ಕಷ್ಟಗಳೆಂಬ ಮಹಾಪರ್ವಕ್ಕೆ
ಧೈರ್ಯವೆಂಬ ಸರಳು ತೊಟ್ಟು
ಪ್ರಯತ್ನ ˌಆತ್ಮವಿಶ್ವಾಸಗಳ ದಾಸರಾಗಿ
ಏಕಾಗ್ರತೆ ˌಆಸಕ್ತಿಗಳ ಹರಿಕಾರರಾಗಿ
ಅಭ್ಯಾಸ ˌಪರಿಶ್ರಮಗಳ ಗೆಳೆಯರೊಂದಿಗೂಡಿ
ದೇಹವೆಂಬ ಮಂದಿರಕ್ಕೆ
ಅಣಿಮುತ್ತುಗಳ ಪೋಣಿಸುತ್ತಾ
ಕೆಚ್ಚೆಂಬ ಶೂರತನದಿ ಸಟೆದೆದ್ದು ನಿಲ್ಲುವಂತೆ ಮಾಡಿ
ಗುರಿಯೆಂಬ ಬಾಣವೂಡಿ
ಗೆಲುವೆಂಬ ಗದ್ದುಗೆಯೇರಲು
ಮನವೆಂಬ ಜಮೀನಿಗೆ ಒಳ್ಳೊಳ್ಳೆ ಕೆಲಸಗಳೆಂಬ
ಬೀಜವ ಬಿತ್ತುತ್ತಾ ಸೋಮಾರಿತನವೆಂಬ ಕಳೆಯ
ಕಿತ್ತೊಗೆದು ಪರರೆಂಬ ಜಿಗಣೆಗಳ ಮೇಲೆ
ಅವಲಂಬಿತವಾಗದೆ ತನ್ನ ದಾರಿಯಲಿ
ಮುನ್ನುಗ್ಗುವ ಮಾರ್ಗವನ್ನು ಸಿಂಗರಿಸಿಬೇಕು..!!-
ಮನುಷ್ಯ ಅನ್ನೊ ಪ್ರಾಣಿ,
ಪ್ರಾಣಿಗಳ ಆಹಾರವನ್ನೆಲ್ಲ
ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಲು
ಒಂದು ದಿನ ಪ್ರಾಣಿಗಳೆಲ್ಲ
ಮನೆ ಮಾಗಿಲಿಗೆ ಬಂದು
ಬಾಗಿಲು ಬಡಿದು ಆಹಾರ ಕೇಳುವುದರಲ್ಲಿ
ಆಶ್ಚರ್ಯ ವಿಲ್ಲ-
ಅಕ್ಕ - ಪಕ್ಕದವರ ಬಗ್ಗೆ
ಮಾತಾಡುವುದ
ಬಿಟ್ಟು ನಮ್ಮ ಹಾದಿಯಲಿ
ನಿರಂತರವಾಗಿ ಸಾಗುತಿರಬೇಕು 👑-
ಸೋಂಬೇರಿತನ ಬಿಟ್ಟು ಕಷ್ಟ ಪಟ್ಟು
ದುಡಿಬೇಕು. ಇಷ್ಟ ಬಂದಹಾಗೆ ಬದುಕಬೇಕು.
ನಮ್ ಜೊತೆ ಬೇರೆಯವರನ್ನು ಬೆಳೆಸಬೇಕು.
-
ಒಬ್ಬರನ್ನು ತುಳಿದು
ಮುಂದೆ ಬಂದ್ರೆ ಅದು ಅನಾಚಾರ ..
ಒಬ್ಬರನ್ನು ತಿಳಿದು
ಬೆಳೆಸಿ ತಾನು
ಬೆಳೆಯುವುದು
ಆಚಾರ....
-
ಸ್ಪಷ್ಟ ಗುರಿ ಇರಲಿ, ಅದರ ಸಾದನೆಗೆ ನಿರಂತರ
ಪ್ರಯತ್ನ ವಿರಲಿ
ಕುಗ್ಗದ ಆತ್ಮವಿಶ್ವಾಸ ವಿರಲಿ
ಸೋಲಿಗೆ ಧೃತಿಗೆಡದೆ ಅದರ ಕಾರಣಗಳನ್ನು ತಿಳಿದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ವಿರಲಿ
ಎದುರಾಗುವ ಜಟಿಲ ಸನ್ನಿವೇಶವನ್ನು ಎದೆಗಾರಿಕೆಯಿಂದ ಮೆಟ್ಟಿನಿಲ್ಲಿ..-
ಮೊದ್ಲು ನಮ್ಮನ್ನ ನಾವ್ ನಂಬೇಕು.
ನನ್ನಿಂದ ಎಲ್ಲುವು ಸಾಧ್ಯ ಅನ್ನೋ ಮನೋಭಾವ ಬೆಳುಸ್ಕೊಳ್ಬೇಕು..
ತುಂಬಾ ಬೆಳದ್ಮೇಲೆ ನಾವು ಸರಳವಾಗಿ ಬದುಕ್ಬೇಕು..
-
ಬರುವ ಅವಕಾಶವನ್ನು ಬಳಸಿ
ಮನದ ಮಾತನ್ನು ಆಲಿಸಿ
ಧರ್ಮದ ಮಾರ್ಗದಲ್ಲಿ ಚಲಿಸಿ
ಸೋಲುವ ಭೀತಿಯನ್ನು ಜಯಿಸಿ
ಮುಂದೆ ಸಾಗಬೇಕು..-