ಎಲ್ಲಿ ನೋಡಿದರಲ್ಲಿ ನಿನ್ನದೇ ಛಾಯೆ
ಎಲ್ಲ ಮೊಗದಲ್ಲೂ ನಿನ್ನದೇ ರೂಪ
ಹುಡುಕುವೆ ನಾ ಪ್ರತಿದಿನ
ಸಿಗುವೆಯ ನೀ ಒಂದಿನ...-
ಒಮ್ಮೆಯಾದರೂ ನೀ ಸನಿಹ ಕುಳಿತು ಕೇಳಬೇಕಿತ್ತು
ಮನದ ಮೂಲೆಯ ಮಗ್ಗಲಲ್ಲಿ ನಿನ್ನದೇ ದರ್ಬಾರು
ಸದ್ದು ಗದ್ದಲ ಎಲ್ಲವೂ ನಡೆಯುತ್ತಿದೆ. ಅದ ನಿಯಂತ್ರಿಸಲು ನಾ ಸೋತೆನಲ್ಲ. ಈ ವಿಷಯ ಬರಿ ಇಂದಿನದ್ದಲ್ಲ , ಹಿಂದೆ ತಿರುಗಿ ನೋಡಿದರೆ ವರುಷಗಳೆಷ್ಟು ಕಳೆದುಹೋದವು ಇದೇ ರೀತಿಯಲ್ಲ....!
-
ನೆನಹುಗಳು (ನೆನಪುಗಳು) ಒಮ್ಮೊಮ್ಮೆ ತಾಯಿ ತಾನೆತ್ತ ಮಗುವ ನಗು ನೋಡುತ್ತಾ ಖುಷಿಯಲಿ ಹೃದಯ ತಣಿದು ಜಗವ ಮರೆತಂತೆ. ಮತ್ತೆ ಕೆಲವೊಮ್ಮೆ ಭಾರವಾದ ಮೂಟೆಯನ್ಹೊತ್ತು ದಾರಿಯ ದೂರ ಎಷ್ಟೆಂದು ಕಾಯ್ದು ನಿಂತಂತೆ . ಬಡಿತದಲ್ಲಿ ಬದಲಾವಣೆ ಧೀರ್ಘವಾದ ಉಚ್ವಾಸ ನಿಶ್ವಾಸ ,ಹನಿ ಜಾರದಿದ್ದರು ಕಣ್ಣಾಲೆಗಳ ತೇವ.ಅಪ್ಪಿ ತಪ್ಪಿಯು ಹೊರಬರದ ಧ್ವನಿ ಆದರೂ ಅಲ್ಲಲ್ಲಿ ನೆಪಕ್ಕೆಂದು ಲೇಪಿಸಿದ ಮುಗಳ್ನಗು
-
ಏನೋ ನಾಲ್ಕು ಅಕ್ಷರ ಬರಿಯೋ ಹವ್ಯಾಸಕ್ಕೆ YQ ಓಪನ್ ಮಾಡಿ ಬರೀತಾ ಬರೀತಾ ಗೊತ್ತಿದ್ಲೆಯಿರೋ ಪದಗಳ ಅರ್ಥ, ಸಾಹಿತ್ಯದ ಜೊತೆ ಭಾವನೆಗಳು ಬೇಳದ್ವು ಅನೇಕ ಮನಗಳ ಪರಿಚಯ, ಒಂದಿಷ್ಟು ಸಂಬಂಧಗಳ ಜನನ, ಎಲ್ಲವನ್ನೂ ಪರಿಚಯಿಸಿದ YQ ಗೆ ಧನ್ಯವಾದ. YQ ವೇದಿಕೆ ಇನ್ನೂ ಸ್ವಲ್ಪ ದಿನದಲ್ಲಿ ನಮ್ಮ ಜೊತೆ ಇರೋದಿಲ್ಲ ಅಂತ ಕೇಳಿದಾಗ ಸ್ವಲ್ಪ ಬೇಜಾರು.YQ ವೇದಿಕೆಯಲ್ಲಿ ಪರಿಚಯವಾದ ಎಲ್ಲರಿಗೂ ಥ್ಯಾಂಕ್ಯೂ ❤️
-
ಯಾವ ಭಾವಕ್ಕೆ ಯಾವುದರ ಸಾಂತ್ವನ
ಆಡಂಬರ ಎಲ್ಲಿತ್ತು ಹಗುರಾದ ಮನಸಿಗೆ
ನಾಟಕದ ಜಗವಿದು ನಟಿಸಿದರಷ್ಟೇ ಬೆಲೆ
ಆಗಾಗ ಮಾಡಿಕೊಳ್ಳಬೇಕು ನಮ್ಮೊಳಗೆ
ನಾವೇ ಅಂತರಾತ್ಮದ ಕೊಲೆ-
ಕಾದು ಕುಳಿತ ಭಾವಗಳವು ಬಳಲುತ್ತಿವೆ ಬಾಯ್ಬಿಡದೆ
ಬೆಂದ ಬದುಕಲಿ ಭರವಸೆ ಗೆದ್ದರು ಮನಸ ಕಣ್ಣಲಿ ಆಸೆ ಸತ್ತಿವೆ.
ಗಟ್ಟಿಯಾದ ಧ್ವನಿ ಇಂದು ತಿರುವು ಪಡೆದು ತೊದಲಿದೆ.
ಭಾಷೆ ಸಿಗದೆ ಭಾವವೊಂದು ದಾರಿ ತಪ್ಪಿ ನಿಂತಿದೆ.
-