ಈ ಬದುಕ ಸವಿಯಲು ಜೊತೆಗಾರ ನೀ
-
ಪ್ರಾಮಾಣಿಕ ಪ್ರೀತಿ
ನಿಷ್ಕಲ್ಮಶ ಹೃದಯ
ಸಿಗದ ಬದುಕು ನಶ್ವರ
ನಂಬಿಕೆಗೆ ದ್ರೋಹ.
ಪ್ರೀತಿಗೆ ಮೋಸ
ಮಾಡಿದರೆ ಕ್ಷಮಿಸನಾ ಈಶ್ವರ
ಕೈ ಹಿಡಿದವರ ಜೊತೆ ನಿಯತ್ತು
ಕೊಟ್ಟ ಮಾತಿನಂಗೆ ನೆಡೆಯೋ ತಾಕತ್ತು
ಇದ್ದರೆ ತ್ರೀಮೂರ್ತಿಗಳು ಕಾಯ್ತಾರ ಅಂತವರ ಶಿರ
-
ಏರಲಿಲ್ಲ ಇಳಿಯಲಿಲ್ಲವಾದರು
ಸಂತೋಷಕ್ಕೆನೂ ಕಮ್ಮಿಯಿರಲಿಲ್ಲ
ಹಿಗ್ಗಿದವಳು ಕುಗ್ಗಿದೆ
ಕುಗ್ಗಿದವಳು ತಲೆಬಾಗಿದೆ
ಕೊನೆಗಾದಕು ಗೆದ್ದೆ ಎಂದುಕೊಂಡರೆ
ಸೋತಂತೆ ಬದುಕಾಗಿದೆ...
-
ಎಲ್ಲಿ ಪ್ರಾಮಾಣಿಕ ಪ್ರಯತ್ನಗಳಿರುತ್ಕವೆಯೋ
ಅಲ್ಲಿ ಗುರಿ ಸಾಧನೆಯ ಗೆಲುವಿರುತ್ತದೆ
ಎಲ್ಲಿ ನ್ಯಾಯಯುತ ನೆಡವಳಿಕೆ ಇರುತ್ತದೊ
ಅಲ್ಲಿ ಪ್ರಾಮಾಣಿಕತೆ ಇರುತ್ತದೆ
ಎಲ್ಲಿ ಭ್ರಷ್ಟಾಚಾರ ಇದುತ್ತದೆಯೋ
ಅಲ್ಲಿ ದೇಶದ ಅವನತಿಯ ದಾರಿ ಇರುತ್ತದೆ
ಎಲ್ಲಿ ಪ್ರಾಮಾಣಿಕ ಕೆಲಸಗಳಿರುತ್ತವೆಯೋ
ಅಲ್ಲಿ ಭ್ರಷ್ಟಾಚಾರ ಸಮಾಪ್ತಿಯಾಗುತ್ತದೆ
ಎಲ್ಲಿ ಜ್ಞಾನದ ಅರಿವು ಇರುತ್ತದೋ
ಅಲ್ಲಿ ಸಮಗ್ರತೆಯ ಬೆಳಕು ಇರುತ್ತದೆ
-
ನಿರಾಸೆಯೇ ಆಸರೆಯಾದಾಗ
ಆಸೆಯ ಕನಸೇತಕೆ..?
ಬಯಕೆಯೇ ಭಾರವೆನಿಸಿದಾಗ
ಬದುಕಲಿ ಸಾಗುವುದೇಗೆ...?-
ನಗು ಮೊಗವು ಹೊಸ ಚೇತನವ ಹೊತ್ತು
ಉದಯಿಸುವ ಸೂರ್ಯನಂತೆ ದಿನವು ನೀನಿರೆ,
ಕಣ್ಣಕಾಂತಿಯು ಸೂರ್ಯರಾಶಿಯ ಹೊತ್ತು
ಮಾತು ಮಧುರ ಪ್ರೀತಿ ಸಾಗರ ನೀ ಹರಿಸಿರೆ,
ನವ ಜೀವನ ಬೆಳಗಲಿ ನಿನ್ನೆಡೆ ಹೊಸತು
ಹೂ ಅರಳಿದ ಚೆಲುವು ನೀ ನಗುತ್ತಿದ್ದರೆ
-
ಇಂದು ಮುಂಜಾನೆಯ ಅದ್ಬುತದ ಕ್ಷಣ
ಚಿಟ್ಟೆಯಂತೆ ಹಾರಾಡುವ ನನ್ನ ಮಗಳ ಹುಟ್ಟಿದ ದಿನ
ಮೇಘವೇ ಹೊತ್ತು ತಂದಿತ್ತು ತಂಗಾಳಿಯ ತಂಪನ್ನ
ಅದೇನೊ ಆಗಸದಿ ಸಡಗರದ ಹೊಂಬಣ್ಣ
ಗಗನದ ರಂಗೋಲಿಯಲ್ಲಿತ್ತು ರಂಗುರಂಗಿನ ಬಣ್ಣ
ನಮ್ಮನೆಕಡೆ ಹಕ್ಕಿಗಳ ಸಾಲು ಸಾಲಿನ ದಿಬ್ಬಣ
ಪ್ರಕೃತಿಯೇ ಹಾರೈಸಿದೆ ಇಂದು, ಮಾನ್ವಿತ... ನಿನ್ನ ಜನ್ಮದಿನ...-
ನಿನ್ನ ಮೊಗದಲ್ಲಿ ಮೂಡಿರುವ ಮುಗುಳು ನಗೆಗೆ
ಕಾರಣವೆನ್ನಲೇ ನಿನ್ನೊಳಗಿನ ಮನದಾನಂದ
ಮನದ ಆರೋಗ್ಯದ ಮಿತ ಔಷದಿಗೆ
ವರವಾಗಿದೆ ಎನ್ನಲೆ ಹಿತವಾದ ಸ್ನೆೇಹಾನಂದ
ಯಾರಿರಲಿ ಇಲ್ಲದಿರಲಿ ಜೊತೆಗೆ
ಸವಿ ಕ್ಷಣಗಳ ನೆನಪಿದ್ದರೆದೇ ಪರಮಾನಂದ
ದೂರದಿರು ದೂಷಿಸದಿರು ಕೊರಗದಿರು ಮರುಗದಿರು
ಸಂತಸದ ಗಳಿಗೆಯ ನೆನೆದು ಆನಂದವಾಗಿರು..
ಒಂಟಿಯಾನವಿದು..ಬರುವರು ಹೋಗುಲೇಬೇಕು
ಹೋದವರು ನೆನಪಾಗಿ ಮನದಿ ಉಳಿಯಬೇಕು
ಪ್ರತಿ ಯಾನಕ್ಕೂ ನಿಲ್ದಾಣವಿಹುದು
ಅರಿತು ಮುನ್ನುಗ್ಗು ಆನಂದ ನಿನ್ನೊಳಗೆ ಇಹುದು...-