ಭುವಿಯ ಸೌಂದರ್ಯವನೆಲ್ಲ
ಸವಿಯಲು ಬಂದಿದ್ದೇವೆ ನಾವು
ಆದರೆ ಭುವಿಯ ಸಂಪತ್ತನ್ನೆಲ್ಲ
ದೋಚುತ್ತಿದ್ದಾರೆ ದುರುಳರು-
ಪ್ರೀತಿಯಿಂದ ಹಿಂಡಿದರೆ ನಾ ಜೇನಾಗುವೆ
ನೋವಿನಿಂದ ಸೋಸಿದರೆ ನಾ ಉಪ್ಪಾಗುವೆ
ಮತ್ತೆ ಶೋಧಿಸ ಬೇಡ ನನ್ನ.-
ನೀ ಬಿಟ್ಟು ಹೋದ ನೆನಪುಗಳು
ಮತ್ತೆ ಅರಳಲಾರಂಭಿಸಿದೆ ಹುಡುಗ
ಪರಿಮಳದ ಘಮಲಿಗೆ
ದುಂಬಿಗಳು ಸುತ್ತಲಾರಂಬಿವೆ
ತಿಳಿಸಲಿ ಹೇಗೆ ನಾ ನಿನ್ನದೇ ಸ್ವತ್ತೆಂದು.
-
ಹುಚ್ಚು ಹಿಡಿಸುತ್ತಿದೆ
ತಣ್ಣನೆಯ ಈ ಗಾಳಿ
ರೋಮ ರೋಮಕ್ಕೂ
ನೀನೇ ಬೇಕೆಂಬ ಚಾಳಿ
ಕಾವೇರಿಸುತ್ತಿಲ್ಲ ಹೊದ್ದಿಕೊಂಡರು
ಬೆಚ್ಚಗಿನ ಈ ಹೊದಿಕೆ
ಎಷ್ಟು ಕರೆದರು ನೀ
ಬರುತ್ತಿಲ್ಲ ಯಾಕೆ ?
ಬಿಸಿಗಾಳಿಯೇನು ಇಲ್ಲ ಅಲ್ಲಿ
ಇರಬಹುದೇನೋ ನಾ ಕಟ್ಟಿದ ತಾಳಿ
ನಿನಗೂ ನನ್ನಂತೆ ಅನ್ನಿಸುತ್ತಿಲ್ಲವೇ
ನನ್ನ ಬಿಟ್ಟು ನೀ ಹೇಗಿರುವೆ ?-
ಆಷಾಢದ ಗಾಳಿಯೇ
ಬಯಸುತ್ತಿದೆ ನಿನ್ನಪ್ಪುಗೆಯನ್ನ
ಎಲ್ಲಿದ್ದರೂ ಬಂದುಬಿಡು
ಒಮ್ಮೆಯಾದರೂ ಸೇರುವ ಚಿನ್ನ
ಏನಾದರಾಗಲಿ ತಣ್ಣನೆ ಗಾಳಿಯು
ಬಿಸಿಯಾಗುವಂತೆ ಸಂಭ್ರಮಿಸೋಣ
ಆಷಾಢಕ್ಕೂ ಪ್ರೀತಿಸುವ
ಹುಚ್ಚು ಹಿಡಿಸೋಣ.-
ಇಡೀ ಬ್ರಹ್ಮಾಂಡವನ್ನು
ನೀ ಅನ್ವೇಷಿಸ ಬಹುದು
ಆದರೆ ಕಡಲಾಳವನ್ನು
ನೀ ಅರ್ಥೈಸಿಕೊಳ್ಳಲಾರೆ
ನನ್ನ ಬಾಹ್ಯ ನೋಟ ಕಂಡು
ನೀ ಗುಸುಗುಸು ಮೆಲುಕು
ಹಾಕಬಹುದು
ಆದರೆ ನನ್ನ ಅಂತರಾಳವನ್ನು
ನೀ ಕಿಂಚಿತ್ತೂ ಅರಿಯಲಾರೆ.-
ಅವಳೊಮ್ಮೆ ನಕ್ಕರೆ ಹುಣ್ಣಿಮೆಯ ಬೆಳದಿಂಗಳು
ಅತ್ತಾಗ ಮಾತ್ರ ಅಮಾವಾಸ್ಯೆಯ ಕಾರ್ಗತ್ತಲು.
-
ಹರಿವ ತೊರೆಯಲ್ಲ ನಾನು
ಸುರಿವ ಮಳೆಯಲ್ಲ ನಾನು
ಬೀಸೋ ಗಾಳಿಯಲ್ಲ ನಾನು
ತೇಲೋ ಮೋಡವಲ್ಲ ನಾನು
ಇಂಪು ಗಾಯನವಲ್ಲ
ಕಂಪು ಪರಿಮಳವು ಅಲ್ಲ
ತಿರುಗೋ ಬೂಮಿಯಂತೆ ಬರೀ
ಬಾರವನ್ನೇ ಹೊತ್ತಿದ್ದೇನೆ
ಹುಣ್ಣಿಮೆಯಂದು ಮಾತ್ರ
ಸ್ವಲ್ಪ ಕಿರುನಗೆ ನನಗೆ
ಇದು ನನ್ನ ಬದುಕು....-
ನೋಟಲ್ಲಿ ಮಹಾತ್ಮ ಗಾಂಧಿಯ ಫೋಟೋ
ಸ್ಯಾನಿಟರಿ ಪ್ಯಾಡ್ ಒಳಗೆ ದುರಾತ್ಮ ರಾಹುಲ್ ಗಾಂಧಿಯ ನೋಟ.-
F 35 ಅಂದ್ರೆ ಫೇಲ್ 35
ಮೂವತೈದು ಪಾಸಿಂಗ್ ಮಾರ್ಕ್ಸ್ ಇದ್ದರು
ಪಾಸ್ ಆಗಲಾರದ ವಿಶ್ವದ ಅತ್ಯಂತ ಬೆಲೆ ಬಾಳುವ ಅಮೆರಿಕದ ಫೈಟರ್ ಜೆಟ್
...😀😀...-