"ತಿ"ಳಿಯದ ವಯಸ್ಸಿನಲ್ಲಿ
ಹರಿಯದೆ ಆದ ತಪ್ಪಿಗೆ
"ತಿ"ಳಿದು ಬದುಕುವ ಕಾಲಕ್ಕೆ
"ತಿ"ಳಿಸಲು ಹಾಗದೆ ತಲೆತಗ್ಗಿಸಿ
"ತಿ"ಳಿಯಲಾರದ ಅವನಂತೆ
ಪಶ್ಚಾತಾಪದ ಜ್ವಾಲೆಯಲ್ಲಿ
ಇಂದಿಗೂ ಮನ ಕೊರಗುತ್ತಿದೆ
ಕೆನ್ನೆ ಮೇಲೆ ಕಣ್ಣೀರು ಮನೆಮಾಡಿ ಕೂತಿದೆ-
ಇಂತಿ ನಿನ್ನ ""ಕ್ರೂರಿ ... read more
ಚಿನ್ನಮ್ಮನ ನೆನಪು
ಮೊದಲ ಮುಂಗಾರಿನ ಮಳೆಗೆ ಧರಣಿ ಪುಳಕಗೊಂಡು ಘಮ್ಮೆನ್ನುವ ಪರಿಮಳದಂತೆ ಬರಲಿ ನಿನ್ನ ನೆನಪು
ಬೋಳೂ ವೃಕ್ಷ ವೊಂದು ರಂಬೆ ಕೊಂಬೆಯಲ್ಲೆಲ್ಲ ಹಸಿರು ಮುಕ್ಕಿ ನಗುತ್ತಿರುವಂತೆ ಬರಲಿ ನಿನ್ನ ನೆನಪು
ಹೂವು ಹೀಚ್ಚಾಗಿ ಇಚು ಕಾಯಾಗಿ ಕಾಯಿ ಹಣ್ಣಾಗಿ ರಸ ಉಕ್ಕಿ ಸಿಹಿಯ ಸವೆಯಲು ಬರಲಿ ನಿನ್ನ ನೆನಪು
ಘಲ್ಲು ಘಲ್ಲೆಂದು ಹೆಜ್ಜೆಯ ಸದ್ದು ಮಾಡುತ್ತಾ ಮಿಣುಮಿಣುಕಿ ಹತ್ತ ನೋಡುತ್ತಿರುವಾಗ ಇತ್ತ ಬಂದು ಮನವ ಬಿಗಿದಪ್ಪಿದ ನಿನ್ನ ನೆನಪು
ಕ್ಷಣಕೊಮ್ಮೆ ಕಾಡುವ ಚೆನ್ನಮ್ಮನ ನೆನಪು...
-N v-?
-
ನಾ ಕಂಡ ಕನಸು ಒಮ್ಮೆ ಕಣ್ಣೊಳಗೆ ನರ್ತಿಸುತ್ತಿದೆ
ಮನವು ಆತುರದಿ ಕನಸ ಬಿಗಿದಪ್ಪಿಕೊ ಎಂದು ಹಟಮಾಡಿದೆ
ಹೇಗೆ ಬಣ್ಣಿಸಲಿ ಅವಳ ಅಂದದ ಹಿರಿಮೆಯ
ಏನೆಂದು ಹೊಗಳಲಿ ಅವಳ ಚೆಲುವಿನ ಒಲವ
ಅವಳ ಕನಸಿಗೆ ಹಲವಾರು ಬಣ್ಣಗಳು ಉಂಟು
ಅವಳು ಕೊಡಬೇಕು ನನ್ನ ಮನಸ್ಸಿಗೆ ಮೊದಲನೆಯ ಸ್ನಾನದ ನಂಟು
ನಿನ್ನ ಮೌನದ ಹಿರಿಮೆಯನ್ನು ಎತ್ತಿ ಹಿಡಿಯಲು ಬರಲೇ
ನನ್ನುಸಿರಲಿ ನಿನ್ನೆಸರ ಬೆರೆಸಿ ಸೊಗಸಾಗಿ ಬಾಳೋಣ ಎನ್ನಲೇ
-N v-?
-
ಹೃದಯವ ಬೇಳಗಿದ ನಂದಾದೀಪ ಅವಳು
ಕಣ್ಣಿನ ಹೊಳಪನ್ನು ಸಿಂಗರಿಸಿದವಳು
ಕತ್ತಲಲ್ಲಿ ಅವಿತು ಕೂತಿದ್ದ ಮನಕೆ ಬೆಳಕನ್ನ ತಂದವಳು
ಶುದ್ಧ ಮನಸ್ಸಿನ ಹೃದಯದ ಕೋಣೆಯಲ್ಲಿ ನನಗೂ ಕೆಲಕ್ಷಣ ಜಾಗ ನೀಡಿದವಳು
ಪ್ರೇಮದ ಹಣತೆಯ ಹಿಡಿದು ಹೃದಯವಾ ಬೆಳಗಿಸಿದವಳು
ಕಲ್ಲು ಮನಸ್ಸಿನ ಕಣ್ಣಿನೊಳಗೆ ಕಣ್ಣೀರ ಹರಿಸಿದವಳು
ತಿಳಿಯದ ವಯಸ್ಸಿನಲ್ಲಿ ತಿಳಿಸದೆ ಮನಸ್ಸ ಕದ್ದವಳು
ಅಂದು ಕನಸಾಗಿ ಕಾಡಿದವಳು
ಇಂದು ನೆನಪಾಗಿ ಹೃದಯ ಕೊಂದಳು
-
ಇದ್ದು ಹೋದವಳ
ನೆನಪಿನೊಂದಿಗೆ
ಇಲ್ಲದೆ ಇರುವವಳ
ಕನಸಿನೊಂದಿಗೆ
ಬದುಕಿ ಬಾಳಲು ಜೀವನ
ಬಲು ಘನಗೋರ
-
ಕಾಣುವುದೆಲ್ಲ ಬೇಕು ಎಂದು ಬಯಸಿದರೆ ಅದು
""ಕಾಮ"" ಎಂದೆನಿಸಿತು
ಬಯಸಿದ್ದು ಸಿಗೋದೇ ಮನಸ್ಥಿತಿ ಕೆಟ್ಟಾಗ ಅದು
""ಕ್ರೋದ"" ಎಂದೆನಿಸಿತು
ದೊರೆತರು ಮತ್ತಷ್ಟು ಬೇಕು ಎಂದೆನಿಸಿದಾಗ ಅದು ""ಲೋಭ"" ಎಂದೆನಿಸಿತು
ದೊರೆತಿದ್ದು ಕೈ ಬಿಟ್ಟು ಹೋಗದೆ ನನ್ನೊಳಗೆ ಇರಬೇಕೆಂಬುದು ಅದು
""ಮೋಹ"" ಎಂದೆನಿಸಿತು
ಕೈಬಿಟ್ಟು ಹೋಗದೇ ನನ್ನೊಳಗೆ ಉಳಿದು ಅಹಂ ಬೆಳೆದಾಗ ಅದು
""ಮದ"" ಎಂದೆನಿಸಿತು
ನಮ್ಮಲ್ಲಿರುವುದು ಇನ್ನೊಬ್ಬ ನಲ್ಲಿರುವುದು ಎಂದು ತಿಳಿದಾಗ ಅದು
""ಮತ್ಸರ"" ಎಂದೆನಿಸಿತು
-
ಗುಡುಗು ಸಿಡಿಲಿನಂತೆ
ಸದ್ದಾಗಿ ನೀ ಬಂದಿದೆ
ಒಮ್ಮೆ ಅತಿವೃಷ್ಟಿ ಎಂತೆ ಬದುಕಲ್ಲಿ
ತಡೆಯಲಾರದ ನಗು ತದೆ
ಮತ್ತೊಮ್ಮೆ ಅನಾವೃಷ್ಟಿ ಯೊಂದಿಗೆ ಬದುಕಿನ
ಬವಣೆಯನ್ನ ಬದಲಾಯಿಸಿ ಹೋದೆ
ಬರಹಕ್ಕೆ ಜೀವವಾತದೆ ಜೀವನವಿಡಿ
ನನ್ನ ನೆನಪಿನಲ್ಲಿ ನರಳಿ ಹೋಗು ಎಂದೇ
""ದ್ವೇಷಿಸಿದರೆ ನನ್ನ ಪ್ರೀತಿ ಸುಳ್ಳಾದೀತು
ಪ್ರೀತಿಸಿದರೆ ಅದು ನನ್ನ ಸ್ವಾರ್ಥ ಎಂದೆನಿಸಿತು""-
ಹೇಗಿರಲಿ ಇರುವಂತೆ ತೊರೆದು ಅವಳ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಂತೆ
ನನ್ನೊಳಗಿನ ನೆನಪು-ಕನಸುಗಳ
ಗುಡಿಸಿ ರಾಶಿಯ ಮಾಡಿ
ಇನ್ಯಾರದೋ ನಗುವಿನ ಬಾನಿಗೆ ಚಂದಿರನ
ಹುರುಳಿ ಬಿಟ್ಟಂತೆ
ಎಂದು ಮರೆಯಾಗುವುದು ಹೊಂಚುಹಾಕಿ
ಪ್ರೀತಿಸಿದವಳ ನಿರ್ಧನಿಕ ನೆಟ್ಟಿರುಳು
ಒಮ್ಮೆ ಮರೆತು ಬದುಕಿಸು ಬದುಕೇ
ಈ ಮನದ ಮೇಲೆ ಕರುಣೆಯಿಟ್ಟು......-
""ಶಾಂತವಾಗು ಮನಸೆಂಬ ಮಾಯೆಯೇ""
ಸಿಡಿಲಿನಂತೆ ಇರುವ ನಿನ್ನ ಕೋಪಕ್ಕೆ
ಬಲಿಯಾಗುವವರು ಯಾರಿಲ್ಲ......
ಎಂದಿನಂತೆ ಕಾಡಿದವಳು ಇಂದೇಕೋ ಅತಿಹೆಚ್ಚು ನೆನಪಾದಳು
ದಿನ ಬಂದಂತೆ ಕನಸಿನಲ್ಲಿ ಬಂದವಳು ಇಂದೇಕೋ ದೂರದಲ್ಲಿ ನಿಂತು ಕಾಡಿ ಕೊಂದಳು
ಕೊನೆಯವರೆಗೂ ನೆನಪಲಿ ಜೊತೆಗಿರುವೆ ಎಂದವಳು
ಇಂದೇಕೋ ಮೌನ ಮುರಿದು ದೂರ ಸರಿದಳು
ಕುಡಿದ ನಶೆಯ ಇಳಿಸಿದವಳು ಮತ್ತೆ ಕುಡಿಯುವ ಹಾಗೆ ಮಾಡಿದವಳು
""ಶಾಂತವಾಗು ಮನಸೆಂಬ ಮಾಯೆಯೇ""
ಪರಿಶುದ್ಧ ಪ್ರೇಮಕ್ಕೆ ನಶೆ ಏರಿಸುವ
""ಎಣ್ಣೆ"" ""ಪರಮಾತ್ಮ"" ಇದ್ದಂತೆ
- N v...?
-
ನಿನ್ನ ಒಂದು ಸಣ್ಣ ಸ್ಪಂದನೆಯಿಂದ
ನನ್ನ ಭಾವವು ಹರಳಿ ನಿಲ್ಲುತ್ತಿತ್ತು
ನನ್ನ ಭಾವನೆ ಒಳಗಿನ ಪ್ರೀತಿಗೂ
ನಿನ್ನ ಪ್ರೀತಿಯ ಒಂದೆರಡು ಮಾತುಗಳು ಬೇಕಿತ್ತು-