಲೇ ಬೇಕು,
ಗುರಿ ಸೇರಲೇ ಬೇಕು...!❤️😊

-


6 DEC 2018 AT 11:20

ಒಂದು ಮನಸ್ಸಿಗೆ ಸಾವಿರ ಮುಖವಾಡ🎭
ಬಣ್ಣ ಕಳಚಿ ಬೀಳಲೇಬೇಕು,
ನಗು ಬಂದಾಗ ನಕ್ಕು,ಅಳುವಿದ್ದರೆ ಅತ್ತು ಬಿಡು..
ಎಡವಿದಾಗ ಹಿಂದೆ ಬಿದ್ದು ನಕ್ಕವರು,
ಎದುರಿಗೆ ಅಯ್ಯೋ ಪಾಪ ಅನ್ನೋರು..
ಗೆದ್ರೆ ಉರಿ,ಸೋತ್ರೆ ಗುರಿ..!
ಎಲ್ಲರದೂ ಮುಖವಾಡದ ಬದುಕು..
ಸಾಗಬೇಕು ನಾವು ಎಲ್ಲವನೂ ಮರೆತು...!!😊

-


30 MAY 2018 AT 12:55

ಪುಟ್ಟ ಹೆಜ್ಜೆ ,ದೊಡ್ಡ ಕನಸು..
ಅಪ್ಪನೆಂಬ ಸಿಹಿ ಮನಸು..
ಅಪ್ಪ ನನ್ನಮ್ಮನಂತೆ!!
ಸದಾ ಮುಗ್ಧ ಕೂಸು..

ನನ್ನ ಮೊದಲ ಹೆಜ್ಜೆಗೆ ನಕ್ಕು..
ಎಡವಿದಾಗ ಕೈ ಹಿಡಿದು ನಡೆಸಿ,
ಮುತ್ತಿಟ್ಟ ಹಣೆ ಇಂದು ನಗುತಿದೆ.
ತಪ್ಪು ಹೆಜ್ಜೆಗಳೂ ಮುದ ನೀಡಿವೆ...!

ಕೂಡಿಟ್ಟಂತ ಕನಸುಗಳಿಂದು ನನಸಾಗಿವೆ..
ಕಾಲುದಾರಿಯಲಿ ಹೆಜ್ಜೆಗಳು ಸಾಗುತಿವೆ..
ಅಪ್ಪನ ಎದೆಗವಚಿ ನಿದ್ದೆ ಹೋದಂತ ನೆನಪಲಿ..
ನನ್ನ ಕಾಲ್ಗೆಜ್ಜೆಯ ದನಿಗೆ ಅಪ್ಪ ನಕ್ಕಂತ ನಗುವಲಿ...!!

-


29 MAY 2018 AT 14:41

ಬಾನ ಬಣ್ಣವೀಗ ಭುವಿ ಸೇರಿದೆ
ಮನದ ಭಾವಗಳಲ್ಲಿ ನಗು ಮೂಡಿದೆ...
ನೀರವ ಮೌನವು ಸದ್ದಿಲ್ಲದೇ ಸಾಗುತಿರೆ...
ಅದುವೇ ಇಬ್ಬನಿ ಕರಗುವ ಹೊತ್ತು
ಮನದ ಬಾನಿಗೆ ಸೂರ್ಯನೇ ಸಂಪತ್ತು...!!!

ಇಲ್ಲಿ ನಗುವಿಗೊಂದು ಬಣ್ಣ,
ಅಳುವಿಗೊಂದು ಬಣ್ಣ...
ಮನಸಿಗೋ ನೂರಾರು ಬಣ್ಣ!!
ಬಾನಿನಂತೆ ಬದುಕು,
ಬಾನಿನಂತೆ ಕನಸು...
ಕೆಲವೊಮ್ಮೆ ಭಾವನೆಗಳ್ಯಾಕೋ
ಮಸುಕು-ಮಸುಕು..!

ಬಾನ ತೊರೆದಿರೋ ಶ್ವೇತ ಚಂದ್ರ..
ಮತ್ತೆ ಬೆಳಗಿರೋ ಕೆಂಪು ರವಿ..
ಎಲ್ಲವನು ಬಾಚಿ ತಬ್ಬಿರೋ ಹಸಿರ ಭುವಿ...
ಇದು ಬಣ್ಣಗಳ ಸಮ್ಮಿಲನ..
ಮನದ ಭಾವಗಳ ಸಂಚಲನ...!

-


Seems Anjana Karanth has not written any more Quotes.

Explore More Writers