ಜ್ಞಾನ ಸುಜ್ಞಾನ ವಿದ್ಯಾಲಗಳು
ಜ್ಞಾನ ವಿಜ್ಞಾನಗಳ ದೇಗುಲಗಳಿವು
ದೇಗಲಗಳೆಲ್ಲ ವಿದ್ಯಾಲಯಗಳಾಗಲಿ
ವಿದ್ಯಾಲಯಗಳೆಲ್ಲ ದೇಗುಲದಂತಿರಲಿ
ವಿದ್ಯಾಲಯದಲ್ಲಿರುವ ಪುಸ್ತಕ ಪೆನ್ನುಗಳು
ಪೂಜಿಸುವ ದೇವರುಗಳು
ನಿಮ್ಮಗೆ ಕಲಿಸುವ ನಾವುಗಳು
ತಾಸಿಗೊಮ್ಮೆ ಬರುವ ಪೂಜಾರಿಗಳು
ಇಲ್ಲಿ ನೀವು ನಾವುಗಳೆಲ್ಲ
ಕಲಿಯುವ ಪಿಪಾಸುಗಳು
ನಮಗೆಲ್ಲ ಒಬ್ಬಳೆ ದೇವತೆಯು
ಶಾರದೆ ಜ್ಞಾನದಾತೆ ಇವಳು-
ಕಲ್ಪನೆಗಳನ್ನು ಅತೀ ಹಿಡಿದ ಇಟ್ಟರೆ
ನಿಂತ ನೀರಾಗುವುದು
ಕಲ್ಪನೆಗಳನ್ನು ಅತೀ ಹರಿಯಬಿಟ್ಟರೆ
ನಿಲ್ಲದೆ ಹಾಳಾಗುವುದು
ಭಾವಗಳನ್ನು ಅತೀ ಬಚ್ಚಿ ಇಟ್ಟರೆ
ಬದುಕು ಬರಡಾದೀತು
ಭಾವಗಳನ್ನು ಅತೀ ಬಿಚ್ವಿ ಇಟ್ಟರೆ
ಬದುಕು ತೊಡರಾದೀತು
ಸುಪ್ರೀತಿಯನ್ನು ಹಂಚಿಕೊಂಡರೆ
ಜೀವನ ಪಾವನವಾಗುವುದು
ದುಷ್ಪ್ರೀತಿಯ ಹೊಂಚಾಕಿದರೆ
ಜೀವನ ಮಲೀನವಾಗುವುದು-
ನಿನ್ನ ನಗುವಿನಲ್ಲಿ ಆಯಿತು ನನ್ನ ಕೊಲೆ
ಕಾರಣ ಸಂಪೂರ್ಣ ನಿನ್ನ ಪ್ರೀತಿಯೆ ಸೆಲೆ
ಕೊಲೆಗೆ ಶಿಕ್ಷೆಯಾಗಿ ನಿನಗೆನ್ನ ಹೃದಯವೆ ಸೆರೆಮನೆ
ಆದರೂ ನಿನ್ನ ಹೃದಯವು ನನಗೆ ಅದು ಅರಮನೆ-
ಉಪ್ಪು, ಕಾರ, ಎಲ್ಲಾ ಅಡಿಗೆ ವಸ್ತುಗಳನ್ನು ಟೂತ್ಪೇಸ್ಟನಲ್ಲಿ ತೋರಿಸುವುದು,
ಅರಿಷಿಣ, ಛಂದನದ ಸೋಪ ಮತ್ತೇ ಯೌವನಾವಸ್ಥೆ ನೀಡುವವು ಜಾಹಿರಾತುಗಳಾಗಿವೆ.-
ಹಳೆ ಸಂಬಂಧಗಳು
ಹಳೆ ಬೇರುಗಳಿದ್ದಂತೆ
ಹೊಸ ಚಿಗುರುಗಳಿಗೆ
ಹೊಸ ಸಂಬಂಧಗಳು
ಹೊಸ ಬೇರುಗಳಿದ್ದಂತೆ
ಹಳೆ ಅನುಭವಗಳಿಗೆ
ಹಳೆ ಬೇರು ಹೊಸ ಚಿಗುರು
ಹೊಸ ಬೇರು ಹೊಸ ಚಿಗುರು
ಎಂತ ಸೊಗಸು ಅಲ್ವಾ?-
ಬದುಕಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಪರಿಸ್ಥಿತಿ ಬರ್ತಾವ,
ಒಳ್ಳೆದಾದಾಗ ಹಿಗ್ಗದೆ, ಕೆಟ್ಟದ್ದಾದಾಗ ಕುಗ್ಗದೆ ಸಮಚಿತ್ತದಿಂದಿರ್ಬೇಕು.-
ಜೀವನದ ಗಾಡಿಯ ಗಾಲಿಗೆ ಎರಡು ಕೀಲಿಗಳಿರುವಂತೆ
ಎರಡು ಜೀವಗಳ ಹೊಂದಾಣಿಕೆಗಿರುವ ರಕ್ಷಣೆ-
ಗಂಧದ ಸುಗಂಧದಷ್ಟೆ ಪರಿಮಳ
ಕೃಷ್ಣ ಕಾವೇರಿಯಷ್ಟೆ ಪವಿತ್ರಳು
ಹಂಪೆ ಹಳೆಬೀಡಿನಷ್ಟೆ ಕಲಾಕುಸುರಿ
ನಿತ್ಯ ಹರಿದ್ವರ್ಣದಷ್ಟೆ ಹಸಿರು ಸೀರಿ
ಅರಿಷಿನ, ಕುಂಕುಮದಷ್ಟೆ ಆಕರ್ಷಣೆ
ಆಗಸದ ಚಂದಿರನಷ್ಟೆ ಬಿಳಿ ಕಾಲುಂಗುರ
ಆಲದ ಮರದಷ್ಟೆ ನೆರಳು ಜಡೆಯ ಹಂದರ
ಕನ್ನಡಿಯಷ್ಟೆ ಸರಿ ನೀನು
ಕನ್ನಡದಷ್ಟೆ ಸಿಹಿ ನೀನು
ನೀನ್ಜೊತೆ ಇರಲು ಬೇರೇನ್ಬೇಕು ನನಗಿನ್ನೂ?-