Anusannaiah   (Anuradha Nakshatra)
16 Followers · 3 Following

Joined 8 August 2021


Joined 8 August 2021
3 APR AT 0:06

ಅತಿಯಾದ ಪ್ರೀತಿಯ ಕೊಟ್ಟು
ಅತೀ ಬೇಗ ಹೋದೆ ನೀನು
ಕನಸಿನಲ್ಲಾದರು ಬಂದು ಮುದ್ದಾಡಿ ಹೋಗು
ಬಯಸುತ್ತಿದೆ ಮನ ನಿನ್ನ ಪ್ರೀತಿಯ
ಮರೆಯದೆ ಬಂದು ಬಯಕೆಯ ತೀರಿಸು ತಂದೆ
ಬರುವೆ ಎಂದು ಮಗಳೇ ಎಂದು

-


2 APR AT 23:41

ನೋವು ನಲಿವುಂಡ ನನ್ನಮ್ಮ
ಶಾಂತಿಯ ತವರು ನನ್ನಮ್ಮ
ಒರೆಸುವರು ಎಲ್ಲರ ಕಣ್ಣೀರು
ಧೈರ್ಯವ ತುಂಬುವರು ಎಲ್ಲೋದರು
ಸ್ವಾಭಿಮಾನದ ಬದುಕ ಹೇಳಿ ಕೊಟ್ಟರು
ಒಳ್ಳೆಯ ನಡೆಯ ಜೊತೆಗೆ ಕೊಟ್ಟರು
ಚಿಂತಿಸಿ ತಿಳುವಳಿಕೆ ಹೇಳುವರು
ಇತರರ ಮನ ನೋಯಿಸರು
ಮುಗ್ಧ ಮನಸ್ಸಿನ ನನ್ನಮ್ಮ
ಪೆದ್ದು ಮಾತನ್ನು ಆಡುವರು
ಎಲ್ಲರ ಸಂಗಡ ಬೆರೆಯುವರು
ಬೇದ ಭಾವವ ತೋರದವರು
ಬೆಳದಿಂಗಳಂತೆ ಮನೆಯ ಬೆಳಗುವರು






-


8 JAN AT 0:14

ಅಪ್ಪ,

ನೆನಪಿನಲ್ಲಿ ಉಳಿದೆ
ನೆನಪಾಗಿ ಹೋದೆ
ನೆನಪ ನೆಪದಲ್ಲಿ ನೆನೆಯುವಾಸೆ

-


11 MAY 2024 AT 22:52

ಹಂಬಲಿಸುತ್ತಿದೆ ಮನ
ಸಂಬಂಧಗಳ ಕೊಂಡಿಗಾಗಿ
ಉಳಿಸಿಕೊಳ್ಳುವುದು ಹೇಗೆ
ಮೊದಲಿನ ವಾತ್ಸಲ್ಯಗಳ ಪರಿಯ
ಪಟ್ಟು ಬಿಡದೆ ಕೂತಿವೆ ಹಠಗಳು
ಬಿಡುತ್ತಿಲ್ಲ ಕೆಲ ಸ್ವಾಭಿಮಾನಗಳು
ಇದ್ದರು ಇಲ್ಲದಂತಾಗಿದೆ ಸಂಬಂಧ
ಹೆಸರಿಗೆ ಮಾತ್ರ ಅನುಬಂಧ

-


5 MAY 2024 AT 23:30

ಬೆಳದಿಂಗಳ ಬೆಳಕಿನಲ್ಲಿ ಮರೆಯಾದೆ
ಪುಟ್ಟ ಕಂದಮ್ಮನ ಬಿಟ್ಟು ಹೋದೆ
ನಮ್ಮೆಲ್ಲರ ಮನದಲ್ಲಿ ನೆನಪಾದೆ
ಯಾರಿಗೂ ಹೇಳದೆ ಸುಮ್ಮನೆ ನೀ
ಏಕೆ ಹೋದೆ ಪ್ರಿಯ

-


16 OCT 2023 AT 0:12

ನಿದ್ದೆ ಬಾರದ ದಿನಗಳು
ಮಾಡುತ್ತಿವೆ ಸಿಹಿ ನೆನಪುಗಳ
ಕದ್ದು ಓಡುವ ಕನಸುಗಳು
ಕದಲುತ್ತಿವೆ ಮನಸ್ಸುಗಳ
ಮುದ್ದು ಮಾಡಿದ ಕೈಗಳು
ಒರೆಸುತ್ತಿವೆ ಕಣ್ಣುಗಳ
ಪೆದ್ದು ಪೆದ್ದಾಗಿ ಆಡಿದ ಮಾತುಗಳು
ನೆನೆಸುತ್ತಿದೆ ಹಳೇ ದಿನಗಳ





-


27 SEP 2023 AT 23:18

ನೋವು ನಲಿವುಂಡ ನನ್ನಮ್ಮ
ಶಾಂತಿಯ ತವರು ನನ್ನಮ್ಮ
ಒರೆಸುವರು ಎಲ್ಲರ ಕಣ್ಣೀರು
ಧೈರ್ಯವ ತುಂಬುವರು ಎಲ್ಲೋದರು
ಸ್ವಾಭಿಮಾನದ ಬದುಕ ಹೇಳಿ ಕೊಟ್ಟರು
ಒಳ್ಳೆಯ ನಡೆಯ ಜೊತೆಗೆ ಕೊಟ್ಟರು
ಚಿಂತಿಸಿ ತಿಳುವಳಿಕೆ ಹೇಳುವರು
ಇತರರ ಮನ ನೋಯಿಸರು
ಮುಗ್ಧ ಮನಸ್ಸಿನ ನನ್ನಮ್ಮ
ಪೆದ್ದು ಮಾತನ್ನು ಆಡುವರು
ಎಲ್ಲರ ಸಂಗಡ ಬೆರೆಯುವರು
ಬೇದ ಭಾವವ ತೋರದವರು
ಬೆಳದಿಂಗಳಂತೆ ಮನೆಯ ಬೆಳಗುವರು






-


18 SEP 2023 AT 0:11

ಶಾಂತಿಯ ಸ್ವರೂಪಿ
ನೋಡಲು ಸುರೂಪಿ
ಕೆಣಕಿದರೆ ಪ್ರಕೋಪಿ
ಸಹನೆಯೇ ಇವಳ ಬದುಕು
ತೋರಿಸಳು ಸಿಡುಕು
ಮಕ್ಕಳೇ ಇವಳ ಬೆಳಕು
ಹುಟ್ಟಿದಾಗಿಂಲೂ ಇಲ್ಲ ಸ್ವತಂತ್ರ
ಯಾವಾಗಲೂ ಇವಳ ಪರಿಸ್ಥಿತಿ ಅತಂತ್ರ
ಇವಳೊಂತರ ಪಂಜರದ ಗಿಳಿ
ಅಸಹನೆಯನ್ನು ಪಕ್ಕಕ್ಕೆ ತಳ್ಳಿ
ಬಾಳುತ್ತಿರುವಳು ಮನಸ್ಸನ್ನು ಮಾಡಿಕೊಂಡು ತಿಳಿ



-


30 AUG 2023 AT 14:32

ನೆಮ್ಮದಿಗೆ ನೆಲೆಯಿಲ್ಲ
ಸಂತೋಷಕ್ಕೆ ನಾಂದಿಯಿಲ್ಲ
ಚಿಂತೆಗೆ ಕೊನೆಯಿಲ್ಲ
ನಿದ್ದೆಗೆ ಜಾಗವಿಲ್ಲ
ಎಷ್ಟು ಅರಿತರು ತಿಳಿಯುತ್ತಿಲ್ಲ
ಹುಡುಕುವುದು ಹೇಗೆ ನೆಮ್ಮದಿಯ ಬದುಕ
ಬತ್ತುತ್ತಿಲ್ಲ ಕಣ್ಣೀರು
ನಿಲ್ಲುತ್ತಿಲ್ಲ ಉಸಿರು
ಕಾಡುತ್ತಿದೆ ನೋವು
ನರ ನಾಡಿಯು ಮಿಡಿಯುತ್ತಿದೆ
ನಲಿವಿನ ನರ್ತನಕ್ಕೆ
ಹುಡುಕುವುದು ಹೇಗೆ ನೆಮ್ಮದಿಯ ಬದುಕ
ಕಂಬನಿಯು ಬಯಸುತ್ತಿದೆ
ಭರವಸೆಯ ಬೆಳಕ
ಕಿವಿಯು ಬಯಸುತ್ತಿದೆ
ಒಲುಮೆಯ ಮಾತನ್ನ
ತೊದಲು ದನಿಯು ಬಯಸುತ್ತಿದೆ
ಮುತ್ತಿನ ನುಡಿಯ
ಹುಡುಕುವುದು ಹೇಗೆ ನೆಮ್ಮದಿಯ ಬದುಕ

-


30 AUG 2023 AT 1:33

ನನ್ನ ಕವನಕ್ಕೆ ಸ್ಪೂರ್ತಿಯಾದ
ಸಾಲುಗಳು ಕೆಲವು
ಅನುಭವದ ಸಾಲುಗಳು ಕೆಲವು
ಕಾಲ್ಪನಿಕ ಸಾಲುಗಳು ಕೆಲವು
ಸಮಯ ಹಾಳುಮಾಡಲೆಂದೆ ಬರೆದ ಸಾಲುಗಳು ಕೆಲವು
ಸಂಧರ್ಭದ ಸಾಲುಗಳು ಕೆಲವು
ವೈಯಕ್ತಿಕ ಸಾಲುಗಳು ಕೆಲವು
ಕೆಲವು ಕೆಲವು ಸೇರಿ ಆಯಿತು
ಕೆಲವು ಕವನಗಳು

ಮೆಚ್ಚಿದ ಕವನಗಳು ಕೆಲವು
ತಪ್ಪು ಬರೆದ ಅಕ್ಷರಗಳು ಕೆಲವು
ಹೊಗಳಿದ ಕವನಗಳು ಕೆಲವು
ತೆಗಳಿದ ಕವನಗಳು ಕೆಲವು
ತಿದ್ದಿದ ಕವನಗಳು ಕೆಲವು
ತಿದ್ದದೆ ಬರೆದ ಕವನಗಳು ಕೆಲವು
ಕೆಲವು ಕೆಲವು ಸೇರಿ ಆಯಿತು
ಕೆಲವು ನನ್ನ ನೆಚ್ಚಿನ ಕವನಗಳು

ಆಡಿ ಬರೆದ ಕವನಗಳು ಕೆಲವು
ನೋಡಿ ಬರೆದ ಕವನಗಳು ಕೆಲವು
ಬೇಜಾರು ಕಳೆಯಲೆಂದು ಬರೆದ ಕವನಗಳು ಕೆಲವು
ಬೇಜಾರಾಗಿ ಬರೆದ ಕವನಗಳು ಕೆಲವು
ಖುಷಿಯಿಂದ ಬರೆದ ಕವನಗಳು ಕೆಲವು
ಖುಷಿಯಾಗಲೆಂದೇ ಬರೆದ ಕವನಗಳು ಕೆಲವು
ಕೆಲವು ಕೆಲವು ಸೇರಿ ಆಯಿತು
ಕೆಲವು ನನ್ನ ನೆಚ್ಚಿನ ಕವನಗಳು

-


Fetching Anusannaiah Quotes