QUOTES ON #ಪೊಲೀಸ್

#ಪೊಲೀಸ್ quotes

Trending | Latest
18 DEC 2020 AT 10:21

ಪೊಲೀಸಪ್ಪನ ಜೀವನ...🙏
ದಿನಕೊಂದು ...
Murder ಗಳು
Missing Case ಗಳು
Mid Night Duty ಗಳು
Robbery ಗಳು

ಬಿಸಿಲಿನ ಬೇಗೆಯ ನಡುವೆ
ಬೆವರ ಹರಿಸುತ ನಿಲ್ಲಬೇಕಾದ
ಬಂದೋಬಸ್ತು ಕರ್ತವ್ಯಗಳು...

ಸಾವು-ನೋವು, ಕಷ್ಟ-ನಷ್ಟ
ಕೊಲೆ,ಸುಲಿಗೆ,ಅತ್ಯಾಚಾರ,ಸಂಸಾರ ಕಲಹಗಳು
ಇದೆಲ್ಲವ ನೋಡುತ ದಿನವೂ ಖಾಕಿ ಬಟ್ಟೆಯ ಹಾಕಿ
ಕೆಟ್ಟ ಪ್ರಪಂಚದಲ್ಲಿ ಒಳ್ಳೆತನವ ಕಾಪಾಡಲು ಎಲ್ಲ ಆಸೆಗಳ ಬದಿಗಿಟ್ಟು ಹಲವು ನಿರ್ಬಂಧಗಳ ಸುಳಿಯಲ್ಲಿ ಬದುಕಬೇಕಾದ ಬಸವಳಿದ ಜೀವ.

-


30 MAY 2021 AT 16:17

😂ನಗೆ ಹನಿ😂

ಅವಳ ಕೇಶರಾಶಿಯು ತುಂಬಾನೆ ಸೈನ್
ಅದಕ್ಕೆ ಹಾಕಿದೆ ಅವಳಿಗೆ ಲೈನ್
ಕಟ್ಟಿಸಿದ್ರು ನನ್ನ ಕೈಯಿಂದ ಫೈನ್
ಕಾರಣ ಅವಳು ಪೋಲಿಸ್ ಉಮ್ಯಾನ್.
😛🤦‍♂️😛

-



ಉತ್ತಮ ಪೋಷಾಕು ತೊಟ್ಟ ಅನಾಗರಿಕ ನಾನು

-



ಕರುಣೆಯಲಿ ಕಾಣುವ ಸಮಯವಿದಲ್ಲ
ಈ ನಾಡು ಕಾಪಾಡಲು ಪಣತೊಟ್ಟಿಹರೆಲ್ಲಾ
ಮನೆಯೊಳಗೆ ಮುದದಿಂದ ವಾಸಿಸಿರಿ ಎಲ್ಲ
ನಿಮಗಾಗಿ ಹೊರಗಡೆ ನಾವಿದ್ದೆವಲ್ಲ....

-



💚ಪೊಲೀಸ್ ಹುತಾತ್ಮರ ದಿನ💙

ಅದೆಷ್ಟೋ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ ಆ ಹುತಾತ್ಮ ಪೊಲೀಸರಿಗೆ ಶತಕೋಟಿ ನಮನಗಳು 💐🙏💐

ಯೋಧರಿಗೆ ನೀಡುವಂತಹ ಗೌರವ ಪೊಲೀಸರಿಗೂ ಸಿಗುತ್ತಿಲ್ಲ ಎಂಬುದೇ ವಿಷಾದನೀಯ..!😔
ಪೊಲೀಸರಿಗೆ ಸಹಕರಿಸೋಣ,👍
ಪೊಲೀಸರನ್ನು ಗೌರವಿಸೋಣ 😍
🔅💪 ಸ್ಥಳೀಯ ಸೈನಿಕರಿಗೊಂದು ಸಲಾಂ 💪🔅

-


1 JUN 2020 AT 7:37

*ಆರಕ್ಷಕ ಪದದ ವಿಸ್ತರಣೆ*
ಆ-ಟ ಆಡುವ ವಯಸಲಿ ನೀನೆನಾಗುವೆ ಎನ್ನುವ ಪ್ರಶ್ನೆಗೆ ಎಲ್ಲ ಚಿಕ್ಕ ಮಕ್ಕಳ ಉತ್ತರ ಈಗಲೂ ಪೊಲೀಸ್

ರ-ಕ್ಷಕರಿಲ್ಲದೆ ಸಮಾಜ ಸುಲಲಿತವಾಗಿ ನಿದ್ದೆ ಮಾಡದು, ಇರಲಿ ನಿಮ್ಮ ನಮನ ಅವರಿಗೆ, ಸಲ್ಲಿಸಿಬಿಡಿ ನಿಮ್ಮ ಅಭಿನಂದನೆ

ಕ್ಷ-ಣ ಕ್ಷಣವೂ ಕೂಡ ಬಿಡುವಿಲ್ಲದ ಕೆಲಸ
ಮೆಚ್ಚಬೇಕು ನಿಮ್ಮ ಸಾಹಸ, ಆರಾಧಿಸಬೇಕು ಈ ನಿಮ್ಮ ನಿಸ್ವಾರ್ಥ ಸೇವೆಯ

ಕ-ರ್ನಾಟಕ ಪೊಲೀಸ್ ಎಂದರೆ ಸಾಮಾನ್ಯವಲ್ಲ, ಅವರಿಗೊಂದು ಹೆಮ್ಮೆಯ ಸಲ್ಯೂಟ್. ಅವರು ಸಾಮಾನ್ಯರೆ, ಸಂಸಾರಿಗಳೆ, ಅವರ ಈ ಪರಿಶ್ರಮಕೆ ಅವರ ಕುಟುಂಬದ ಸಹಕಾರವೂ ಕಾರಣ, ಅವರಿಗೂ ಕೂಡ ಇರಲಿ ನಿಮ್ಮ ನಮನ.

-


29 MAY 2020 AT 17:11

ಬದುಕು ಸಾಗುತಿದೆ ಭಯದಲ್ಲಿ...
ಕೊಂಚ ಭಯವಿಲ್ಲ ತನಗಾಗಿ...
ಮನ ಮಿಡಿಯುತ್ತಿರುವುದು ತನ್ನವರಿಗಾಗಿ...
ನಿಸ್ವಾರ್ಥತೆಯ ಮಡಿಲಲ್ಲಿ...
ಬದುಕು ಸಾಗುತಿದೆ ಭಯದಲ್ಲಿ...

-


13 MAY 2020 AT 13:23

ಖಾಕಿ ತೊಟ್ಟ ದೇಶ ಸೇವೆಯ ಸಿಪಾಯಿ ನಾನು...

-



ಸಾವಿರ ಜನ ಕೆಟ್ಟವರ ಮದ್ಯೆ ಒಬ್ಬ ಒಳ್ಳೆ ವ್ಯಕ್ತಿ ಇದ್ರೆ ಅವನು ಒಳ್ಳೆಯವನೆ..
ಹಂಗೆ..
ಸಾವಿರ ಜನ ಒಳ್ಳೆಯವರ ಮದ್ಯೆ ಒಬ್ಬ ಕೆಟ್ಟವನು ಇದ್ರೆ ಅವನು ಕೆಟ್ಟವನೆ..

ಆತ್ಮ ಸಂಚಾರಿ ಆರಕ್ಷಕ.
ಮನಸ್ಸಿನ ಭಾವನೆಗಳಿಂದ ಮನುಷ್ಯ, ರಾಕ್ಷಸ..
ಮುಖದ ಆಕಾರದಿಂದಲ್ಲ..

Unwanted values.

-



ಹರಿದ ಬಟ್ಟೆ ತೊಟ್ಟ ಪವಿತ್ರ ಮನಸುಳ್ಳವನು ನಾನು.

-