ಮೌನ ಮುರಿದು ಬರುವೆಯಾ
ಮೌನವಾಗಿಯೇ ಇರುವೆಯಾ
ನಿನ್ನ ಈ ಮೌನ ನನ್ನನು ಕಾಡುತಿರಲು
ನಾ ನಿನ್ನ ಮೌನಕೆ ಮಾತು ಕಲಿಸಿಕೊಡಲೆ
ಮೌನಮಾತಾದಾಗ ಮಾತೇಕೆ ಬೇಕು
ನಾನು ಮೌನಿಯಾಗೆ ಉಳಿದುಬಿಡುವೆ-
ಮಳೆಯ ಪ್ರತಿ ಹನಿಯ
ಹೊಳೆವ ಮಿಂಚಿನ ಹಾಗೆ
ತಂಪೇರೆವ ಗಾಳಿಯಲಿ
ಸುಗಂಧ ಭರಿತ ಸುವಾಸನೆಯ
ಸುಂದರ ಸೃಷ್ಟಿಯ ಚಂದದ
ಹಚ್ಚ ಹಸಿರಿನ ದಾರಿಯಲಿ ಸಾಗುತ್ತ
ಮನಸ್ಸು ಶುದ್ದವಾಯುತು
ಪರಿ ಶುದ್ದವಾಯುತು...........-
ಹೀಗೆ ಆಗಿದೆ ನೋಡು ಗೆಳತಿ
ನನ್ನ ಮನದಲಿ ಬಚಿಟ್ಟ ಚಿಟ್ಟೆ ನೀನು
ಮೋಡ ಕವಿದ ವಾತಾವರಣದಿ
ಕಾಣದಿರುವ ಸೂರ್ಯ ನಂತೆ ನಾ ನಿನಗಿನ್ನು
ಬರಿ ಮೌನದಿಂದಲಿ ನನ್ನ ನನೆಯುವೆ ಏಕೆ
ಕನಸಲಿ ಬಂದು ನನ್ನ ಕಾಡುವೆ ಏಕೆ
ಬಿಟ್ಟು ಬಿಡು ನನ್ನ ಹೊರಟು ಬಿಡು ಇನ್ನ
ಸಾಕು ನನಗೆ ನಿನ್ನ ನೆನಪೊಂದೆ-
ಕನಸಿನ ಅರಮನೆಯಲ್ಲಿ
ಮನಸಿನ ಬಾಗಿಲ ಮುಚ್ಚಿ
ಮತ್ತೆ ನೆನೆದರೆ ನಿನ್ನ
ಚಿತ್ತ ಚಂಚಲವೆಲ್ಲ
ಮರೆತು ಮರೆಯದ ಭಾವ
ನಿನ್ನ ಪ್ರೀತಿಯ ಛಾಯೆ ನನ್ನ ಕಾಡುವ ರೀತಿ-
ಅದೇ ಪ್ರೀತಿ ಎಲ್ಲರಂತಲ್ಲ
ಪ್ರೀತಿ ಪ್ರತಿ ಕ್ಷಣ ಪ್ರತಿ ದಿನ
ಅವಳು ನನ್ನ ಜೊತೆಗಿರಬೇಕಿಲ್ಲ
ಪ್ರೀತಿ ಮನಸ್ಸಲ್ಲಿದ್ದರೆ ಸಾಕು
ಅವಳು ಹೆಸರಲಿ ನಿನ್ನ ಖುಷಿ ಇದ್ದರೆ ಸಾಕು
ಅವಳಿಷ್ಟಗಳು ಅವಳಿಂದ ದೂರಮಾಡಬೇಡ
ನಿನ್ನಿಷ್ಟಕೆ ಅವಳ ಬಲಿ ಕೊಡಬೇಡ
ಅವಳಿಷ್ಟಗಳ ಈಡೇರಿಸದ ಮೇಲೆ
ನೀನೆಂತಃ ಪ್ರೇಮಿ ನೀ ಬರಿ ವ್ಯಾಮೊಹಿ
ಸ್ವಾರ್ಥಗಳಿಲ್ಲದೆ ಪ್ರೀತಿಸದರೆ ಅದುವೆ ಅದ್ಬುತ
-
ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ
ಪರಿಸರ ಜಾಗೃತಿ ಮೂಡಿಸವವರೆ ಆದರೆ
ನಿಜವಾದ ಪರಿಸರ ಕಾಳಜಿ ವಹಿಸುವವರಾರಯ್ಯ
ನೀವು ಹಾಕೊ ಒಂದು ಪೋಸ್ಟ್ ನಂತೆ ಒಂದೊಂದು ಸಸಿನೆಟ್ಟು ಬೆಳಸಿದ್ದರೆ ಈ ದಿನ ಪರಿಸರವೆ ಖುಷಿಯಿಂದಿರುತಿತ್ತು ಅನಿಸುತ್ತದೆ.-