ಜೀವನದಲ್ಲಿ ನಾವು ಎಲ್ಲಿಯವರೆಗೆ ಎಲ್ಲವನ್ನೂ
ಸಹಿಸುಕೊಂಡು ಇರುತ್ತೇವೋ,ಅಲ್ಲಿಯವರೆಗೆ
ಎಲ್ಲರೂ ನಮ್ಮವರೇ!
ಒಂದು ಸಾರಿ ತಿರುಗುತ್ತರಿಸಿದರೆ,
ಅವರು ನಮ್ಮ ದ್ವೇಷಿಗಳಾಗುತ್ತಾರೆ.
ಹಾಗಾಗಿ ಸಮಯ,ಸಂದರ್ಭಗಳು ಹೇಗೇ ಇರಲಿ,
ನಾವು ತಾಳ್ಮೆಯುತವಾಗಿದ್ದರೆ,ಎಲ್ಲವೂ ತಾನಾಗಿಯೇ
ಸರಿಯಾಗುತ್ತದೆ.
-
ಪ್ರಕೃತಿ ಜೀವಿ💚
ನನ್ನ ಮನಸ್ಸಿಗೆ ತೋಚಿದ್ದನ್ನಾ ಇದರಲ್ಲಿ ಯಥಾವತ್ತಾಗಿ ಪದಗಳ ಮೂಲಕ ಭಟ್... read more
ಬೆಟ್ಟದ ಹೂವಾಗಿ,
ಆಕಾಶದಷ್ಟು ಪ್ರೀತಿಯನು ಉಣಬಡಿಸಿ,
ಪೃಥ್ವಿ ಯಲ್ಲಿ ಯುವರತ್ನ ನಾಗಿ ಪ್ರಜ್ವಲಿಸಿ,
ಅರಸು ಆಗಿ ಅಭಿಮಾನಿಗಳ ಮನ ಗೆದ್ದ,
ಮುಗ್ಧ ಮನಸ್ಸಿನ ನಟಸಾರ್ವಭೌಮ,
ನಗುವಿನ ಪರಮಾತ್ಮ,
ನೃತ್ಯದಲ್ಲಿ ರಣವಿಕ್ರಮ,
ನಗುಮೊಗದ ರಾಜಕುಮಾರ,
ಪುನೀತನೆಂಬ ಸಹೃದಯನ ದೇಹದಲ್ಲಡಗಿದ ಹೃದಯಕ್ಕೇನು ಅವಸರವಿತ್ತು!
ಒಮ್ಮೆ ಮತ್ತೊಂದು ಅವಕಾಶ ನೀಡಬೇಕಿತ್ತು...-
ಹೃದಯದ ಬಡಿತವೇ ತುಸು ತುಸು ನಿಂತುಬಿಡು!
ಎದೆಯೂರಿನ ನಿಲ್ದಾಣ ಸಿಕ್ಕಾಗಿದೆ..
ಹೃದಯದ ಬಡಿತವೇ ತುಸು ಸಿದ್ಧವಾಗು!
ಆ ನಿಲ್ದಾಣದಲ್ಲಿ ನಿನ್ನ
ಜೋಡಿ ಹೃದಯವ ಬಿಟ್ಟು
ಮತ್ಯಾರೂ ಇಲ್ಲ..!
ಪ್ರೀತಿ ನಿಲ್ದಾಣದಲಿ,
ಪ್ರೇಮ ವಿಹರಿಸಲಿ..
ಬಾಳು ಹಸನಾಗಲಿ....-
ಅಪರಿಚಿತರು ಪರಿಚಿತರಾಗಿ,
ಸಣ್ಣ ಪುಟ್ಟ ಮಾತಿನಲ್ಲಿ ಶುರುವಾದ ನಮ್ಮ ಗೆಳೆತನ,
ಜೊತೆಗೂಡಿ ಕಲಿಯುತ್ತಾ,
ಹೊಡೆದಾಟ, ಗುದ್ದಾಟ, ಪ್ರಯಾಣದೊಡಗೂಡಿ,
ಸ್ನೇಹ ಸಾಗರದಲ್ಲಿ ಬಂಧಿಯಾಗಿದೆ.💝
ಇನ್ನೇನು ಕೆಲ ದಿನಗಳಲ್ಲಿ
ಮುಕ್ತಾಯವಾಗಲಿದೆ
ನಮ್ಮ ಕಾಲೇಜು ಜೀವನ.🙃
ಚಿಕ್ಕ ಗುಂಪಾದರೂ,
ಜಾಸ್ತಿ ಮೋಜು,ಮಸ್ತಿ ಇರುವ
ನಮ್ಮೀ ಗುಂಪನ್ನು ಬಿಡುವುದೆಂದರೆ,
ಊಹಿಸಲೂ ಅಸಾಧ್ಯ..
ಎಂದಿಗೂ ಹೀಗೆ ನಮ್ಮೀ ಬಂಧನವಿರಲಿ.
ತುಸು ಹೆಚ್ಚೇ ಪ್ರೀತಿ, ಹೊಡೆದಾಟ ಮುಂದುವರೆಯಲಿ. 🥰 :)
-
ಗೆಳೆಯ...
ಕನಸುಗಳ ಬೆನ್ನಟ್ಟಿ
ಓಡುವ ನನ್ನ ಆಸೆಗೆ
ನಿನ್ನ ಕನಸುಗಳೂ ಜೊತೆಯಾದರೆ
ಬದುಕೆಲ್ಲಾ ಸಾಧನೆಯ ಪಯಣವಲ್ಲವೇನು...?
ನಮ್ಮೀ ಕನಸುಗಳ
ನನಸಾಗಿಸುವ ಬಾಳು
ಅಮೃತದ ಸವಿಯಲ್ಲವೇನು...?-