ಸ್ನೇಹಿ   (ಸ್ನೇಹಿ)
94 Followers · 95 Following

read more
Joined 13 January 2023


read more
Joined 13 January 2023
3 SEP 2023 AT 18:11

ಮನದ ಭಾವನೆಗಳು ಪುಟಗಳಾಗಿ
ಗೀಚಿದ ಸಾಲುಗಳು ಕವಿತೆಗಳಾಗಿ
ಚಂದಿರನ ಅಂಗಳವ ಶೃಂಗರಿಸಿ
ಕಾದಿಹೆನು ಒಲವಿಗೆ ಅವಸರಿಸಿ....!!

ಎದೆಯೊಳಗೆ ಪಲ್ಲಕ್ಕಿಯ ಇರಿಸಿ
ಕೂಡಿಟ್ಟ ಪ್ರೀತಿಯ ಮುಡಿಗೇರಿಸಿ
ಹೃದಯದ ರಥಬೀದಿ ಕಾದಿದೆ
ಮನದರಸಿಯ ಪಾದದ ಸ್ಪರ್ಶಕೆ....!!

ಒಲುಮೆಯ ಗೂಡಿಗಚ್ಚು ಹಣತೆ
ಬೆಳಗಲಿ ಬದುಕು ರವಿಯಂತೆ
ಕಾರ್ಮೋಡದ ಕತ್ತಲು ಸುಳಿಯದಿರಲಿ
ಎಂದಿಗೂ ಜೊತೆಬಿಡದೆ ಬಾಳುಸಾಗಲಿ....!!

-


3 SEP 2023 AT 11:07

ಕಿರು ಭಾವದೀವಿಗೆ....❤️
ಅಡಿಬರಹ ಓದಿ(Read Caption)
👇👇👇👇👇👇

-


2 SEP 2023 AT 18:35

ಆತನಿಗೊಂದಿಷ್ಟು ಸಾಲು....❤️
"ಅಪ್ಪ"
ಅಡಿಬರಹ ಓದಿ (Read Caption)
👇👇👇👇👇👇👇

-


1 SEP 2023 AT 18:10

ಕಣ್ಣ ಹನಿಗಳೆ ಬಲ್ಲವೂ
ಕಣ್ಣೊಳಗಿನ ನಿನ ನೆನಪನು
ಅಳಿಸಲಾಗದೆ ಮರೆಯಲಾಗದೆ
ನೋವಿನ ಸಂತೆಯೊಳಗೆ ಮುಳುಗಿದೆನು
ಕಂಬನಿಯ ಸಾಲುಗಳಿಗೆ ಕವಿತೆಯಾದೇನು..!!

-


31 AUG 2023 AT 18:59

ಹೃದಯದ ಪಿಸುಮಾತು ಹಾಡಾಗಿದೆ
ಎದೆಯೊಳಗಿನ ಸದ್ದು ನಿನ್ನೆಸರೇಳಿದೆ
ಕಡಲ ದಡದಾಚೆಗೂ ಕೂಗಿಹೇಳಲೇನು
ನಿನಾಗಿರುವೆ ನನ್ಮನದ ಸಿಹಿಜೇನು....!!

ರವಿಯ ಹೊಂಗಿರಣ ನಿನ್ಮೋಗದೊಳಗೆ
ಶಶಿಯ ಚೆಲುವೆಲ್ಲಾ ನಿನಕಂಗಳೊಳಗೆ
ಭುವಿಯ ಹಸಿರೆಲ್ಲಾ ಉಡುಪಾಗಿಹೇ
ಕೋಗಿಲೆಯ ರಾಗವೆಲ್ಲ ಧ್ವನಿಯಾಗಿಹೇ....!!

ಕಾಲ್ಗೆಜ್ಜೆಯ ನಾದವು ಮನಹೊಕ್ಕಿ
ಹಸಿರಾಗಿಹುದು ಒಲವು ಪ್ರೀತಿಉಕ್ಕಿ
ಬಾಡದಿರಲು ಪ್ರೇಮ ನೀ ಸನಿಹವಿರೆ
ಬದುಕು ಆಗಿರುವುದು ಸಿಹಿಜೇನಸಕ್ಕರೆ....!!

-


30 AUG 2023 AT 18:11

ಹುಣ್ಣಿಮೆಯ ಚಂದಿರನ ಬೆಳಕು
ಇರುಳಿಗೆ ತಂದಿಹುದು ಹೊಳಪು
ಒಲವಿನ ಸವಿಗಾನಕೆ ಧ್ವನಿಯಾಗಿ
ಹಾಡಾಗಿದೆ ಪ್ರೇಮದ ಸ್ವರವಾಗಿ...!!

ರಂಗೇರಿದ ಪ್ರೀತಿಯ ಮಡಿಲೊಳಗೆ
ಮಗುವಾಗಿ ಮಲಗಿದೆನು ಮಮತೆಯೊಳಗೆ
ಎದೆಯೊಳಗಿನ ಉಸಿರು ಬಿಸಿಯಾಗಿ
ಮಾತುಗಳಿರದ ಮೌನಕೆ ಸಾಕ್ಷಿಯಾಗಿ...!!

ಹೃದಯದ ಕೂಗು ಮುಗಿಲಿಗೇರಿದೆ
ಪ್ರೀತಿಯ ಸಾನಿಧ್ಯಾ ಮರೆಯಾಗಿದೆ
ಬಾಬಾರ ಗೆಳತಿ ಆತ್ಮಸಾoಗತ್ಯಕೆ
ಶ್ರುತಿಯಾಗಿ ಹಾಡುವ ಒಲವಗೀತೆಗೆ...!!

-


29 AUG 2023 AT 18:10

ನೀನೊಂದು ಖಾಲಿ ಪುಸ್ತಕ.
ಗೀಚಲು ಬಂದಿರುವೆ,
ನಾ ಒಲವ ಗೀತೆಗಳ ಲೇಖಕ....!!
ಹೃದಯದ ಸಾಲುಗಳಿಗೆ ಕೊಂಚ
ಸಹಕರಿಸು.
ಪುಟವೆಲ್ಲ ಶೃಂಗರಿಸಿ ಬರೆಯುವೆನು
ನಿನ್ನೆಸರ, ಮನ್ನಿಸು....!!

-


28 AUG 2023 AT 18:15

ಮನವೆಕೋ ಹಠ ಮಾಡಿದೆ
ತಿಳಿದು ತಿಳಿಯದ ನೋವಿಗೆ
ಒಲವ ಸುಳಿಯೊಳಗೆ ಸಿಲುಕಿ
ಕಾಣದ ದಾರಿಯ ಹುಡುಕಿ...!!

ಮುಗ್ಧ ಭಾವನೆಗಳಿಗೆ ಒಡತಿ
ಪ್ರೇಮ ಕವಿತೆಗಳಿಗೆ ಸಾರಥಿ
ಪುಟಗಳಿಗೆ ಪದಗಳ ಬೆರೆಸಿ
ಬರೆದಳು ಪ್ರೇಮಪುಸ್ತಕವ ಅರಸಿ...!!

ಕನಸಾಗುವ ಬಯಕೆ ಮೂಡಿತ್ತು
ನಿರಾಸೆಯ ಬರೆ ಬೆನ್ನೇರಿತ್ತು
ಭಾಂಧವ್ಯದ ಬಲೆಗೆ ಬಂಧಿ
ಬಿಡಿಸಲಾಗದೆ, ನೋವಿಗೆ ಸಂಧಿ...!!

-


27 AUG 2023 AT 17:57

ಮನದ ಪುಟಗಳಿಗೆ ನಿನ್ನೆಸರಿಡಲೇ.
ಭಾವತುಂಬಿ ಕುಂಚಗಳಿಗೆ,
ಚಿತ್ರವಾಗಿಸಲೇ....
ಕವಿತೆಯಾಗಿಸಲೇ, ಹಾಡಾಗಿಸಲೇ.
ಮನದ ಮಂದಿರದೊಳಗೆ
ಮಡದಿಯಾಗಿಸಲೇ...

-


26 AUG 2023 AT 19:35

ತಿವಿದಳೆದೆಗೆ ಹಾರೆಯಾ.
ಬಳಿಕ,
ಕೇಳಿದಳು ನೋವಿದೆಯಾ...!!
😂😁🤦‍♂️

-


Fetching ಸ್ನೇಹಿ Quotes