ಸೂರ್ಯ ಎಷ್ಟು ಹೂವುಗಳನ್ನು ನೋಡಿದರು ಹೂವು ನೋಡುವುದು ಒಬ್ಬನೇ ಸೂರ್ಯನನ್ನು.....
ಇಂದು ಹೂವುಗಳು ಕೋಪಿಸಿಕೊಂಡು ಮಂಕಾಗಿವೆ.-
ಬಿಟ್ಟು ಹೋಗುವ,
ಮುನ್ನ,
ಕೊನೆಗೊಮ್ಮೆ,
ಬೇಟಿಮಾಡು..
ನಿನ್ನ ತಡೆಯಲಂತೂ ಅಲ್ಲ!
ಜೊತೆಯಾಗಿ ನಡೆದ,
ಬೀದಿಯ ಧೂಳಿನ್ನೂ,
ನಿನ್ನ ಕಾಲಲ್ಲೇ ಇದೆ..,
ನೆನಪನ್ನಂತೂ ತೊಳೆಯಲಾಗಿಲ್ಲ ಚಿನ್ನ,
ಕಾಲಾದರೂ ತೊಳೆದು,
ಬೀಳ್ಕೊಡುವೆ ನಿನ್ನ!-
ಸನ್ಮಾನಕೆ ಅನುಭೂತಿಯ ಶಾಲು, ಬಿನ್ನವತ್ತಳೆ...!
ಕೃತಕ ಭಾಸ್ಕರನ ಸೃಷ್ಟಿಸಿದರೇನು
ಹುಲುಮಾನವ,
ಭುವಿಯ ಬಯಕೆಯೆಂದೂ ನಿಜರವಿಯು
ಪಸರಿಸುವ ಬಣ್ಣ ಕಿತ್ತಳೆ...!!-
ಈ ಯುವರ್ ಕೋಟ್ ಲಿ
ನಾನು ಕನ್ನಡಿಗರು, ಕನ್ನಡ ಬರಹಗಾರರು ಅಂತ
Follow ಮಾಡಿ ಅವರ ಕೋಟ್ಸ್ ಓದ್ತಾ
ಇರ್ತೀನಿ. ಆದರೆ ಅವರು ನನ್ನ ಮರು ಫಾಲೋ
ಮಾಡ್ತಾ ಇರುವುದಿಲ್ಲ. ಪರವಾಗಿಲ್ಲ ಬಿಡಿ. 🤗
ಹಾಗೆಯೇ ಕೆಲವರು ಒಂದಷ್ಟು
ಸಮಯ ಕಳೆದು Unfollow ಮಾಡ್ತಾ ಇದ್ದಾರೆ.
ಅವರಿಗೆ ಕಮೆಂಟ್ ಮಾಡೋಕೆ ಅವಕಾಶ ಕೊಡ್ತಾ ಇಲ್ಲ
ಅದರಿಂದ ಗೊತ್ತಾಗುತ್ತದೆ.
ಥ್ಯಾಂಕ್ಯೂ🎂
ನಾನು ನಿಮ್ಮನ್ನು ಅನ್ ಫಾಲೋ ಮಾಡಿದೆ. 😉
God Bless You !!
ಪಿಂಟ್ ತೊರ್ಸೋದ್ ಬೇಡ.
ನಾನೇನು ನಿಮ್ಮ ಗಂಟು ತಿಂದಿಲ್ಲ!!
Happy farewell day!!-
ಎಲ್ಲೆಲ್ಲೂ ರಂಗಿನಲ್ಲಿ ಪ್ರಕೃತಿಯು ಮಿನುಗುತಿರಲು
ಮಬ್ಬು ಮಂಜಿನ ಕಿರುಬೆಳಕಲ್ಲೇ ಹೊಳೆಯುತಾ
ಮತ್ತೆ ರವಿಯು ಹೊಂಬೆಳಕನು ತರುವನೆಂಬ ನಂಬಿಕೆಯಲಿ /
ಸೂರ್ಯನು ಅಸ್ತಂಗತವಾಗುವ ಸಂಭ್ರಮ,
ಎಲ್ಲೆಲ್ಲೂ ರಂಗಿನಲ್ಲಿ ಹೂಗಳು ಮುದುಡುತಿರಲು
ಬಾಗಿ ಬಾಡುವ ಮಂಕಿನಲ್ಲೇ ತುಸು ನಲಿಯುತಾ
ಮತ್ತೆ ರವಿಯ ಸ್ಪರ್ಶಕ್ಕೆ ಅರಳುವೆಂಬ ಭರವಸೆಯಲಿ/
-
ಹೋಗುವುದಾದರೆ ಬೇಗ ಹೊರಟುಬಿಡು,
ಎದೆ ಬಾಗಿಲ ಬಳಿ ನಿಂತು ಯೋಚಿಸಬೇಡ.
ಒಳಬರಲು ಸಾಲು ನಿಂತವರಿಗೆ ತೊಂದರೆಯಾದೀತು!
-
ಉಷೆ ಮಂಕಾದಳು ಸೂರ್ಯನ ಶುಭ ವಿದಾಯವ ಕೋರಿ,
ಸಂಧ್ಯಾದೇವಿ ಸಡಗರದಿಂದ ಸೂರ್ಯನ ಆಗಮನಕ್ಕೆ ಸಿದ್ಧಳಾದಳು ಮುಗುಳ್ನಗೆ ಬೀರಿ,
ಮಂಕಾಗಿವೆ ಎರಡು ಸೂರ್ಯಕಾಂತಿ ಹೂಗಳು ಉಷೆಗೆ ಸಾಂತ್ವನ ತೋರಿ...-
ಕೈ ಜಾರಿ ಹೋದ ಒಲವ ಮರೆತು
ನೀ ಸಂಭ್ರಮಕೆ ಹರಿಶಿಣ,ಗೊರಂಟಿ
ಹಚ್ಚಲೇಬೇಕಿದೆ ಹುಡುಗಿ,
ಕೃತಕ ನಗುವಿಗೆ ಕೃತಜ್ಞಳಾಗಿ-
ಮುಂಜಾವಿನಲಿ ಶುರುವಿಟ್ಟು
ಮುಸ್ಸಂಜೆಯವರೆಗೆ ನಿರಂತರವಾಗಿ
ದಣಿವರಿದ ಭಾಸ್ಕರನು
ವಿಶ್ರಾಂತಿಯತ್ತ ಸಾಗುತ್ತಿಹನು.
ಮುಂಜಾನೆಯಲಿ ಅರಳಿನಿಂತ
ತರುಲತೆಗಳು ಸೌಂದರ್ಯವ ಚೆಲ್ಲಿ
ದುಂಬಿಗಳೊಂದಿಗೆ ಸರಸವಾಡುತ್ತಾ
ಬಾಡಿದೆ ನಾಳೆಗೆ ಹೊಸ ಚೈತನ್ಯ ಪಡೆಯಲು-