ಸದ್ಯದ ಪರಿಸ್ಥಿತಿಯಲ್ಲಿ ಕಾಲ ವಿಳಂಬವಾಗಿ ಜಯಸಿಗದ್ದರು
ಎಂದಿಗೂ ಕೈಬಿಡದೆ ಸಿಗುವುದು ವಿಜಯ.-
ಜೀವನದ ಅಧ್ಯಾಯಕ್ಕೆ ನಿನ್ನೊಟ್ಟಿಗೆ ಜೊತೆಯಾದೆ ನಾನು.
ಉತ್ತಮ ಸತಿ ಪತಿಗೂ ಮೀರಿದ ಸ್ನೇಹವು ನೀನು
ಕೋಪದಲ್ಲಿಯೂ ಅದನ್ನು ಮೀರಿಸುವ ಪ್ರೀತಿಯು ನೀನು
ಬದುಕಿನ ಏರುಪೇರಿನ ದಾರಿಯಲ್ಲಿ ಭರವಸೆಯು ನೀನು
ಇನ್ನೊಬ್ಬರ ಮುಂದೆ ಬಿಟ್ಟುಕೊಡದ ಕಾಳಜಿ ನೀನು
ಬದುಕಿನುದ್ದಕ್ಕೂ ನಿನ್ನೊಂದಿಗೆ ಸದಾ ಜೊತೆಯಾಗಿರುವೆ ಹೀಗೆ ನಿನ್ನೊಟ್ಟಿಗೆ ನಾನು..-
ಬಿತ್ತಷ್ಟು ಬೆಳಕಾಗುವುದು ಜ್ಞಾನ
ಮುಚ್ಚಿಟ್ಟಷ್ಟು ನಾವೆ ಮುಪ್ಪಾಗುವೆವು ಅದೇ ಅಜ್ಞಾನ.-
ಯಾರೂ ಊಹಿಸಲಾಗದ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಮುದ್ದಾಗಿ ಸಾಕಿದ ಮಗ ಬೇರೊಂದು ಜಾತಿಯ ಹುಡುಗಿಯ ಜೊತೆ ಮದುವೆ ಮಾಡಿಕೊಂಡು ಬಾಗಿಲ ಬಳಿ ಬಂದು ನಿಂತಿದ್ದ, ಇತ್ತ ಮನೆಯವರೆಲ್ಲಾ ಏನು ತೋಚದ ಹಾಗೆ ನಿಂತ ಜಾಗವ ಅಲುಗಾಡದೆ ನಿಂತಲ್ಲೆ ಹೊರ ನೋಡಿದರು. ಮಗ ಅಮ್ಮ ನಾನು ಒಳಗೆ ಬರಬಹುದೆ ಎನ್ನುವಷ್ಟರಲ್ಲಿ ತಾಯಿ ಒಂದೆಜ್ಜೆ ಮುಂದಿಡಬೇಡ ಎಂದು ಕಠೋರವಾಗಿ ಕಿರುಚಿದಳು ಅಷ್ಟೊಂದು "ಪ್ರೀತಿಯಿಂದ ಸಾಕಿದ ಮಗ ಕೈ ತಪ್ಪಿ ಹೋದನೆಂಬ ಹತಾಶೆಯಿಂದ ಕೂಗಿ ಗೋಳಾಡಿದಳು" . ಹೆತ್ತು ಹೊತ್ತು ಇಷ್ಟು ವರ್ಷ ನನ್ನ ಬದುಕನ್ನು ನಿನಗಾಗಿ ಬಸಿದೆ , ಎಂತ ಸಂಕಷ್ಟಕ್ಕೆ ತಂದು ನಿಲ್ಲಿಸಿದೆ ಎಂದು ಮಗನಿಗೆ ತನ್ನ ನೋವನೆಲ್ಲ ಅಳುವಿನ ಮೂಲಕ ಹೊರಹಾಕುವ ತಾಯಿ ಒಲ್ಲದ ಮನಸ್ಸಿನಿಂದ ಒಳಗೆ ಬಾ ಇನ್ನೆಂದಿಗೂ ನಿನಗೂ ನಿನ್ನ ಜೊತೆಗೆ ಬಂದ ಹುಡುಗಿಗು ನನ್ನ ಮನಸ್ಸಲ್ಲಿ ಜಾಗವಿಲ್ಲ ಎಂದು ಮುಖ ಮುರಿದಳು, ಆದರೆ ಮನೆಯವರೆಲ್ಲಾ ಸ್ವಲ್ಪ ಹೊತ್ತು ಕಳೆದ ನಂತರ ಎಲ್ಲರು ಹೋಗಿ ಮಾತನಾಡಿ ಬಂದರು ತನ್ನಪ್ಪನೆ ನಿನ್ನಮ್ಮನ ಬಗ್ಗೆ ನಿನಗೆ ನನಗಿಂತ ಹೆಚ್ಚಾಗೆ ಗೊತ್ತು. ಅವಳ ಪ್ರೀತಿ ಎಷ್ಟು ಹೆಚ್ಚೊ ಅವಳ ಕೋಪವು ಅದಕ್ಕೊ ಮೀರಿ ಎಂದು ನಿಧಾನವಾಗಿ ಸರಿಯಾಗತ್ತೆ ಆದರೆ ನೀನು ಮಾಡಿರುವುದು ಅವಳ ಮನಸ್ಸಿಗೂ ಅಷ್ಟೇ ನಾಟಿದೆ ಎಂದು ಹೇಳಿ ಅಲ್ಲಿಂದ ಹೆಂಡತಿಯನ್ನು ಸಮಾಧಾನ ಮಾಡಲು ಮುಂದಾದ ಕಾಲ ಕ್ರಮೇಣ ಮಗ ಸೊಸೆಯ ಮೇಲಿದ್ದ ಕೋಪವು ನಿಧಾನವಾಗಿ ಕಡಿಮೆ ಹಾಯಿತು. ಈಗ ಮನೆಯ ಸೊಸೆ ಮನಸ್ಸಿಗೆ ಹತ್ತಿರವಾಗಿ ಮಗಳಾಗಿ ತನ್ನತ್ತೆಯೆ ನಾನು ಹುಡುಕಿದರೂ ಇಷ್ಟು ಒಳ್ಳೆಯ ಹುಡುಗಿಯನ್ನು ಹುಡುಕುವುದರಲ್ಲಿ ಸೋಲುತ್ತಿದ್ದೆ ಎಂದು ಹೇಳುವ ಮಟ್ಟಿಗೆ ಸುಖವಾಗಿ ಕುಟುಂಬದವರೆಲ್ಲಾ ಸೇರಿ ಅನ್ಯೋನ್ಯತೆಯತೆಯಿಂದ ಜೀವನ ನಡೆಸುತ್ತಿದ್ದಾರೆ...
-
Behind every rude girl
There was a girl
With a soft heart
Who trusted everyone
Once upon a time..-
ಜೀವನದಲ್ಲಿ ಸಿಗದವರ ನೆನಪುಗಳನ್ನು
ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡವರೆ ಹೆಚ್ಚು..-
ಜೀವ ಇರುವ ಮನುಷ್ಯನ ಬದಲು ಮಾನವ ನಿಮಿ೯ತ ವಸ್ತುಗಳ ಮೋಹಕ್ಕೆ ಬದಲಾಗುತ್ತ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದೇವೆ.
ಮೊಬೈಲ್ ಫೋನ್ ಎನ್ನುವುದು ಮನುಷ್ಯನ ಬದುಕುವ ಶೈಲಿಗಳಿಗಳನ್ನು ಬದಲಿಸುತ್ತಿದೆ ,
ಮೊದಲೆಲ್ಲ ಬೆಳಿಗ್ಗೆ ಎದ್ದು ದೇವರ ಮನೆ ಕಡೆಗೆ ಹೋಗುತ್ತಿದ್ದೇವು ಈಗ ಬೆಳಿಗ್ಗೆ ಏಳುವುದೆ ತಡ ಮೊಬೈಲ್ ಎಲ್ಲಿದೆ ಎಂದು ಕಣ್ಣು ಬಿಡದೆ ಹುಡುಕುತ್ತೀವಿ,
ಮನೆಯಲ್ಲಿ ಇರುವುದಕ್ಕಿಂತ ಮೊಬೈಲ್ ಒಳಗೆ ಇರುವುದೆ ಹೆಚ್ಚು. ಮನೆಯವರ ಜೊತೆ ಮಾತನಾಡಲು ಸಮಯ ಸಿಗತ್ತಿಲ್ಲ ಅನ್ನುವಷ್ಟು ಸಮಯವನ್ನು ಮೊಬೈಲ್ ಗೆ ಮೀಸಲಿಡುತೇವೆ. ಎಷ್ಟರಮಟ್ಟಿಗೆ ಅಂದರೆ ವಾಷ್ ರೂಮ್ ಅಲ್ಲೂ ಬಿಡದೆ ಜೊತೆಯಲ್ಲಿ ಪ್ರಯಾಣ ಮಾಡುತ್ತೇವೆ.ಯಾರಾದರೂ ಕೇಳಿದರೆ ಒಂದೇ ಪ್ರತಿಕ್ರಿಯೆ ಎಷ್ಟು ಕೆಲಸ ಇದೆ ಗೊತ್ತಾ ನಿನಗೆ ಎಂದು ರೇಗುತ್ತೇವೆ. ಕಾಫೀ, ತಿಂಡಿ, ಊಟ ಹೀಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ಎಡೆಬಿಡದೆ ನೋಡುತ್ತೇವೆ. ಮಲಗುವಾಗ ಯಾಕೊ ಕಣ್ಣುಗಳು ಸ್ವಲ್ಪ ನೋಯಿತ್ತಿದೆ rest😴 ತೆಗೆದುಕೊಳ್ಳೋಣ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೆ ಪ್ರಾಮುಖ್ಯತೆ ಕೊಟ್ಟಿದ್ದೇವೆ.
-