ನಗುನಗುತ್ತಾ ಬಾಳು ನೀನು
ನೂರು ವರುಷ....
ಜೀವನದ ಜೊತೆ ಜೊತೆ ಇರಲಿ
ಸುಖ ಸಂತೋಷ...
ಬದುಕಿನೂಂದಿಗೆ ಬೆರೆಯಲಿ
ಆರೋಗ್ಯ ನೆಮ್ಮದಿ
ಸಾಗಲಿ ನಿನ್ನ ಜೀವನ
ಸುಂದರ ಸಮುದರ...
ಹುಟ್ಟು ಹಬ್ಬದ ಹಾರ್ದಿಕ
ಶುಭಾಶಯಗಳು ಮಗಳೇ
ಧೀಮಹಿ ಆರ್ ಶ್ರೀಯಾನ್..-
ಇಲ್ಲಿ ಬರೆಯೋದು ಹಾಗೆ ಸುಮ್ಮನೆ...
ಮನದೊಳಗೆ ಮೂಡುವ ಭಾವನೆ
ಅಭಿವ್ಯಕ್ತಿಸುವೇ ನಿಮ್ಮೊಡನೆ.
ಬ... read more
ಶೋಧನೆಯ ಬಗ್ಗೆ ವಿಷಯಗಳ ಆಳವಾದ ಅಧ್ಯಯನ,
ಹೊಸತನದ ಹುಡುಕಾಟದಲ್ಲಿ ವಾಸ್ತವತೆಯ ಅನಾವರಣ.-
ಗಗನದೆತ್ತರಲಿ,
ಆವರಿಸಿದೆ ಮಳೆಮುಗಿಲು,
ಧರಿತ್ರಿಯಲಿ,
ಕಂಗೊಳಿಸುತ್ತಿದೆ ಹಚ್ಚಹಸಿರು .-
ನಿನ್ನೆ ಮೊನ್ನೆ ಎನ್ನುತ್ತಾ ಕಳೆದು
ಹೋಯಿತು ಆ ಎರಡು ವರುಷ.
ಅಂಬೆಗಾಲಿಟ್ಟು ಪುಟ್ಟ ಪುಟ್ಟ ಹೆಜ್ಜೆ
ಹಾಕಿ ನಡೆಯುವ ಆ ಸುಂದರ ಸನ್ನಿವೇಶ.
ಮೊಗದಲ್ಲಿನ ಮುಗ್ಧ ಮಂದಹಾಸ
ನೋವ ಮರೆಮಾಚುವ ಆ ರಸ ನಿಮಿಷ.
ಮನ ಮನೆಗಳಲ್ಲಿ ಉಣಬಡಿಸುತ್ತಿದೆ
ಚೈತನ್ಯದ ಆ ಹೊಸ ಹರುಷ.
ಹುಟ್ಟು ಹಬ್ಬದ ಶುಭಾಶಯಗಳು....
......ಧೀಮಹಿ ಅರ್ ಶ್ರೀಯಾನ್.-
ನಿನ್ನ ಪ್ರತಿಯೊಂದು
ನಗುವಿನ ಹಿಂದೆ
ನಾನು ಮೈರೆತು
ನಗುವ ಕಂಡೆ.
ನನ್ನೆದುರು ನೀ ಬಂದು
ನಿಂತಾಗ ಮೈ ಬೆವರಿ
ನನ್ನನ್ನು ನಾನು
ಕಳೆದುಕೊಂಡೆ.-
ಬದುಕಿನಲ್ಲಿ ಕಟ್ಟಿಕೊಂಡ ಅತಿಯಾದ ಬಯಕೆಗಳು ಮನಸ್ಸಿನಾಳದೊಳಗೆ ಹೊಕ್ಕಿ, ಮನದೊಳಗೆ ಅಸ್ವಾದಿಸುವ ಕಾಲ್ಪನಿಕ ಚಿತ್ರಕಥೆ.
-
ಮನದ ಭಾವನೆಯ ಅಭಿವ್ಯಕ್ತಿಸುವ ಸಾಧನ
ಮನುಷ್ಯ ಜೀವಿಯ ಸಂವಹನ ಮಾಧ್ಯಮ
ಬದುಕಿನಲ್ಲಿ ಎಲ್ಲರೂ ಒಂದೇ ಸ್ವಭಾವದವರಲ್ಲ
ಮೃದು ಸ್ವಭಾವ ಒಂದಡೆ ಕಲ್ಲು ಹೃದಯ ಇನ್ನೊಂದೆಡೆ
ಎಟಿಗೆ ಎದುರೇಟಿನ ಪಾಠ
ಹೋರಾಟದಲ್ಲಿ ಸೋಲೊಪ್ಪದ ಹಠ
ಮಾತಿಗೆ ಮಾತಿನ ಉತ್ತರ
ಬದುಕು ಸೋಲಿಂದ ತತ್ತರ.
ಬದುಕು ಪ್ರೀತಿಯ ಆದರ
ಜೊತೆಗೂಡಿದರೆ ಆನಂದ ಸಾಗರ
ಮಾತು ಮಾತಿಗೆ ಉತ್ತರ
ಎದುರಾದ ಸಮಸ್ಯೆಗೆ ಪರಿಹಾರ.-
ಕ್ಷೇಮ ಸಮಾಚಾರಕ್ಕಾಗಿ ಬರೆದ ಒಲವಿನ ಓಲೆ, ಗೌರವಾತಿಥ್ಯಕ್ಕಾಗಿ ಕರೆದ ಕರೆಯೋಲೆ, ಕರ್ತವ್ಯಕ್ಕೆ ಚ್ಯುತಿಬಾರದಂತೆ ಎಚ್ಚರಿಸುವ ನೆನಪೋಲೆ.
-
ಸ್ನೇಹವು ಜೀವಿಗಳ ಭಾವನಾತ್ಮಕ ಸಂಬಂಧ
ವಿಶ್ವಾಸ ಹಾಗೂ ಕ್ಷಮೆ ಇದರ ಮೂಲ ಮಂತ್ರ
ಸ್ನೇಹದ ಒಡನಾಟದಲ್ಲಿ ಪ್ರೀತಿ ದೂರವಿದ್ದರೂ
ನೆನಪಿನ ಕ್ಷಣಗಳು ಅಚ್ಚಳಿಯದೆ ಮೆಲುಕುತ್ತಿದೆ
ಜಾತಿ ಮತ ಬೇದಗಳ ಎಲ್ಲೆ ಮೀರಿದ ಸ್ನೇಹ
ಬೇರೆತು ಕಲಿತು ಕುಣಿದು ಕುಪ್ಪಳಿಸಿದ ಕ್ಷಣ
ಕಷ್ಟದಲಿ ಹೆಗಲು ಕೊಟ್ಟು ಸಾಂತ್ವಾನದ ನುಡಿ
ಆಚಾರ ವಿಚಾರವನ್ನು ಕಲಿಸಿದ ಹಿತನುಡಿ.-