ಆಮ್ಮ
ಬೆಂಕಿಯಂತ ಕಷ್ಟಕ್ಕೆ ಕರಗದ ಅವಳು
ನನ್ನ ಬೆರಳಿಗಾದ ಗಾಯವ ಕಂಡು
ಕಣ್ಣೀರಿಟ್ಟಿದ್ದಳು-
ಲೇಖನಿ ಹಾಳೆಜೊತೆ
ಎದೆ ಬೆರಳ ಮಾತುಕಥೆ
ಏನಿದ್ದರೇನೂ ನೀನೆ ಇಲ್ಲದ ಮೇಲೆ,
ನೀನಿಲ್ಲದಿದ್ದರೆ ಬೇಡ.
.
.
ನನಗೆಂದಿಗೂ ನಾಳೆ..!-
#ಕವಿತೆ..!
ಬೇಸರಕೆ ಆತ್ಮೀಯ ನೀನು
ಖುಷಿಗೆ ಸಹಪಾಠಿ ನೀನು
ನೋವಿಗೆ ಸಾಂತ್ವಾನ ನೀನು
ನನ್ನೆಲ್ಲ ಭಾವನೆಗಳ ತಾಯಿ ನೀನು
ಪದಗಳ ಬಂಧಕೆ ತಂದೆ ನೀನು-
ಕತ್ತಲ ಕೂಪಕ್ಕೆ ಸಿಲುಕಿ
ಬೆವರ್ಸಿ ಬದುಕಾಗಿರಲು ಸವಕಳಿ
ಬದಲಾಯಿಸುವ ಬೆಳಕಾಗಿ ಬಾ
ಶುರುಮಾಡಲು ಒಲವಿನ ದೀಪಾವಳಿ-
ಹೆಸರ ಜೊತೆಗೆ ಹೆಸರ ಕೂಡಿಸಿ ಬರೆಯುವಾಸೆ
ಗೋಡೆ ಮೇಲೂ, ಕವಿತೆಯೊಳಗೊ ಅಲ್ಲಾ
ಅರಿಶಿಣ ಕುಂಕುಮದಿಂದ ಅಕ್ಷತೆ ಹಚ್ಚಿದ
ಲಗ್ನ ಪತ್ರಿಕೆಯಲ್ಲಿ
-
ತಪ್ಪುಗಳ ತಪ್ಪು ಎಂದವರದ್ದೆ
ತಪ್ಪು ಇಲ್ಲಿ
ತಪ್ಪುಗಳ ತಪ್ಪು ಎಂದವರೆ
ತಪಿತಸ್ಥ ಕೂಡ ಇಲ್ಲಿ
ಹೇಳಿ ತಿದ್ದಬೇಡಿ
ಇಲ್ಲಿ ಯಾರದೇ ತಪ್ಪುಗಳ
ಏಕೆಂದರೆ
ಕೇಳಲು ಸಿದ್ದರಿರುವುದಿಲ್ಲಾ
ತಪ್ಪಿತಸ್ಥ ಮನಸುಗಳು
ಕಟ್ಟಿಕೊಂಡಿರಲು
ಕಣ್ಣು ಕಿವಿಗೆ ಬಟ್ಟೆಗಳ-
ಮೂಲಭೂತ ಹಕ್ಕಾಗಿರುವೆ
ನೀ ಹೃದಯಕೆ
ಸ್ಪಷ್ಟ ಉಸಿರಾಟ ಬೇಕು
ಬಲವ ಸೌಕರ್ಯ ಒದಗಿಸು
ನಾನೀನ್ನು ಜೀವಿಸಬೇಕು ನಿನ್ನೊಳಗೆ-
#"ನನ್ನ ನೋವು" #
Social media statusಗಳಲ್ಲಿ
ಮೇಕಪ್ ಮಾಡಿಕೊಂಡು ಅಳುವ
ಅಳುಮುಂಜಿಯ ಭಾವವಲ್ಲ
ನನ್ನ ನೋವು
ಡೈರಿಯಲ್ಲಿ ಬರೆದ'ಹಾಳೆಯ
ಯಾವುದೂ ಮೂಲೆಯಲ್ಲಿ
ಧೂಳಿಡಿದು ಉಸಿರಾಡಿದ
ಹಳೆಯ ಕವಿತೆ
-
ನಂಬಿಕೆಗಳು ಕೊಲೆಯಾದ ಬಳಿಕವೂ
ನಾ ನಂಬುವ ನಂಬಿಕೆ
ಅವಳ ಮನೆಯಲ್ಲಿ ಅವಳು
ಕಾಲೋರೆಸುವ ಬಟ್ಟೆ
ಪ್ರತಿಬಾರಿಯೂ ಮೂರ್ಖನಾಗುವ ಹೃದಯ
ಸುಳ್ಳು ಪ್ರೀತಿ ಸತ್ಯವಾಗದೆಂದು ತಿಳಿದರು
ಆ ಪ್ರೀತಿಯ ಬಯಸಿ ಬೇಡಿ
ಆಗಿದೆ ಭಿಕ್ಷೆಯ ತಟ್ಟೆ-
ನಾನಂದುಕೊಂಡಿದ್ದೆ
ಪ್ರೀತಿ ಎಂದರೆ
ಭಾವನೆಗಳ ದೊಡ್ಡ ಸಮಾರಂಭವೆಂದು
ಆದರೆ
ಅವಳು ಬಂದಮೇಲೆಯೆ ತಿಳಿದದ್ದು
ಪ್ರೀತಿ ಎಂದರೆ
ಸಣ್ಣ ಖುಷಿಗಳ ಆಚರಣೆ ಎಂದು-