ಅಳುಕುತಿದೆ ಮನವು ನಿನ್ನ ಸನಿಹದಲಿ
ಅರಳಲು ಕಾದಿದೆ ನಿನ್ನ ಮಡಿಲಿನಲಿ
ತಪ್ಪದೇ ತರುವೆನು ಉಡುಗೊರೆಯನ್ನು
ನೀನೊಪ್ಪದೇ ಇದ್ದರೂ ಬೆಳದಿಂಗಳನ್ನು-
ಕನಸುಗಳ ಕಛೇರಿಗೆ ಕಾಗದ ಬರೆದಿರುವೆ
ಈ ರಾತ್ರಿಯಾದರೂ ನಿನ್ನನ್ನೇ ಕಳುಹಿಸಲು
ಮನದ ಬಾಗಿಲ ಕದ ತೆರೆದು ಕಾದಿಹೆ
ನಿನ್ನ ಆಗಮನಕೆ ಬಹುಪರಾಕ್ ಕೂಗಲು...-
ನಿಜ ಮಾತ್ರ ಹೇಳು ರಾಧೆ....
ಉದ್ಯಾನವನದ
ಉದ್ದನೆಯ ಬೆಂಚಿನಲ್ಲಿ
ನಿನ್ನ ಮಡಿಲ ಮೇಲೆ
ಉದ್ದಗೆ ಮಲಗಿ
ಆಕಾಶ ನೋಡುವ
ನನ್ನಾಸೆಗೆ ತಣ್ಣೀರೆರೆಚಿ
ಬಾಚಿ ನನ್ನ ಮುಖವೆಳೆದು
ಎದೆಗೊತ್ತಿಗೊಂಡು
ನನ್ನನ್ನು ಉಸಿರುಗಟ್ಟಿಸಿ
ಸಾಯಿಸುವ ಹುನ್ನಾರವೇ.....-
#ರಾಧೆ...❤
ಮತ್ತೆ ಮತ್ತೆ ಮತ್ತೇರಿಸುವ
ಮಾದಕ ಚುಂಬನದಿ
ಕಣ್ತೆರೆಯಲು ಬಿಡದ
ನಿದಿರೆ ನೀನು
ಸುತ್ತ ಮುತ್ತ ಎತ್ತ ಹೊರಳಿದರೂ
ಕತ್ತಲಲ್ಲೇ ತಬ್ಬಿ
ಮತ್ತೂ ಬೇಕೆನಿಸುವ
ಮದಿರೆ ನೀನು-
ಒಬ್ಬ ವ್ಯಕ್ತಿಯ ನೆಮ್ಮದಿಯನ್ನ
ಆ ವ್ಯಕ್ತಿಯ ಹುಟ್ಟು
ಹವ್ಯಾಸ
ಮದುವೆ
ಮಕ್ಕಳು ನಿರ್ಧಾರ ಮಾಡ್ತಾರೆ
ಇವೆಲ್ಲವೂ ಸರಿಯಾಗಿದ್ದರೆ
ಆತ ಈ ಭೂಮಿಯ ಪರಮ ಸುಖಿ
ಇದರಲ್ಲಿ ಒಂದಾದರೂ ದಾರಿ ತಪ್ಪಿದ್ರೆ
ಅಂದೇ ಅವನ ಜೀವಂತ ತಿಥಿ....
ಆದರೂ
ಮಾನವನ ನೆಮ್ಮದಿಯನ್ನು
ಅವನ ಹೊರತು ಬೇರೆಯವರು
ನಿರ್ಧರಿಸುವುದು ಎಷ್ಟು ಸರಿ....?😊-
ಗಂಧ ತೇದಿದಷ್ಟು ಪರಿಮಳ
ತೇದಿ ತೇದಿ ಬಂದ ಗಂಧ
ಯಾರೋ ಹಣೆಗೆ ಹಚ್ಚಿಕೊಂಡರು
ಇನ್ಯಾರೋ ಮೂಗೆಳೆದು ಆಘ್ರಾಣಿಸಿದರು
ಗಂಧಕ್ಕೆ ನಿನಗೇನು ಲಾಭ ಎಂದರೆ
ಸವೆದಿದ್ದಷ್ಟೇ ಲಾಭ ಎಂದಿತು
ಉಪಯೋಗಿಸಿಕೊಂಡವರು
ಉಪಾಯದಲ್ಲಿ ಜಾರಿದರು
ಲಾಭ ಪಡೆದುಕೊಂಡವರು
ಲೋಭದ ಅಮಲಲ್ಲಿ ಲೋಕವನ್ನೇ ಮರೆತರು
ಏಗಿದ್ದಷ್ಟೇ ಲಾಭ
ಸವೆಸಿದ್ದಷ್ಟೇ ಬದುಕು.....😊-
ನಾನೋ...
ಕವನ ಗೀಚುವ ಸಾಧಾರಣ ಕವಿ
ನನಗೆ ಅಲ್ಪಸ್ವಲ್ಪ ಅಭಿಮಾನಿಗಳು..
ಹುಡುಗಿಯರು ತುಸು ಹೆಚ್ಚೇ ಎಂದೆ...
ಪೆಚ್ಚು ಮೋರೆ ಹಾಕಿ
ಹುಸಿಗೋಪ ತೋರಿ
ಅವಳೆಂದಳು...
ನನಗಿಂತ ದೊಡ್ಡ ಅಭಿಮಾನಿ ಬೇಕೆ?
ಸಮಾಧಾನಿಸುವ ಸರದಿ ನನ್ನದಾಗಿತ್ತು
ಯಾರೆಂದರು ನೀ ನನ್ನ ಅಭಿಮಾನಿಯೆಂದು
ನೀನು ನನ್ನೆಲ್ಲ ಕವನಕೆ ಸ್ಪೂರ್ತಿ ಇಂದು....
ರಾಧೆ ನಾಚಿ ನೀರಾದಳು....
ನೀರೆ ನನಗೊಲಿದಳು....😍-
ಕಣ್ಣಾರೆ ಕಾಣದೇ...ಕಿವಿಯಾರೆ ಕೇಳದೆ... ನಾನೆಂದೂ ಹೇಳಿಕೊಟ್ಟ ಮಾತನ್ನ ಕೇಳಿ ಯಾರನ್ನೂ ದ್ವೇಷ ಮಾಡಿಲ್ಲ..ಮಾಡುವುದೂ ಇಲ್ಲ... ಏಕೆಂದರೆ ನನಗೆ ಚೆನ್ನಾಗಿ ತಿಳಿದಿದೆ... ತನಗಿನ್ನು ಉಳಿಗಾಲ ಇಲ್ಲ ಎಂದರಿತ ವ್ಯಕ್ತಿಯು ಮೊದಲು ಮಾಡುವ ಕೆಲಸ ಇಬ್ಬರ ಮಧ್ಯ ತಂದಿಕ್ಕಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವುದು...
-
ದೇವರು ಕೇವಲ ಸುಖ ಸಂಪತ್ತು
ನೆಮ್ಮದಿ ಸಂತೋಷಗಳನ್ನಷ್ಟೇ
ಬೇಡಿದರೆ ಅನುಗ್ರಹಿಸಲಾರ
ಎಂದುಕೊಂಡರೆ ಅದು ಭ್ರಮೆ
ಕೆಲವೊಮ್ಮೆ ಕಡು ಕಷ್ಟದಲ್ಲಿದ್ದು
ಜೀವ ಜೀವನವೇ ಬೇಡವೆಂದು
ಸಾವು ಬೇಡಿದರೂ
ಅನುಗ್ರಹಿಸಲಾರ...
ದೇವರ ಆಟ....ಬಲ್ಲವರಾರು....😊-
ಆಡಂಬರದ ಮನೆಯಲ್ಲಿಲ್ಲ
ಆಭರಣದ ಸದ್ದಿನಲ್ಲಿಲ್ಲ
ಆನಂದದ ಕಾರು ಕಛೇರಿಯಲ್ಲಿಲ್ಲ
ಅನುಭವಿಸಿ ತಿನ್ನುವ ಆಹಾರದಲ್ಲಿಲ್ಲ
ನೆಮ್ಮದಿ ಎನ್ನುವುದು
ಮದಿರೆಯಲ್ಲಿರಬಹುದು
ಮತ್ತೆಂದೂ ಏಳದ ನಿದಿರೆಯಲ್ಲಿರಬಹುದು..
-