೭00 ಕೋಟಿ ರೂಪಾಯಿಗಳಷ್ಟು
ಹೂವುಗಳ ರಫ್ತು ಮಾಡುತ್ತೇವೆ.
ಅದೇ ಸೌಂದರ್ಯ ವರ್ಧಕಗಳನ್ನ
೨೮೦೦೦ ಕೋಟಿ
ರೂಪಾಯಿಗಳಷ್ಟು
ವಿದೇಶಕ್ಕೆ ಕಳಿಸಿ ಕೊಡುತ್ತೇವೆ.!
ಕೃತಕವೋ, ನೈಸರ್ಗಿಕವೋ
ಏನೋ ಒಂದು..
ನಾವು ಭಾರತೀಯರು
ಸೌಂದರ್ಯ ಸೇವೆಯಲ್ಲಿ
ಬೆರಗು ಮೂಡಿಸುತ್ತೇವೆ.!!
-
ಎಷ್ಟ್ ಹೊತ್ ಒಂದೇ ಕಡೆ ಇರಲಿ...
# # # # # # # #
ಉತ್ತರ ಕನ್ನಡ ಜನ್ಮಭೂಮಿ..
ಬೆಂಗಳೂ... read more
ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ
ಛಾಯಾಚಿತ್ರ ಸ್ಪರ್ಧೆಯಾಗಿದೆ ನಮ್ಮ ಈ ಚಿಕ್ಕ ಪ್ರವಾಸ !
ಅನುಮೋದಿಸು ನೀ, ವಿಳಂಬಿ ಯಿಂದ ಮನ್ಮಥದವರೆಗೆ..
ಸಂವತ್ಸರಗಳ ಸವೆಸಲಿ ಈ ಸಹವಾಸ!!-
ಪ್ರತಿ ಕ್ಷಣವೂ ಅನುಭವವೇ
ಹೊರತು
ಗೋಳು ಅನ್ನಬಾರದು!
ಸಾಂಬಾರು ಹೇಗೇನೇ ಇರಲಿ..
ಮೂಲಂಗಿಯಾದರೂ ಸರಿ,
ನವಿಲುಕೋಸಾದರೂ ಸರಿ,
ಇಪ್ಪತ್ತೈದಕ್ಕೂ ಕಡಿಮೆ
ಹೋಳು ತಿನ್ನಬಾರದು!!-
ಸುಂದರ ಪಯಣದ ಆಶಯ ಒಂದೇ,
ಕೇಳಿದ ಮೂಲೆಯಲೊಂದು ಜಾಗ ಸಿಗಬೇಕು!
ಪಕ್ಕದ ಸೀಟಿಗೆ ಬರುವವರೆಲ್ಲಾ ನನ್ನಂತಿರಬೇಕು,
ಅಥವಾ ಅದು ಖಾಲಿ ಇರಬೇಕು!!-
ಮೊಳೆ ಹೊಡೆದು
ಘಾಸಿಗೊಳಿಸಬಾರದು
ಎಂದು ಬಾಡಿಗೆದಾರರಿಗೆ
ಮೊದಲೇ ಹೇಳಿಬಿಡಬೇಕು..
ಮನೆಯಾದರೂ ಸರಿ,
ಮನಸ್ಸಾದರೂ ಸರಿ!
ಚಿಂತೆಯಿಲ್ಲ ಬಿಡಿ ಅವರಿಗೆ
ಅಂಟಿನ ಹುಕ್ ಗಳು ಬಂದಿವೆ
ಮಾರುಕಟ್ಟೆಗೆ,
ಬೇಕೆಂದಾಗ
ಬದಲಾಯಿಸಬಹುದು...
ಮನೆಯಲ್ಲಾದರೂ ಸರಿ,
ಮನಸ್ಸಲ್ಲಾದರೂ ಸರಿ !!-
ಲ್ಯೂಟ್, ಔಡ್,
ವಿಹುಯೆಲಾ
ಅಂತೆಲ್ಲ ಇದ್ದ
ವಾದ್ಯಗಳು
ರೂಪಾಂತರವಾಗಿ
ಗಿಟಾರ್
ಆಗಿದೆಯಂತೆ.!
ಒಳ್ಳೆಯದೇ
ಆಗಲಿದ್ದರೆ
ಮನುಷ್ಯನೂ
ಬದಲಾಗಲಿ,
ತಪ್ಪಿಲ್ಲ.!!-
ತರಕಾರಿ, ಮೊಸರು,ಹಾಲು, ಧಾನ್ಯಗಳ
ತ್ಯಜಿಸುವ ವ್ರತವಂತೂ ಅಲ್ಲ!
ಮಳೆಗಾಲದ ಮುದ ನೀಡುವ
ಸಂಭ್ರಮದ ಕ್ಷಣಗಳೇ
ನನಗೆ ಚಾತುರ್ಮಾಸ..!!-
ಅಲ್ಪನಾ..ಐಪಾನ್.. ರಂಗೋಲಿ.. ಅರಿಪಾನ್...
ಯಾವ ಭಾಷೆಯಲ್ಲಿ ಕರೆದರೂ
ಮುಂದುವರೆಯುವುದು ಈ ಅನುಷ್ಠಾನ...!
ಹರಡಿಕೊಂಡಿದೆಯಲ್ಲ ಅಂಗಳದಲ್ಲಿ
ಹುಡಿಯಲ್ಲ, ಭಾವನೆಗಳಿವು..
ಅಡಿ ಇಡುವಾಗ ತುಸು ಜೋಪಾನ!!-
ಮಳೆಗಾಲದ ಸಂಜೆಗಳಲ್ಲಿ
ಹೊಸ ಹೊಸ ಪ್ರಮೇಯಗಳು
ಅರ್ಥವಾಗುತ್ತವೆ !
ವೃಷ್ಟಿ ಮಾಪಕದ
ಅಂಕಗಳು ಏರುತ್ತವೆ..
ಪಾನೀಯಗಳ ದಾಸ್ತಾನು
ವಿಲೋಮವಾಗುತ್ತವೆ!!-
1mm ವರೆಗೆ ಬೆಳೆಯುವ ವಾಟರ್ ಮೀಲ್ ಹೂವನ್ನು ನೋಡಿಲ್ಲ..
1000mm ಇರುವ ರಾಫ್ಲೇಶಿಯಾ ನೂ ಕಂಡಿಲ್ಲ!
ನನಗೆ ಗೊತ್ತಿರುವ ಹೂವುಗಳ ಪೈಕಿ ಬರೀ ಎರಡು,
ಗುಡಿಯಲ್ಲಿ ಸಿಗುವ ಪ್ರಸಾದ ಮತ್ತು ನೀನು!!-