ಇಷ್ಟವಾದ ಕಷ್ಟಗಳ ಮಧ್ಯೆ
ಅವಳು ದೂರ ನಿಂತಿದ್ಲು!!
ಅನಿವಾರ್ಯ ಆಯ್ಕೆಗಳ ಮುಂದೆ
ಅವಳು ತೀರಾ ಸೋತಿದ್ಲು!!
ಅನಿವಾರ್ಯತೆಗೆ
ಸ್ವತಂತ್ರ ಕೊಟ್ಟು
ಆಸೆಗಳ ಬಿಟ್ಟಿರಬೇಕೆ..
ಆಸೆಗಳ ಬಿತ್ತಿರಬೇಕೆ.?-
ಕೆಲವು ಭಾವನೆಗಳು..
ಕೆಲವು ದೃಷ್ಟಿಗಳು..
ಕೆಲವು ಅನುಭವಗಳು..
ಹಲವು ಕವಿತೆಗಳಾಗಿವೆ..
ಹಲವು ... read more
ನಿಜವಾದ ಹುಚ್ಚೆಂದರೆ,
ಒಂದು ಮರೆತುಹೋಗುವುದು..
ಇಲ್ಲವೇ ನೆನಪಾಗುವುದು..
ಕ್ಷಣ ಕ್ಷಣಕ್ಕೆ ಬದಲಾಗಬಾರದು!!
ಆಗಲೇ ಬಾರದು!!-
ಒಂಟಿಯಾಗಿ ಅತ್ತದ್ದಷ್ಟೇ
ನೋವು!!
ನಾಲ್ಕು ಜನರೆದುರು
ನಾಲ್ಕು ಹನಿ ಹರಿದದ್ದು
ನಾಟಕವೇ!!
ಒಬ್ಬಂಟಿಯಾಗಿ ಕಲಿತದ್ದು
ಪಾಠವೇ!!-
ಅಲ್ಲೊಂದೀಟು..
ಇಲ್ಲೊಂದೀಟು..
ಹಂಚಿ ಉಳಿದ ಪ್ರೀತಿ
ನನ್ಗ ಕೊಡ್ಬೇಡ!!
ನನ್ಗದು ಬ್ಯಾಡ!!
ಅವ್ರು ಬೇಕಾ..
ಇವ್ರು ಬೇಕಾ..
ನನ್ ಸಲುಗಿ ಬಿಡ!!
ನನ್ ಜೀವನವ ಸುಡುಗಾಡ!!-
ಯಾವುದೇ ಯಾಕ್ಷನ್
ಡೈರೆಕ್ಷನ್ ಇರದೆ ಅವಳ ಮನ
ಕುಣಿಯುತ್ತೆ.. ತಣಿಯುತ್ತೆ!!
ಹೇಳದೇ ನಟನ
ನಿರ್ದೇಶನಕ್ಕೆ ಒಪ್ಪದ ಈಕಣ್
ಮಿಟುಕುತ್ತೆ.. ಸಿಡುಕುತ್ತೆ!!-
ಒಲಿಯದ ಪ್ರೀತಿಗಳೆಲ್ಲ
ಸ್ನೇಹವಾಗುತ್ತವೆ!!
ಅದಕೆ ಸ್ನೇಹ ಒಳ್ಳೆಯದಲ್ಲ!!
ನನಗೂ ಸ್ನೇಹಿತರಿಲ್ಲ!!
ಮೋಹಿತರೆಲ್ಲ!!-
ಒಂದ್ ಕ್ಷಣ
ನೀ ಆರಾಮ್ ಇರು
ಅಂದ್ಬಿಟ್ರೆ ಆಗಿತ್ತು!!
ಕ್ಷಣ ಕ್ಷಣಕ್ಕೂ
ಕೊಲ್ಲೋ
ಅವಶ್ಯಕತೆ ನಿನ್ಗಿರ್ಲಿಲ್ಲ!!
ಅವಶ್ಯಕವಾಗಿ ನೀನನ್ ಕೊಂದಿಲ್ಲ!!-
ಪ್ರೀತಿ ಕಣ್ತುಂಬುತ್ತೆ..
ಕಣ್ಣಲ್ಲೇ ಇದ್ದು ಕಣ್ಣೀರಿಡುತ್ತೆ..
ಕಣ್ಣಲ್ಲೇ ಇಂಗುತ್ತೆ..
ಕಣ್ಬಿಟ್ಟು ಕಣ್ಣಿಂದಾಚೆ ಬಂದ್ರೆ;
ಆ ಕಣ್ಣಲ್ಲಿ ಪ್ರೀತಿ ಇರಲ್ಲ..
ಕಣ್ಣೀರು ಪ್ರೀತಿಯಾಗಲ್ಲ..-
ಅರ್ಥವಾಗಿಲ್ಲ
ಅನ್ನೋದಕ್ಕಿಂತ
ಇಷ್ಟವಾಗಿಲ್ಲ
ಅನ್ನೋದು ಸತ್ಯಸರಿ
ಇಷ್ಟವಾಗಿದ್ದು
ಅರ್ಥವಾಗಿರುತ್ತದೆ..
ಅರ್ಥವಾಗಿದ್ದೆ
ಇಷ್ಟವಾಗಿರುತ್ತದೆ..-
ಪ್ರೀತಿಗೆ ಕೋಚಿಂಗ್ ಕ್ಲಾಸ್
ಶುರುವಾಗಿದೆ,
ಫೀಸು ಫಾರ್ಮುಗಳೇ ಬೇಕಿಲ್ಲ..
ಮೂವತ್ತು ದಿನಗಳಲ್ಲಿ
ಪ್ರೀತಿಯಾಗಿದೆ,
ಪುಟಗಳು ಪುಸ್ತಕದಲೇ ಇರ್ಲಿಲ್ಲ..-