Jayasheel Jathan   (ಜೈ...✍️)
111 Followers · 32 Following

read more
Joined 6 April 2020


read more
Joined 6 April 2020
6 JUL AT 19:38

ನಾವುಗಳು ಮೋಸ ಹೋಗೋದು
ಮೋಸಗಾರರಿಂದಲ್ಲ...
ನಂಬಿಕಸ್ಥರಿಂದ...

-


5 JUL AT 20:31

ನಮ್ಮ ಸಮಯ ಸರಿಯಿಲ್ಲದಿದ್ದಾಗ
ನಾವು ಹಾಡು ಹಾಡುತಿದ್ದರೂ,
ಪಕ್ಕದಲ್ಲಿರುವವರಿಗೆ
ಬೈಗುಳದಂತೆ ಕೇಳಿಸುತ್ತದೆ...

-


4 JUL AT 20:10

ಮೌನ

ಮಾತಿಗೆ ಒಂದರ್ಥವಾದರೆ
ಮೌನಕ್ಕೆ ನೂರು ಅರ್ಥ...

ಮೌನ ಒಂದು ಭಾಷೆ
ಮೌನ ಒಂದು ಸಂದೇಶ
ಮೌನ ಒಂದು ಭಾವನೆ
ಮೌನ ಕೂಡಾ ಒಂದು ಮಾತೇ...

-


3 JUL AT 16:57

ಅವಳು ಕಣ್ಣೆದುರು ಬಂದಾಕ್ಷಣ...
ಎದೆಯೊಳಗೆ ಗರಿಬಿಚ್ಚಿ ನವಿಲ ನರ್ತನ...

-


20 MAY AT 15:44

ಬದಲಾಗದ ಭಾವಗಳ ಭಾವಲಹರಿ ಇವಳು…
ನಿಷ್ಕಲ್ಮಶ ಮನಸ್ಸಿನ ಅಪರಂಜಿ ಇವಳು…
ಬಂಧಗಳ ಬಿಗಿಯಾಗಿಸಿ ಮರುಜನ್ಮ ಕೊಟ್ಟವಳು…
ಅರ್ಥೈಸಿಕೊಂಡಷ್ಟು ಮತ್ತಷ್ಟು ಸನಿಹವಾದವಳು…

ಮಾಸಿ ಹೋಗದ ನೆನಪುಗಳ ಸರಮಾಲೆ ಇವಳು…
ವಾಸಿಯಾಗದ ನೋವುಗಳ ಸಹಿಸಿಕೊಂಡವಳು…
ಪರಿಪೂರ್ಣತೆಗೆ ಸಂಪೂರ್ಣ ವ್ಯಾಖ್ಯಾನವಾದವಳು…
ಈ ಬದುಕಿನ ಅತ್ಯದ್ಭುತ ಪರಿಚಯವೇ ಇವಳು…

ಅನುದಿನವೂ ಅನುಕ್ಷಣವು ಅನುಗಾಲವೂ
ಸಂತೋಷದ ಗೂಡಾಗಲಿ ನಿಮ್ಮ ಬಾಳು…
ಹುಟ್ಟು ಹಬ್ಬದ ಶುಭಾಶಯಗಳು…

-


25 DEC 2024 AT 19:06

ಅಚಲವಾದ ಪ್ರೀತಿಗೆ
ಅಗಲಿಕೆಯಲ್ಲೂ ಸೋಲಾಗದು...

-


10 DEC 2024 AT 14:58

ಕೊಟ್ಟು ಕಿತ್ತುಕೊಳ್ಳುವ ಆಟದಲ್ಲಿ ಯಾವಾಗಲೂ ಗೆಲ್ಲುವುದು ದೇವರೊಬ್ಬನೇ…

ಯಾಕಂದ್ರೆ ಅವನೇ ಕಿತ್ತುಕೊಂಡ ಮೇಲೆ ಅದನ್ನು ಮರಳಿ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ…

-


28 SEP 2024 AT 19:40

ಜನನ ಕೇವಲ ತಾತ್ಕಾಲಿಕ...
ಮರಣ ಮಾತ್ರ ಶಾಶ್ವತ...

-


26 AUG 2024 AT 22:11

ಈ ಕಾಲದಲ್ಲಿ ತಪ್ಪಿತಸ್ಥರಿಗಿಂತ ತಪ್ಪು ಮಾಡದವರೇ ಹೆಚ್ಚು ಶಿಕ್ಷೆ ಅನುಭವಿಸುತ್ತಿರುವುದು...

In this era, the innocent were punished more than the guilty...

-


19 AUG 2024 AT 20:04

ಕೆಲವೊಮ್ಮೆ ಸನ್ನಿವೇಶಗಳು ಅವಕಾಶಗಳನ್ನು ಕಸಿದುಕೊಳ್ಳುತ್ತವೆ...


Sometimes situations steals opportunities...

-


Fetching Jayasheel Jathan Quotes