ಒಂದು ಕ್ಷಣ ಹೊತ್ತು ಜಾರಿ
ಪಕ್ಕದಲ್ಲಿ ಕುಳುತಿಕೋ...
ಒಮ್ಮೆ ಬಾಲ್ಯಕ್ಕೆ ತಿರುಗಿ
ಮನಸೋ ಇಚ್ಛೆ ಸ್ನೇಹಿತರೊಡನೆ ಆಟಾಡಿ,
ಕಂಠ ಪೂರ್ತಿ ಅಮ್ಮ ಮಾಡಿದ ಕುರುಕಲು ತಿಂಡಿ ತಿಂದು,
ಕಾರಣವಿಲ್ಲದೆ ಅಣ್ಣನೊಂದಿಗೆ ಜಗಳವಾಡಿ,
ಹಿಂತಿರುಗಿ ಬರುವೆನು ...-
ಕಾಣೆಯಾದ ನೆಮ್ಮದಿ,
ಬೆಟ್ಟದ ತಪ್ಪಿಲಿನಲ್ಲಿ
ತಾರೆಗಳೊಂದಿಗೆ ವಾದಿಸಿ,
ಕಡಲ ದಡದಲ್ಲಿ
ಅಲೆಗಳೊಂದಿಗೆ ಹರಟಿ,
ಹಸಿರ ಮರುಳಿಗೆ
ಆಲೋಚನೆಗಳನ್ನು ಶುದ್ದೀಕರಿಸಿ,
ಮರುಳ ಬೇಕಿದೆ ನವ ಸಂತಸದಲ್ಲಿ....
-
ಹಂಬಲಿಸುತ್ತಿರುವ ಮನಸು
ನಿತ್ಯದ ಸೊಗಸು
ಕಾಣದ ನನಸು
ಎನಮೇಲೆ ಮುನಿಸು
ಛಲದಿಂದ ಕಾಯುತ್ತಿರುವ ಬದುಕುವ ಹುಮ್ಮಸ್ಸು ..!-
ಬೇವು ಬಲವಾಗಲಿ,
ಬೆಲ್ಲ ಜೊತೆಯಾಗಲಿ,
ಬದುಕಿನ ಶೋಭೆ ಹೆಚ್ಚಿಸಲಿ,
ಈ ಶೋಭ ಕೃತ್ ನಾಮ ಸಂವತ್ಸರದಲ್ಲಿ !-
ಹೊಸ ಮಾರ್ಪಾಟಿಗೆ, ಹಳೆ ನಿರ್ಬಂಧಗಳು,
ಮನೆಯೇ ಮಂತ್ರಾಲಯ ಎಂಬ ನೈಜತೆಯು..
ಕಟ್ಟಿ ಹಾಕಿದ ಭಾವಗಳು,
ಹೊಸ ವರುಷಕ್ಕೆ, ಹಳೆ ನೋವುಗಳು,
ಸ್ವತಂತ್ರವಾಗಿ ಹಾರಬೇಕು ಎಂಬ ನಿರಾಸೆಯೂ!!-
ಜಿಟಿ ಜಿಟಿ ಮಳೆಯೂ ಕೊಂಚ ವಿಶ್ರಮಿಸಿದಾಗ,
ಅಲ್ಪ ಕಾಲ ಮೋಡಗಳಿಂದ ಬಿಡುಗಡೆಗೊಂಡ ರವಿಯು,
ತನ್ನ ಕಿರಣಗಳನ್ನು ವಸುಂಧರೆಯ ಮೇಲೆ ಚೆಲ್ಲಿದನು,
ಮನೆಯ ಮೂಲೆಯಲ್ಲಿ ಬಿದ್ದ ಹಳೆ ತರಗತಿಯ ಹಾಳೆಯೂ,
ಅಮ್ಮನ ಕೈ ಇಂದ ದೋಣಿಯಾಗಿ ಮೂಡಿತು.
ಮನೆಯ ಅಂಗಳವು ಕೂಡಿಟ್ಟ ಮಳೆಯ ಹನಿಗಳ ಮೇಲೆ ತೇಲಿತ್ತುರುವ ದೋಣಿಯನ್ನು,
ಕಂಡ ಮನವು ಹರ್ಷದಿಂದ ಹಿಗ್ಗಿತು. !!!-
ಆ ಕರಾಳ ದಿನ, ರಕ್ಷಕನು ತನ್ನ ತಂದೆ ಅಗಲಿಕೆಯ ನೋವನ್ನು ತಡಿಯದೇ ಬಳಲುತ್ತಿದ್ದ . ಕಣ್ಣುಗಳಿಂದ ಹರಿದ ಕಂಬನಿಗಳು ನನ್ನ ಉಕ್ಕಿನ ಕಂಬಗಳನ್ನು ಕರಗಿಸುವ ನೋವನ್ನು ತುಂಬಿಕೊಂಡಿತ್ತು ,ನನ್ನೆಲ್ಲಾ ಶಕ್ತಿಯನ್ನು ಮೀರಿ ನನ್ನ ಗಾಲಿಗಳಿಗೆ ಮುಂದೆ ಸಾಗಲು ಒತ್ತಡವನ್ನು ಹೇರಿದೆ, ಆದರೆ ಮೇಲೆ ಕೂತಿರುವನ ಲೆಕ್ಕಾಚಾರ ಬೇರೆ ಆಗಿತ್ತು. ಅವನಿಗೆ ದಿನಕ್ಕೆ ಈ ತರ ನೂರಾರು ಕತೆ. ನನ್ನ ಕಿಟಕಿ ಗಾಜುಗಳು, ಅವನ ಮಾತುಗಳನ್ನ ಕೇಳಿ,ಮಳೆಯ ಹನಿಯಲ್ಲಿ , ತನ್ನ ಕಂಬನಿಗಳನ್ನು ಬೆರಸಿ ನನ್ನನ್ನು ಪಾಪ ಪ್ರಜ್ಞೆಯಲ್ಲಿ ಸಿಲುಕಿಸುತ್ತಿತ್ತು ಮೇಲೆ ಕೂತಿರುವನು ಎಷ್ಟೇ ಲಗಾಮು ಹಾಕಿದರು, ಕೇಳಲಿಲ್ಲ ಸೈನಿಕನ್ನನ್ನು ತನ್ನ ತಂದೆಯ ಅಂತಿಮ ದರ್ಶನ ಮಾಡಬೇಕು ಎಂಬ ಒಂದೇ ಯೋಚನೆಯಲ್ಲಿ ಓಡುತಿದ್ದೆ. ಆದರೆ ವಿಧಿಯು ಆ ದಿನ ನನ್ನ ವಿರೋಧಿ ಆಗಿತ್ತು.
-
ನನ್ನ ಗೆಳೆಯನಿಗೆ,
ಕಣ್ಣುಗಳಿಂದ ಜಾರಿದ
ಕಂಬನಿ ಗಳನ್ನು ಪೋಣಿಸಿ
ಬರೆಯಲೇ ನೀನಿಲ್ಲದ
ಈ ವಿರಹ !!
ಹೃದಯದ ಮಾತುಗಳನ್ನು
ಕಿವಿ ಒತ್ತಿ ಕೇಳಿ ಹೇಳಲೇ
ಅಲ್ಲಿ ನಡೆಯುತ್ತಿರುವುದು
ನಿನ್ನದೆ ಕಲಹ!!
ನೀನಿಲ್ಲದೆ ಕಾಲವನ್ನು
ಸಾಗಿಸಲು ಸಾಕಾಗಿದೆ ಎಂದು
ಇನ್ನು ಹೇಗೆ ಚಿತ್ರಿಸಲಿ
ನೂರು ತರಹ!!
-
ಒಂದು ಹೊಸ ಭರವಸೆಯಿಂದ
ಅರಸಿ ಬಂದ ಒಲವಿನಿಂದ,
ನಿಷ್ಕಲ್ಮಶ ಹರಕೆಯಿಂದ ...!
ಶಶಿಯ ಚಲುವ ತಂದಿದೆ,
ರವಿಯ ಬೆಳಕು ತಂದಿದೆ,
ಭುವಿಯ ತಾಳ್ಮೆ ತಂದಿದೆ,
ಈ ಪುಟ್ಟ ಬದುಕಿಗೆ
ನಿನ್ನ ಆಗಮನದಿಂದ...!-
ಎಂದಿಗೂ ಮನವನ್ನು
ತಣಿಸದು...
"ಬೇಕು" ಎಂಬುವುದು
ಎಂದಿಗೂ ಯಾರನ್ನು
ಮನ್ನಿಸದು...
"ಸಾಕು" ಎಂಬುವುದು
ಎಂದಿಗೂ "ಬೇಕು"
ಎಂಬುದನ್ನು
ಮಣಿಸದು..!!-