Basava Gunjahalli   (✍Basu ಗುಂಜಳ್ಳಿ)
79 Followers · 195 Following

read more
Joined 26 September 2020


read more
Joined 26 September 2020
16 MAY AT 23:51

ನನ್ನಾಕಿ...💌

ಕೈಗೆ ಸಿಗದ ಕನ್ನಿಕೆ,
ಕನಸಲ್ಲೂ ಕಾಡುವ ಕಾಮಿನಿ,
ಕಲ್ಪನೆಯಲಿ ಕಾಣೋ ಕಾಮನಬಿಲ್ಲು,
ಮನದಿ ಮಾರ್ಧನಿಸೋ ಮಧುರ ಧ್ವನಿ,
ನನ್ನಾಕಿ,
ತರ್ಕಕ್ಕೆ ನಿಲುಕದ ಕಾಲ್ಪನಿಕ ಕಥೆಗಳ ನಾಯಕಿ.☺️

-


22 MAR AT 17:04

ಬೆಂದ ಒಡಲಿಗಿದು ಮೊದಲ ಮಳೆಹನಿಯ ಮುತ್ತಿನ ಸಿಂಚನ,
ಹನಿಯ ಪರಾವಲಂಬಿಯ ಸ್ಪರ್ಶಕೆ ನಾಚಿತು ಕಾನನ...🥗

ಅಬ್ಬಾ! ಸುಡುವ ನೆತ್ತಿಗೆ ಕೊಂಚ ಸಮಾಧಾನ,🤗
ಬಾಡುತ್ತಿರುವ ಬಳ್ಳಿಯ ನಿರೀಕ್ಷೆಯಂತೆ ಧರೆಗೆ ತಂಪೆರೆಯಿತು ಮಳೆರಾಯನ ಆಗಮನ...🌦️

-


14 FEB AT 22:19

ದುಡಿಮೆಯೇ ಬದುಕಾದಾಗ,
ಒತ್ತಡವೆಂಬುದು ಜೀವನ ಶೈಲಿಯಾದಾಗ,

ಆಗೊಮ್ಮೆ ಈಗೊಮ್ಮೆ ಊರಿಗೆ ಹೋಗಿ ನಮ್ಮನೆಗೆ ನಾವು ಅತಿಥಿಯಾದಾಗ,
ಹಬ್ಬ ಹರಿದಿನಗಳು ಅಪರೂಪವಾದಾಗ,

ನೆಮ್ಮದಿಯು ದುಬಾರಿಯಾದಾಗ,
ಬಹುರೂಪಿ ಬದುಕು ಬಲು ವಿಪರ್ಯಾಸ ಎನಿಸಿಕೊಳ್ಳುತ್ತದೆ.🤗

-


3 FEB AT 22:45

Background ಬೇಕಿಲ್ಲ
BioData ಕೇಳ್ಳಿಲ್ಲ...🤗

ಆಕಸ್ಮಿಕ ಭೇಟಿಯೊಂದೇ ಬಲವಾದ ಸ್ನೇಹಕ್ಕೆ ಬುನಾದಿಯಾಯ್ತು,❣️
ಅಬ್ಬಾ... ಅದೆಷ್ಟೋ ವರ್ಷ ಜೊತೆಗಿದ್ದ ಬಾಂಧವ್ಯದಂತೆ ಕಲ್ಪವೃಕ್ಷವಾಗಿ ಬೆಳೆಯಿತು.🫰

ಯಾರ ದೃಷ್ಟಿ ಬೀಳದಿರಲಿ,
ಹಸಿರ ಸೃಷ್ಟಿಯಂತೆ ಸದಾ ಹಸನಿರಲಿ...🫶

-


1 JAN AT 13:35

ವರುಷವೆಲ್ಲ ಹೋರಾಟವಂತೆ,
ಸುಖವೋ, ದುಃಖವೋ
ಏನೇ ಇರಲಿ ನಗಬೇಕಂತೆ.

ಎಲ್ರಿಗೂ New Year ಅಂತೆ
Happy'Ness ನ ನೀವೇ ಹುಡುಕ್ಬೇಕಂತೆ. 😁

💐 ಎಲ್ರಿಗೂ Wish ಮಾಡ್ಬೇಕಂತೆ.
ಮಾಡ್ದೋರಿಗೆ ವರ್ಷ ಪೂರ್ತಿ ಒಳ್ಳೆದಾಗುತ್ತಂತೆ.😍

-


20 DEC 2024 AT 21:05

ಬಾಡಿಗೆಯ ಬದುಕಿದು:🙂

ನೆಲಕೆ ಬಿದ್ದ ಬಡ ಜೀವವ ಬಡಿದೆಬ್ಬಿಸಿ ತಬ್ಬಿ ಹಿಡಿಯುವರಿಲ್ಲಾ,
ರಾಯಲ್ಲು ಹೋಟೆಲ್ಲಿನ ಭಾರೀ ಭೋಜನವು ಅಮ್ಮ ತಟ್ಟಿದ ಎರಡು ಬಿಸಿ ರೊಟ್ಟಿಗೂ ಸಮವಿಲ್ಲ...

ಅಳುವಲ್ಲೂ ನಗುವಲ್ಲೂ ನೀ ಅನಾಥ...
ಏನಿದ್ದರೇನು ನಿನ್ನ ಕೈಯಲೇ ಕಣ್ಣೊರಿಸಿಕೊಂಡು ಬಾಳು,
ನೋವ ಮರೆತು ನಗುತಾ🤗

-


30 OCT 2024 AT 23:39

ನಗದು ನಭದಷ್ಟು ಇದ್ದರೇನು ಫಲ...
ಫಲವತ್ತಾದ ನಿಷ್ಕಲ್ಮಶ ನಗುವು ತಾನಾಗಿ ಮೂಡುವುದು ಸ್ವಯಂಪ್ರೀತಿ ಬೆಟ್ಟದಷ್ಟಿದ್ದಾಗ🫶
ನಗದಿನಂತೆ ಕಸಿಯಲೂ ಬಾರದು,
ಕದಿಯಲೂ ಬಾರದು...

ಹಂಚಿದಷ್ಟು ಸಾಗರದಾಚೆಗೂ ಹರಿವ ಭೋರ್ಗರೆವ ನೀರದು,
ಮಕರಂದ ಮೊಗದಲಿ ಮೂಡುವ ನಗುವು...🤗

-


23 OCT 2024 AT 7:35

ಎಲ್ಲಿ ರಮಿಸುವುದು ಮನವು?🙃

ಎದುರು ಬಂದ್ನಿಂತ ಸಂಗತಿಗಳನ್ನೆಲ್ಲವನೂ ಸಂಭ್ರಮಿಸುವ ಹುಚ್ಚನೋ ನಾನು??
ನಾನೆಲ್ಲರಂತಿರುವಂತಿದ್ದರೆ ನಾನೂ ಹುಚ್ಚನೇ (?)

ಚಿಂತೆ ಯಾರಿಗೂ ತಪ್ಪದು...
ಸಮಯವನು ಸಂಭ್ರಮಿಸೋ ಹುಚ್ಚರಾಗಿ ಜೀವಿಸುವುದು ಲೆಸಲ್ಲವೇ...(?)

-


19 SEP 2024 AT 21:10

ನನ್ನಾಕಿಯದ್ದೆ ತಪ್ಪು...🙈

ದಾರೀಲಿ ಹೋಗ್ತಿದ್ದವನನ್ನ ದಿಟ್ಟಿಸಿ ನೋಡಿ
ಅದೆಂತದೋ ಮುಂಗುರುಳ ಸರಿಸಿ
ಮುಗುಳು ನಗೆ ಬೀರಿ ಮತ್ತು ಬರಿಸಿದಳು.

ನಾನೀಗ ಸದಾಕಾಲ ಅವಳ ನಶೆಯಲ್ಲಿರುವ ಪ್ರೇಮದಾಸ.❣️

-


6 SEP 2024 AT 20:20

ಈಗೀಗ ಊರಿನ ಹಿರಿಕರೆಲ್ಲರೂ ಊರುಗೋಲು ಹಿಡಿದಿದ್ದಾರೆ...
ಅಂಗಡಿಗೆ ಓಡೋಡಿ ಕಟ್ಟು ಬೀಡಿ ತಂದು ಕೊಟ್ಟು ಅಜ್ಜ ಹೇಳುವ ಕತೆ ಕೇಳುತ್ತಾ,
ಮಿಕ್ಕಿದ್ದ ಚಿಲ್ಲರೆ ದುಡ್ಡಲ್ಲಿ ಖುಷಿಪಡುತ್ತಿದ್ದ ನಾವಿಂದು
ಹಿರಿಜೀವಗಳ ಕೈಗೆ ಸಿಗದಂತೆ
ಕಂತೆ ನೋಟಿಗಾಗಿಯೋ, ಸಂತೆಯಲ್ಲಿನ ಸರಿಕಿಗಾಗಿಯೋ ಓಡುತ್ತಿದ್ದೇವೆ.
ಕಾಲ ಬಹುಬೇಗ ಸಾಗಿತು...
ನಾವೂ ಮುಂದೊಂದಿನ ಊರುಗೋಲು ಹಿಡಿದು ನಡೆಯಬೇಕಾದವರೇ 🥹

-


Fetching Basava Gunjahalli Quotes