ಲೌಕಿಕ ಜಗತ್ತಿನಲ್ಲಿ ಹಣಗಳಿಕೆಯನ್ನೆ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಥವಾ ಯಾವುದೇ ಕ್ಷೇತ್ರದಲ್ಲಿ ಪಡೆಯು ಪದಕಗಳೇ ಸಾಧನೆಯಾಗಿಬಿಟ್ಟಿವೆ.
-
ಅರಿವಿಲ್ಲದ ಬುದ್ಧಿಗೆ ಅನುಭವದ ಮದ್ದು,
ಹಚ್ಚಿ ನಡೆ ಮುಂದೆ...
ಬಾಳನರಿತವರ ಮಾತೊಂದು ಸಾಕು,,
ನೂರು ಗ್ರಂಥಾಲಯ ಓದಿ
ಮುಗಿಸಿದಂತೆ.!!-
ಸಂಸ್ಕಾರವೆಂಬುದು ನಮ್ಮಿಂದ ಕಣ್ಮರೆಯಾಗುತ್ತಿರುವುದು,
ನಮಗೆ ಸಿಕ್ಕ ಎಲ್ಲೆ ಮೀರಿದ ಸ್ವಾತಂತ್ರ್ಯದಿಂದ.
ಮತ್ತು
ನಮ್ಮ ಹಿರಿಯರನ್ನು ಕಡೆಗಣಿಸುತ್ತಿರುವುದರಿಂದ.-
*ಮೌನಗೀತೆ*
ಪ್ರೀತಿಗೆ ಬೇಕಿಲ್ಲ ಮಾತಿನ ಮಾಯೆ,
ಅದಕೆ ಬೇಕಿರುವುದೆಲ್ಲ
ಮೌನದ ಛಾಯೆ.
ಭಾವನೆಗಳ ಆಲಾಪನೆ ಮಾತಾದರೆ
ಪ್ರೇಮದ ಆರಾಧನೆಯೇ ಮೌನ.!
ಹಾಗಾಗಿ ನನ್ನ ಮೌನ ಮಾತಾದ ಕ್ಷಣ,
ಸಿಗುವುದೇನೋ ನಿನಗೆ ಒಲವಿನ ಆಲಿಂಗನ.
ನನ್ನ ಮೌನ ಮಾತಾಗದಿದ್ದರೂ,
ಭಾವನೆಗಳ ಆಲಾಪನೆ ನಿನಗೆ ಕೇಳದಿದ್ದರೂ,
ಸದಾ ಉಲಿಯುತಿಹುದು ನನ್ನಲಿ
ಮೌನರಾಗ,
ಅದೇ ನಿನಗಾಗಿ ಮಿಡಿಯುತಿರುವ
ಪ್ರೇಮರಾಗ.!
-
ಬಾರದ ಮಳೆಗೆ...
ಮುಗಿಲ ನೋಡಿ ನೊಂದಿದೆ...
ರೈತನ ಮನ...
ಹೇ.... ಮಳೆರಾಯ ಬೇಗ ಧರೆಯನ್ನ ತಂಪಾಗಿಸು.
ನಿನ್ನಯ ನಂಬಿ ಎಷ್ಟೋ ಜೀವಗಳು ಕಾದು ಕೂತಿವೆ.-
ಕುಲದ ಹೆಸರನ್ನು ನೆಲೆಗೊಳಿಸುವ,ತುಂತುರು ಆಸೆಗಳಿಗೆ ಭರವಸೆ ತುಂಬುವ,ಭಾವನೆಗಳ ಮಹಾಪೂರವೇ ಕುಟುಂಬ.
-
ಮನಸಲ್ಲಿ ಮನೆಮಾಡಿರುವೆ
ನೀ ಜೊತೆಗೂಡಿ..
ನಿನ್ನ ನೋಡಲು ಹೊರ ಕರೆಯಬೇಕು
ನಾ ಈಗ ಒಂದು ಪದವು ಹಾಡಿ..
ನಾ ಬಿದ್ದೆ ನಿನ್ನ ಹಿಂದೆ ನೀ ಮಾಡಿದ
ಮೇಲೆ ಮೊಡಿ..
ಗುಲಾಬಿ ತಂದಿರುವೆ ತೆಗೆದುಕೋ
ಇಲ್ಲವಾದರೆ ಹೋಗುವುದು ಬಾಡಿ.
-
ನೆನಪುಗಳು ಸಹ ಬೇರಿನಂತೆ
ಇಳಿವುದು ಎದೆಯೆಂಬ ಭುವಿಗೆ
ಕಷ್ಟವೆಂಬ ಕೊಡಲಿಯೇಟು ಬಿದ್ದಾಗ
ಚೀರುವುದು ಜೀವ ಒಳಗೊಳಗೆ
ನಲಿವಿಗಿಂತ ನೋವೇ ಜಾಸ್ತಿ
ಜೀವಾಳದ ಒಲವಿನೊಳಗೆ
ಏನಾದರೂನು ಭುವಿಯ ತೊರೆದು
ಹೊರಗೆ ಬರದು ಮನದ ಬೇರು
-
ರಂಗ ಹೇಳಿದ್ದಿಷ್ಟೇ..
ಯಾವ ರಂಗದಲ್ಲೇ ಇರು,
ಅಂತರಂಗದಲ್ಲಿ ಚೆನ್ನಾಗಿರು..!-