ಪ್ರೀತಿ ದನಿ ತುಂಬಿ...ಮುರಳಿಯಾ ನಾದವಾಯ್ತು.
ಎದೆಯಲೇನೋ ಮಿಡಿದು ಝೇಂಕಾರವಾಯ್ತು.
ಸಿರಿ ವೀಣೆ ಮಿಡಿದಂತೆ ಆಲಾಪ ಸಲ್ಲಾಪವಾಯ್ತು.
ಜೊತೆಯಾಗಿ ನಡೆವಾಗ ಮಾವು, ಚಿಗುರಿನ ಪುಲಕವಾಯ್ತು.
ಮೀಸೆಯಂಚಿನ ನಗುವು ನನ್ನೊಳಗೆ ನವಿರು ನಾಚಿಕೆಯಾಯ್ತು.-
ತುಟಿಯಂಚಿನಲಿ ನಾಚಿಕೆ ಮೂಡಿತು
ಮನದಲಿ ಹೊಸದಾದ ಅನುಭವವಾಯಿತು
ಹೃದಯದಲಿ ಪ್ರೀತಿ ಚಿಗುರಿತು
ಬದುಕಿಗೆ ಸಂಗಾತಿಯ ಜೊತೆ ಸಿಕ್ಕಿತು
-
ಕಣ್ಣುಗಳ ಸಮ್ಮಿಲನ
ಹೃದಯಗಳೆರಡರ ಮಧುರ ಮಿಲನ
ತುಟಿಯಂಚಲಿ ಮೂಡಿ ನಾಚಿಕೆ
ಹೊರಟಿತು ಒಲವಿನ ಪಯಣ ಪ್ರೇಮಲೋಕಕೆ-
ಮಾತಿನ ಮಳೆಯಲ್ಲೇ ಕೊಡೆ ಹಿಡಿದು
ಕಟ್ಟಿಹಳವಳು ಪ್ರೇಮಭವನ,,
ಚಟಪಟ ಮಾತಾಡುವ ಸಿಡಿಮಿಡಿ
ಬೊಂಬೆಗೆ ಕಟ್ಟಿಹನವನು ಮೌನದರಮನೆ,,
ಅವಳೋ ಮಂಡೂಕದಂತೆ ಮಾತಿನಲಿ,,
ಅವನೋ ಕಾಮಧೇನಂತೆ ಮೌನದಲಿ,,
ಇಬ್ಬರೂ ಸಮ್ಮಿಲನವಾದರೆ ಬಾಳಿನಲಿ,
ಅವಳ ಮಾತಿನರಮನೆಗೆ ಅವನೇ ಸಾಮ್ರಾಟ,,
ಅವನ ಮೌನದರಮನೆಗೆ ಅವಳೇ ಮಹಾರಾಣಿ,,,,
-
ಮೌನದಲ್ಲೇ ಮನಗಳ ಮಿಲನವಾಯಿತು
ತುಟಿಯಂಚಿನಲ್ಲಿ ನಾಚಿಕೆ ಮೂಡಿತು
ಒಲವಿನ ಬಂಧ ಬೆಸೆಯಿತು
ಕನಸುಗಳು ಚಿಗುರೊಡಿಯಿತು
ಮನದಿ ಭಾವನೆಗಳ ಹೂ ಅರಳಿತು.
ಒಲವಿರೆ ಬದುಕಲಿ, ಬದುಕು ನವೋಲ್ಲಾಸದಿ ಕೂಡಿತು.-
ಮಾದಕ ಕಿರು ನೋಟ
ಸೆಳೆಯಿತೆನ್ನ ತುಟಿ ಅಂಚ
ಕಿರುನಗೆಯು ಸೆಳೆದಿತ್ತು
ಬಿಡದೆ ನಿನ್ನತ್ತ.
ಬಿದಿಗೆಯ ಚಂದ್ರನಂತೆ
ಹೊಳೆಯುವ ನಿನ್ನ ಮುಖದ
ಕಾಂತಿಯಲಿ.ಅದೇನೋ ಸೆಳೆತ,
ಆ ಕಣ್ಣಂಚ ಕೋಲ್ಮಿಂಚಲ್ಲಿ
ಸೇರಿದ ನೋಟ
ಬೆರೆತಾಗ ನಾ ಕರಗಿ
ಹೋದೆ ಗೆಳತಿ ನಿನ್ನಲ್ಲಿ.
-
ಕಣ್ಣುಗಳ ಸಮ್ಮಿಲನವಾಯಿತು
ತುಟಿ ಹಂಚಿನಲ್ಲಿ ನಾಚಿಕೆ ಮೂಡಿತ್ತು
ಕೆನ್ನೆ ರಂಗಾಯಿತ್ತು
ಮನಸ್ಸು ಹಾತೊರೆಯಿತ್ತು
ನನ್ನ ಇನಿಯನ ನೋಡಲು
ಅವನ ಮಾತನ್ನು ಆಲಿಸಲು
ಮನವು ತುಂಬಿ ಬಂತು-
ಪರಿಪರಿಯ ಭಾವಗಳ ಗರ್ಭಧರಿಸಿರಲು ನಾನು
ಅಸಂಖ್ಯ ಭಾವಗಳ ತಂದೆಯಾಗಿರುವೆ ನೀನು
ಚಿರಂತನ ರಮಣೀಯ ನಮ್ಮಿಬ್ಬರ ಸ್ನೇಹವು
ನಿತ್ಯನೂತನ ಆನಂದ ಪ್ರೇಮದ ನಮ್ಮ ಯಾತ್ರೆಯು-
ಮನದಲ್ಲಿ ಆಸೆ ಚಿಗುರಿತು
ಕಣ್ಣುಗಳು ಮೌನವಾಗಿ ಮಾತನಾಡಿದವು
ಮನಸ್ಸು ಪಕ್ಷಿಯಂತೆ ಹಾರಾಡಿತು.
ತುಟಿ ಅಂಚಿನಲಿ ನಸುನಗೆಯು ಮೂಡಿತ್ತು
ನಿಸರ್ಗ ನಾಚಿ ನೀರಾಯಿತು
ಜಗತ್ತು ಒಂದು ಕ್ಷಣ ಸ್ತಬ್ದವಾಗಿಬಿಟ್ಟಿತು.
- ಹೆಚ್R
-
ಅವನ ತುದಿಬೆರಳ ಸ್ಪರ್ಶದಿ
ಮುಂಗುರುಳು ಶರಣಾಗಿ
ಕಿವಿ ಹಿಂದೆ ಬಂದಿತವಾದವು,
ಅವನ ಕಣ್ಣ ಕಂಚಿನ ನೋಟಕೆ,
ರೆಪ್ಪೆಯು ಶರಣಾಗಿ ಮುಚ್ಚಿಕೊಂಡವು,
ಬಿಸಿಯುಸಿರ ತಾಪಕ್ಕೆ ಮೂಗುತಿಯು
ಮಂಕಾಗಿ ಶರಣಾಯಿತು,
ಅವನ ಅಧರದ ಬೇಡಿಕೆಗೆ
ನನ್ನಧರವು ಒಲ್ಲೆ ಎನ್ನಲಾಗದೆ
ನಾಚಿ ಸಮ್ಮತಿಸಿ ಶಾರಣಯಿತು,
ಅಧರಗಳ ಸಮ್ಮಿಲನದಿ
ಚಿಗುರಿದ ಒಲವು ಹಸಿರಾಯಿತು...!!-