ಕನಸು Jain   (ಕನ್ನಡತಿ ಈ ವಸುಮತಿ)
1.1k Followers · 716 Following

read more
Joined 13 January 2019


read more
Joined 13 January 2019
8 APR AT 7:51

ಮಾರ್ನಿಂಗ್ ಮಂತ್ರ

ಮಾಗದ ಮನಸನ್ನು ಯಾರು ತಿದ್ದಿದರೂ ಬುದ್ದಿ ಬಾರದು
ಸಾಗದ ಹಾದಿಯಲ್ಲಿ ಯಾರು ಜೊತೆಗಿದ್ದರು ಸಮಯ ಹೋಗದು
ಬಾರದ ನಿದಿರೆಗೆ ಲಾಲಿ ಹಾಡಬಾರದು
ಹಸಿವಿಲ್ಲದವನಿಗೆ ಮೃಷ್ಟಾನ್ನವು ರುಚಿಸದು

ಕನ್ನಡತಿ ಈ ವಸುಮತಿ ✍🏼

-


5 APR AT 8:00

ಮಾರ್ನಿಂಗ್ ಮಂತ್ರ....

ನಮಗೆ ಸರಿ ಅನಿಸದ ವ್ಯಕ್ತಿಯಿಂದ, ಸುಳಿವು ನೀಡದೆ ದೂರ ಸರಿದು ಬಿಡಬೇಕು...
ಇನ್ನೊಬ್ಬರು ಬಹಳ ಉತ್ತಮರು ಎಂದೆನಿಸಿದೊಡನೆ ನಾವೇ ಅವರನ್ನು ಹುಡುಕಿಕೊಂಡು ಹೋಗಿ ಅವರ ಸ್ನೇಹ ಬೆಳೆಸಬೇಕು...

-


3 APR AT 8:16

ಮಾರ್ನಿಂಗ್ ಮಂತ್ರ

ನಮ್ಮ ಯೋಚನೆಗಳು ಬದಲಾದಾಗ ಅದೃಷ್ಟವು ಬದಲಾಗಬಹುದು...
ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿ ಉತ್ತಮ ವ್ಯಕ್ತಿಗಳ ಜೊತೆಗಿನ ಒಡನಾಟ ಸಹ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ...
ನಾವು ಮಾಡುವ ಕೆಲಸಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಒಳ್ಳೆಯವರ ಆಯ್ಕೆಯನ್ನು ನಾವೇ ಮಾಡಿಕೊಳ್ಳ ಬೇಕಾಗುತ್ತದೆ...
ಕನ್ನಡತಿ ಈ ವಸುಮತಿ ✍️

-


2 APR AT 8:32

ಮಾರ್ನಿಂಗ್ ಮಂತ್ರ


ಕೆಲವರಂತೂ ಅವರದ್ದೇ ಆದ ಮಿತಿಗಳಲ್ಲಿ ಮತಿಹೀನರಂತೆ ಬದುಕುತ್ತಾರೆ....
ಬಹಳ ಬೇಗ ಮತಿಭ್ರಮಣೆಗೂ ಒಳಗಾಗುತ್ತಾರೆ
ಮನುಷ್ಯ ತನ್ನದೇ ಆದ ಪರಿಮಿತಿಗಳಲ್ಲಿ ಹಿತ ಮಿತವಾಗಿ ಪಕ್ವವಾದಷ್ಟು ಪರಿಶುದ್ಧನಾಗುತ್ತಾನೆ...
ಕನ್ನಡತಿ ಈ ವಸುಮತಿ ✍️

-


1 APR AT 7:51

ಮಾರ್ನಿಂಗ್ ಮಂತ್ರ

"ನೋವು" ಕಲಿಸಿದ ಪಾಠವನ್ನು ಎಂದಿಗೂ ಮರೆಯಬಾರದು
"ನಲಿವು" ಕೊಟ್ಟ ಕ್ಷಣಗಳನ್ನು ಮೆಲುಕು ಹಾಕುತ್ತಾ ಇರಬೇಕು
ನಗಿಸಿದವರ ಮತ್ತು ಅಳಿಸಿದವರ ತುಲನೆಯಲ್ಲಿಯೇ ತೇಲಬೇಕಿದೆ ಜೀವನದ ದೋಣಿ.....
ಕನ್ನಡತಿ ಈ ವಸುಮತಿ ✍️

-


28 MAR AT 21:39

ಇಬ್ಬರದ್ದೂ ಒಂದೇ ಪ್ರಾರ್ಥನೆ ...
ಎಂದಿಗೂ ಸುಖವಾಗಿಟ್ಟಿರು ಎಂಬೋದು
ಆದರೆ ಕೇಳಿಕೊಂಡಿದ್ದು ಮಾತ್ರ
ಒಬ್ಬರಿಗೊಬ್ಬರಿಗೆ
ಇದಲ್ಲವೆ ಒಲವೆಂದರೆ...!?

-


27 MAR AT 7:28

ಬದಲಾಗ ಬೇಕಾಗಿರುವುದು
ದೃಷ್ಟ್ಟಿಯೇ ಹೊರತು
ಸೃಷ್ಟಿಯಲ್ಲ

-


26 MAR AT 7:48

🍀ಮಾರ್ನಿಂಗ್ ಮಂತ್ರ 🍀


ಬಾನಿನಲ್ಲಿ ಕವಿದ ದಟ್ಟ ಮೋಡಗಳನ್ನು ಬೆಟ್ಟಗಳು ತಡೆದು ಮಳೆ ಸುರಿಸುವ ಹಾಗೆ ನಮ್ಮಲ್ಲಿನ ತಪ್ಪುಗಳನ್ನು ತಿದ್ದಲು ಒಳ ಮನವು ಜಾಗೃತವಾಗಿದ್ದು ಒಂದಲ್ಲ ಒಂದು ದಿನ ತಪ್ಪಿನ ಅರಿವಾಗಿ ಕಣ್ಣೀರು ಸುರಿಸುವ ಕಾಲ ಬಂದೆ ಬರುತ್ತದೆ

ಕನ್ನಡತಿ ಈ ವಸುಮತಿ✍🏼

-


8 MAR AT 8:28

ಶಿವನೆಂಬುದೆ ಅಧ್ಬುತ "ನಾಮ"
ಪೂಜಿಸಿ ,ಒಲಿಸುಕೊಳ್ಳುವುದು ಒಂದು "ನೇಮ"

-


8 MAR AT 7:29

ಮಣ್ಣು ಮತ್ತು ಹೆಣ್ಣು
ಋಣವಿಲ್ಲದೆ ದಕ್ಕದು
ಅವನಿಯಲ್ಲಿರುವುದು
ಎಲ್ಲರನ್ನು ಹೊರುವ ಕಣ
ಅವಳಲ್ಲಿ ಇಹುದು
ಎಲ್ಲವನ್ನೂ ಸಹಿಸುವ ಗುಣ
ಅವಳೇ ಇಳೆ
ಇವಳೇ ಮಹಿಳೆ
ಇವಳು ನಕ್ಕರೆ
ಇಳೆಗೂ ಕಳೆ
ಕನ್ನಡತಿ ಈ ವಸುಮತಿ ✍️

-


Fetching ಕನಸು Jain Quotes