ಕಣ್ಣ ಹನಿ ಜಾರಿದಷ್ಟು ನಿನ್ನ ನೆನಪುಗಳು ಇನ್ನೂ ಜೀವಂತ
-
# To be the best, U mus... read more
ಅಣೆ ಬಹರದಲ್ಲಿ ಇಲ್ಲದ ನೀನು
ಈ ಹೃದಯದ ಬಡಿತದಲ್ಲಿ ಮಾತ್ರ ಆಡಗಿರುವೆ ಏಕೆ?
ನಿದಿರೆಯನು ಮರೆಸುವಷ್ಟು ನಿನ್ನದೆ ಕನವರಿಕೆ
ಅಡಿಗಡಿಗೂ ನಿನ್ನನ್ನೇ ದ್ಯಾನಿಸುವ ಗೀಳೇಕೆ?
ನೆನಪುಗಳ ರಾಶಿಯಲ್ಲಿ ಹೂತು ಹೋದ ಕನಸುಗಳ
ಹೆಕ್ಕಿತೆಗಿಯಲು ಬೇಕಿದೆ ನಿನ್ನದೆ ಸಹಕಾರ
ಕನಸಿಲ್ಲಾದರೂ ಅರೆಘಳಿಗೆ ನಿನ್ನವಳು ನಾನಾಗಲಿ
ಎಂಬುದೇ ನನ್ನ ಹುನ್ನಾರ!!-
ಚೌಕಟ್ಟಿಲ್ಲದ ಈ ಮನಸ್ಸಿಗೇಕೆ
ಆಗಸದಷ್ಟು ಪ್ರೀತಿಯ ಬಯಕೆ .
ಕಲ್ಪನೆಯ ಕಡಲಿನಲಿ ಕಾಡುವ ಭಾವನೆಗಳಿಗೇಕೆ
ಕತ್ತಲೆಯ ಹೆದರಿಕೆ .
ಆಸೆಯ ಬಳ್ಳಿಗಳಿಗೇಕೆ
ಚಿಗುರೊಡೆದು ಹಬ್ಬಿ ಅರಳುವ ಹೆಬ್ಬಯಕೆ.-
ನನ್ನ ಮುಂಗುರಳ ಸರಿಸಿ
ಮುದ್ದಿಸುವ ನಿನ್ನ ರೀತಿಗೆ
ಚಂದಿರನೂ ಕೂಡ ನಾಚಿ
ಮೋಡಗಳ ಹಿಂದೆ ಮರೆಯಾಗಿಹೆನು.
ಇನ್ನು ನಾನು!?
ನಿನ್ನ ಮಾದಕ ಸ್ಪರ್ಶಕೆ ನಾಚಿ ನೀರಾಗಿ
ನಿನ್ನೆದೆಯ ಬಡಿತದಲಿ ಲೀನವಾಗಿಹೆನು !-
ನಿನ್ನ ಅಧರಗಳ ಮಧುವ ಹೀರಲು ಕಾಯುತ್ತಿರುವ ದುಂಬಿ ನಾನು
ನಿನ್ನ ಅಪ್ಪುಗೆಯ ಸಿಹಿ ಮುತ್ತಿನ ಮತ್ತಲಿ ದಿನ ಕಳೆದರೂ ಮುಗಿಯದ ನೆನಪು ನೀನು.-
ನನ್ನೆದೆಯ ಪ್ರತಿ ಬಡಿತದಲೂ
ನಿನ್ನೊಲವ ಧಾರೆಯೇ ಮಿಡಿಯುತಿದೆ
ಅದಕೆ ಕಾರಣವಿಷ್ಟೇ
ನಾನು ನಿನ್ನ ಬರಿ ಪ್ರೀತಿಸಲಿಲ್ಲ
ಅಂತ್ಯವಿಲ್ಲದಷ್ಟು ಆರಾಧಿಸಿದೆ.
ಕನಸಿನಲ್ಲಾದರೂ ಸರಿ
ನಾನಾಗಲು ಬಯಸಿರುವೆ
ನಿನ್ನ ಮನಸಿನರಮನೆಯ ಒಡತಿ
ನಿಡುವೆಯಾ ಇದಕ್ಕಾದರೂ
ನಿನ್ನ ಕಿರು ಸ್ಪರ್ಶದ ಅಣತಿ.-
ನಿನ್ನೊಲವ ಧಾರೆಯಲಿ ಮಿಂದು ಈ ಜಗವೇ ಮರೆಯಲೆಂದಿರುವೆ !
ಸುಳಿವೇ ಸಿಗದಂತೆ ಸೋತಿರುವೆ
ನಿನ್ನೀ ಮೋಹಕ ನೋಟಕೆ ಕರಗಿ ನಿನ್ನ ಬಿಸಿ ಉಸಿರಿನ ಸ್ಪರ್ಶಕೆ ಕಾದಿರುವೆ
ಮಾತಲ್ಲೇ ಮೋಹಿಸಿ ಮುದ್ದಿಸುವ ನಿನ್ನೀ ಮಾದಕ ನಗೆಯ ಮೋಡಿಗೆ ಪರವಶಳಾಗಿರುವೆ
ನಿನ್ನ ಪ್ರೀತಯ ಮಾಯೆಗೆ ಸಿಲುಕಿ ನಿನ್ನ ಅಪ್ಪುಗೆಯ ಬಂಧನದಲ್ಲಿ ಬಂಧಿಯಾಗಲು ಹಂಬಲಿರುವೆ.
ಜೀವನ ಪಯಣದಲಿ ನಿನ್ನ ಹೆಜ್ಜೆಗಳ ಗುರುತಾಗಿ
ನಿನ್ನೊಡನೆ ಹಾದಿ ಸವಿಸಬೇಕೆಂಡದಿರುವೆ !
ಕಂಡೂ ಕಾಣದಂತೆ ಕಾಡುವೆ ಏಕೆ ? ಕನಸಿನ ಪಯಣಕ್ಕೂ ಕಾರಣ ಹುಡುಕುತ್ತಾ !?...-
ಇಳೆಗೆ ತಂಪೆರೆಯುವ ಈ ಮಳೆ ಹನಿಗಳಿಗೂ
ನನ್ನ ಮನದ ಮೂಲೆಯಲ್ಲಿ ಅಡಗಿರುವ ನಿನ್ನ ಈ ನೆನಪುಗಳಿಗೂ ಏನು ಸಂಬಂಧ ?!
ಮಳೆ ಬಂದ ಪ್ರತಿಸಲನು ನಿನ್ನ ನೆನಪಿನ ಅಲೆಗಳ ಅಬ್ಬರ ತುಸು ಅತಿಯಾಗಿನೆ ಇರುತ್ತೆ.-
ನಿನ್ನ ನೆನಪುಗಳ ಹಾದಿಯಲ್ಲಿ ನಾ ಕಳೆದು ಹೋಗಬೇಕು ಅಂತಿದ್ದೆ ಆದರೆ.....
ನಿನ್ನ ನೆನಪುಗಳ ಕಾವನ್ನು ತಣಿಸಲು
ಆಗಸದಿಂದ ಮಳೆ ಹನಿಗಳ ಸದ್ದು ಇಂದೇಕೋ ಹೆಚ್ಚಾಗಿಯೇ ಇದೆ ?!-