We bathed in the same wine
Connected and entwined
Miles away, and yet I wonder
................HOW INTIMATE?!-
My Love Ethereal,
We are miles away
I see what you see
I feel what you feel and yet
I await for the day when
I too shall blaze
Consummating in THOU alone
Like the moon ABSOLUTE!!-
ಕ್ಷಣಕ್ಷಣವೂ ನಿನ್ನೊಳು ಬೆರೆಯಲು ನೀರವ ಪ್ರತೀಕ್ಷೆ
ನಿನ್ನನುಪಸ್ಥಿತಿಯಲಿ ನಾನು ನೀನಾಗುವ ತೀವ್ರ ಅಭೀಪ್ಸೆ
ಅನುದಿನವೂ ನಿನ್ನ ಪ್ರತಿಸ್ಪಂದನೆಯ ನಿರೀಕ್ಷೆ
ಇನ್ನೆಷ್ಟು ದಿನಗಳು ನಲ್ಲ ನಮಗೀ ಅಂತರ ಪರೀಕ್ಷೆ
ಅದೆಷ್ಟು ಭಾಗ್ಯಶಾಲಿಗಳು ನಿನ್ನನು ನಿತ್ಯ ಕಾಣುವವರು
ಅದೆಂಥ ಧನ್ಯ ಜೀವಿಗಳು ನಿನ್ನೊಡನಾಟ ಪಡೆದವರು
ಹಂಬಲಿಸುತಿಹೆ ಹಿಂದಿಗಿಂತಲೂ ಅಗಾಧವಾಗಿ
ಅರ್ಪಿಸಿಕೊಳ್ಳಲು ನಿನ್ನ ಚಿರಂತನಸಖಿಯಾಗಿ
ಬಲ್ಲೆ ಅಂತರ್ಮೌನಿಯಾಗಿರುವೆ ನಿರ್ಲಿಪ್ತವಾಗಿ ಇದೀಗ ನೀನು
ಆದರೂ ಗ್ರಹಿಸಬಲ್ಲೇ ಮೌನದಾಚೆಗಿನ ನಿನ್ನ ಪಿಸುಮಾತನು-
ಭಾವಾನುಭವದ
ಹೂ ನೋಟದಾಳಕಿಳಿದು
ನಮ್ಮ ನಮ್ಮ ತನವ
ಪರಸ್ಪರ ತೊರೆದು,
ರಸಾನುಭವದ
ಹಾದಿ ಹುಡುಕುವ ಬಾ
ಪ್ರೇಮವನು ಅರಿಯುತ
ಆತ್ಮದೊಳು ಬೆಸೆಯುತ ...-
ಪರಿಪರಿಯ ಭಾವಗಳ ಗರ್ಭಧರಿಸಿರಲು ನಾನು
ಅಸಂಖ್ಯ ಭಾವಗಳ ತಂದೆಯಾಗಿರುವೆ ನೀನು
ಚಿರಂತನ ರಮಣೀಯ ನಮ್ಮಿಬ್ಬರ ಸ್ನೇಹವು
ನಿತ್ಯನೂತನ ಆನಂದ ಪ್ರೇಮದ ನಮ್ಮ ಯಾತ್ರೆಯು-
ಒಬ್ಬರನ್ನು ಪ್ರೀತಿಸುವ ರೀತಿಯಲ್ಲಿ ಗೋಚರಿಸುತ್ತದೆ
ತನ್ನ ಆತ್ಮಕ್ಕೆ ಪ್ರೇಮದ ಹಸಿವು ಎಷ್ಟಿದೆ ಎಂಬುದು-
ನೀನು ನನಗಾಗಿ ಏನನ್ನೋ ಮಾಡಬೇಕಿಲ್ಲ
ಪ್ರೇಮವನ್ನು ಹೊರತು, ಏಕೆಂದರೆ ನಾನಿಲ್ಲ.
ನಿನ್ನ ಮೊಗದಲ್ಲಿ ನಗೆ ತುಂಬಿದಾಗ ನನಗೂ ಉತ್ಸಾಹವೇ
ಆದರೆ ಪ್ರೇಮದ ಸ್ಪರ್ಶ ಮಾತ್ರ ನಿನ್ನ ಕಂಬನಿಗಳಿಂದಲೇ ಸಾಧ್ಯ,
ಒಮ್ಮೆ ಅಳು ನನಗಾಗಿ, ಅಳುವ ಅಭೀಪ್ಸೆಯನ್ನು ಹೊರದೆ ಅಳು !!-
ಭಾವನೆಗೂ ಬರವಣಿಗೆಗೂ
ನಡುವೆ ಇರುವ ಸೇತುವೆ ಮೌನ
ನಿಂತಿರುವೆನಲ್ಲಿ ಪ್ರಜ್ಞೆಯಿಲ್ಲದೆ
ಪ್ರೇರಣೆಯಾದರು ಏನಿದೆ
ಭೂತದಲ್ಲಿ ಒಲವಿಲ್ಲ
ಭವಿಷ್ಯದಲ್ಲಿ ಯಾರಿಲ್ಲ
ಈ ವೇಳೆ ಒಳಗೂ ಹೊರಗೂ
ಬರೀ ಮೌನ ಬರೀ ಮೌನ-