QUOTES ON #ಮೋಡಗಳು

#ಮೋಡಗಳು quotes

Trending | Latest
7 AUG 2020 AT 17:05

ಚಳಿಯಾಗುತ್ತಿದೆ ಮತ್ತೆ...

(ಪೂರ್ಣ ಕವಿತೆ caption ನಲ್ಲಿ)

-



ಮಿಂಚಂತೆ ಬಂದು ಗುಡುಗಿನಂತೆ ಗುಡುಗಿ ಮಳೆಯಂತೆ ಸುರಿದು.....ಏನೂ ಗೊತ್ತಿಲ್ಲದ ಪಾಪಚ್ಚಿ ತರ ಮೌನವಾಗಿ ಕೂರುವವರೇ ಹುಡುಗಿಯರು .

-



ಆ ಮೋಡಗಳನು
ಭಾವನೆಯಲಿ ಬಾಚಿ
ನಿನ್ನ ಮಡಿಲಿನಲಿ
ಪ್ರೀತಿಯ ತಂಪನೆರದು
ಬಿಸಿಯುಸಿರಿನಲಿ
ನಿನ್ನ ಸಿಹಿ ಮುತ್ತುಗಳ
ಪಡೆಯಬೇಕೆಂದು
ಬಂದಿರುವೆ
ತಿರಸ್ಕರಿಸದೆ ಬಂದು
ನೋಡೊಮ್ಮೆ
ಮೋಡಗಳು ಕರಗಿ
ಕೈ ಜಾರಿ ಹೊಗುವ ಮುನ್ನ

-


5 JUN 2022 AT 17:08

ಮೋಡಗಳ ತಪ್ಪೇನು..???
ಅವು ಸುರಿಯುತ್ತವೆ...
ಮನಸ್ಸು ಹಗುರ ಮಾಡಿಕೊಳ್ಳುವ
ಹಕ್ಕು ಎಲ್ಲರಿಗೂ ಇದೆ..!!!

-


26 MAR 2022 AT 16:04

ಸೆಕೆ ಮಾತ್ರ ಹೆಚ್ಚಾಗ್ತಿದೆ..
ಮಳೆಯ ಆಸೆಯನೂ ಬಿಟ್ಟಿಲ್ಲ..!
ಕೇಶಗಳ ಶ್ವೇತದಿಂದ
ಫೋಟೋಗಷ್ಟೇ ವಯಸ್ಸಾಗಿದೆ
ಮನಸ್ಸಿಗೆ ಇಪ್ಪತ್ತ್ ಆಗಿಲ್ಲ..!!

-


12 NOV 2019 AT 19:10

ಕನ್ನಡಕದೊಳಗಿಂದ ಕಾಣುತ್ತಿದೆ
ಮೋಡಗಳ‌ ಅಂದ
ಕವಿದ ಕಾರ್ಮೋಡದ ಚೆಂದ
ಕಾಣುತ್ತಿದೆ‌ ಕಣ್ಣಿಗೆ‌ ಆನಂದ..
_ಶೃತಿ ಶೈವ


-


16 JUL 2023 AT 18:45

ಕೆಲವರಿಗೆ ಮೋಡಗಳು ಮಳೆಹನಿಗಳನ್ನು
ಹೊತ್ತು ತಂದರೆ,
ಇನ್ನುಕೆಲವರಿಗೆ ನೆನಪುಗಳ ಬೆಂಕಿಮಳೆ
ಸುರಿಸುತ್ತವೆ....!!

-


15 OCT 2020 AT 20:09

ಚಲಿಸುವ ಮೋಡಗಳೇ
ನಿಬ್ಬೆರಗಾದ ಸಂಜೆಯದು,
ಮನದ ಭಾವಗಳನ್ನು
ಬಡಿದೆಬ್ಬಿಸಿದ ಕ್ಷಣವದು..

-


23 OCT 2022 AT 18:08

ನಿನ್ನ ನೆನಪಿನ
ಹೊಂಬಿಸಿಲಿನಲಿ
ಭಾವಗಳ ಮಳೆ
ಮಿಂದು
ಮೋಡಗಳಾಗಿ ಬಿತ್ತರಿಸಿ
ಚಲಿಸುತಿವೆ
ಮನದ ಬಾನಂಚಲಿ.

-


25 MAR 2022 AT 23:22

ಸೂರ್ಯನ ಮಂದವಾಗಿಸಿದರೂ ಚಂದ್ರಮನ ಮರೆಯಾಗಿಸಿದರೂ
ಮೋಡ ಸುರಿಯಲೇ ಬೇಕು ಬೆಳಕು ಹರಿಯಲೇ ಬೇಕು. ವರುಣನ ದಾಳಿಗೆ ಚದುರಿ ಮೋಡ ಸ್ವಾರ್ಥವ ಮುರಿಯಲೇ ಬೇಕು.

-