ಸೀತಾದೇವಿಯ ಪತಿ ಆದವನು
ಸಕಲರಿಗೆ ಕಲ್ಯಾಣ ಪ್ರದಾಯಕನು
ಶಬರಿಗೆ ಮೋಕ್ಷದಾಯಕನು
ಹನುಮನ ಹೃದಯದಲ್ಲಿ ವಾಸ ಇರುವವನು
ವಿಭೀಷಣನಿಗೆ ಅಭಯಹಸ್ತ ತೋರಿದವನು-
ನನ್ನ ಕರ್ಮಕ್ಕೆ ನಿನ್ನ ಹೇಗೆ ದೂಷಿಸಲಿ
ನನ್ನ ಪ್ರಾರಬ್ಧಕ್ಕೆ ನಿನ್ನ ಹೇಗೆ ತಿರಸ್ಕರಿಸಲಿ
ನನ್ನ ಪಾಪಗಳಿಗೆ ನಿನ್ನ ಹೇಗೆ ಹೊಣೆಮಾಡಲಿ
ನನ್ನ ನೋವುಗಳಿಗೆ ನಿನ್ನ ಹೇಗೆ ಧಿಕ್ಕರಿಸಲಿ-
ಸ್ನೇಹಕ್ಕೆ ಇರಲಿ ಪ್ರೀತಿಗೆ ಇರಲಿ
ಹತ್ತಿರನೇ ಇರಲಿ ದೂರನೇ ಇರಲಿ
ಮಾತೇ ಇರಲಿ ಮೌನವೇ ಇರಲಿ
ನಗುವೆ ಇರಲಿ ನೋವೇ ಇರಲಿ
ನನ್ನ ಮನದ ಭಾವನೆ ಹೇಳಲು
ಸದಾ ಅವನ್ನೊಬ್ಬನ ಒಲುವೇ ಸಾಕು
ಈ ಜೀವಕೆ ಈ ಜನುಮಕೆ-
ನೀನು ನನ್ನ ಪಡೆಯುವ ಅದೃಷ್ಟ ಇಲ್ಲದವನು
ನಾನು ನಿನ್ನವಳ ಆಗುವ ಯೋಗ ಇಲ್ಲದವಳು
ನಮ್ಮ ಕೊನೆಯ ಭೇಟಿ ದೀರ್ಘವಾದ
ಮೌನದಲ್ಲಿ ಶಾಂತವಾಗಿತ್ತು-
ಸೋತಾಗ ಧೈರ್ಯ ನೀನು
ಕುಗ್ಗಿದಾಗ ಆತ್ಮಸ್ಥೈರ್ಯ ನೀನು
ಒಂಟಿ ಎನಿಸಿದಾಗ ಬಂಧು ನೀನು
ನನ್ನ ಆತ್ಮದ ಮಾತಾ ಪಿತಾ ನೀನು-
ಮನೆಗೆ ಲಕ್ಷ್ಮೀಯಾಗಿ
ಗಂಡನಿಗೆ ಪಾರ್ವತಿಯಾಗಿ
ಮಕ್ಕಳಿಗೆ ಸರಸ್ವತೀಯಾಗಿ
ದುಷ್ಟರಿಗೆ ದುರ್ಗೇಯಾಗಿ
ಎಲ್ಲಾ ಹೆಣ್ಣು ಮಕ್ಕಳಲ್ಲಿಯೂ ನೆಲೆಸುವವಲು ಜಗಜ್ಜನನಿ
-
ವಿಧಿಧಾತನೇ ವಿಧಿಗೆ ಶರಣಾಗಿರಲು
ಕರ್ಮಧಾತನೇ ಕರ್ಮಕ್ಕೆ ಬದ್ಧನಾಗಿರಲು
ಸೃಷ್ಟಿಕರ್ತನೇ ಎಲ್ಲಾ ನಿಯಮ ಪಾಲಿಸುತ್ತಿರಲು
ನಾ ಹೇಗೆ ಯಾವುದು ಬೇಡಾ ಎನ್ನಲಿ ಪ್ರಭುವೇ-
ಕೂದಲಿಗೆ ಓಲೆ ಮುತ್ತಿಕ್ಕುವ ಬಯಕೆಯೋ
ಓಲೆಗೆ ಕೂದಲ ಸ್ಪರ್ಶದ ತುಡಿತವೂ
ನಾ ಕಾಣೇ ತಿಳಿಸುವೆಯಾ ಸಖಿ-
ಪ್ಲೀಸ್ ವರುಣದೇವ ಬೇಸಿಗೆಯಲ್ಲಿ ಸೂರ್ಯದೇವ ತನ್ನ ಶಾಖ ಹೆಚ್ಚು ಕೊಟ್ಟು ಭೂಮಿಯನ್ನ ಇಂಪ್ರೇಸ್ ಮಾಡಿದ್ದ ಅಂತಾ ನೀವು ಕಾಂಪಿಟೀಷನ್ ಕೊಡಬೇಡಿ.ನೀರಲ್ಲಿ ಬಳಕೊಂಡು ಹೋಗಲಿಕ್ಕೆ ಇಷ್ಟ ಇಲ್ಲ ಪಾ
-
ಪ್ರೀತಿಯ propose ನ facebook request ಕಳಸತ್ತೇ
Emotion ನನ್ನ reels ali ಕಳಸತ್ತೇ
ಖುಷಿಯನ್ನ post ಮೂಲಕ ಕಳಸತ್ತೇ
ನೋವುಗಳನ್ನ emoji ಅಲ್ಲಿ ಕಳಸತ್ತೇ
Modern ಯುಗದ ಲವ್ ಸ್ಟೋರಿ ನಮ್ಮದು ಆಗಲಿ ಹುಡುಗಿ
Request accept ಮಾಡಿ ok ಅಂತೀಯಾ-