ಜನರ ದೃಷ್ಟಿಯಲ್ಲಿ ನಾಯಕನೆನಿಸಿಕೊಳ್ಳಬೇಕೆಂಬ
ನಿನ್ನ ಆಸೆಯಲ್ಲಿ ತಪ್ಪಿಲ್ಲ, ಆದರೆ ಅದಕಾಗಿ ಮತ್ಯಾರನ್ನೋ ಖಳನಾಯಕನನ್ನಾಗಿ ಬಿಂಬಿಸಲು ಹೊರಟ ನಿನ್ನ ಈ ನಡೆ ಸರಿಯಲ್ಲ.-
ಒಳ್ಖೆಯತನ ಎನ್ನುವುದು
ಹೇಡಿಗಳು ಧರಿಸುವ
ಮುಖವಾಡವಾಗಬಾರದು.
ಒಳ್ಳೆಯತನದ ಹೆಸರಿನಲ್ಲಿ
ನಿರಂತರವಾಗಿ ನಮ್ಮ ಮೇಲಾಗುತ್ತಿರುವ
ದೌರ್ಜನ್ಯವನ್ನು ಸಹಿಸಿಕೊಳ್ಳುತ್ತೇವೆ ಎಂದರೆ ಅದು ನಿಜಕ್ಕೂ ಗುಲಾಮಗಿರಿಯೇ ಹೌದು.-
ಸತ್ಯ ಮೌನ ತಾಳಿದಂತೆಲ್ಲ
ಸುಳ್ಳು ವಿಜೃಂಭಿಸಲಾರಂಭಿಸುತ್ತದೆ,
ಧರ್ಮ ಮೂಲೆ ಸೇರಿದಂತೆಲ್ಲ
ಅಧರ್ಮ ಮೆರೆಯಲಾರಂಭಿಸುತ್ತದೆ.-
ನೆರೆಮನೆ ಮಗಳು
ಮನೆಗೆ ಬರಲಿಲ್ಲವೆಂದು
ಕೊರಗುವೆ ಏಕೆ ಮನವೇ?
ಅವಳು ನಿನ್ನ
ಮನೆಮಗಳಲ್ಲವೆಂಬ
ಅರಿವಿಲ್ಲವದಕೆ.-
ಸ್ವಾತಂತ್ರ್ಯವೆಂದರೆ...
ಸರಿ ಎನಿಸಿದ್ದನ್ನು ಮಾಡುವುದಲ್ಲ,
ಸರಿಯಾಗಿರುವುದನ್ನು ಮಾಡುವುದು.-
ಓ ಕಂದ..
ಅನವಶ್ಯಕವಾಗಿ
ಸಣ್ಣ ಪುಟ್ಟ ವಿಷಯಗಳಿಗೆಲ್ಲ
ಸುಳ್ಳು ಹೇಳುವವರು,
ಅವಶ್ಯವಾಗಿ
ಸ್ವಂತ ವಿಷಯಗಳನ್ನು
ಹಂಚಿಕೊಳ್ಳಲು ಯೋಗ್ಯರಲ್ಲದವರು.
-
ಜೀವನದಲ್ಲಿ...
ಎಲ್ಲರೂ ಮರುಳಾಗುವಂತೆ
ನಟಿಸುವುದು ಒಂದು ಕಲೆಯಾದರೆ,
ಆ ನಾಟಕವನ್ನು ನೋಡಿ ಮರುಳಾಗದೆ,
ಕೇವಲ ನಲಿದು ಸಂಭ್ರಮಿಸಿ ಅದನ್ನು ಅಲ್ಲಿಯೇ
ಬಿಟ್ಟು ಮುನ್ನಡೆಯುವುದು ಜೀವನದಲ್ಲಿ
ಕಲಿಯಬೇಕಾದ ಬಹುದೊಡ್ಡ ಕಲೆ.
-
ತಲೆಬಾಗುವುದರಲ್ಲಿ ತಪ್ಪಿಲ್ಲ.
ಆದರೆ ಎಲ್ಲಿ,ಯಾರಿಗೆ,ಯಾವಾಗ,
ಎಷ್ಟು ತಲೆಬಾಗಬೇಕು ಎಂಬ ಅರಿವಿಲ್ಲದೆ
ಬಾಗುವುದು ಸರಿಯಲ್ಲ.-
ಅರ್ಹತೆಗೂ ಮೀರಿ ಸಿಕ್ಕಿದ್ದೆಲ್ಲವೂ ಅದೃಷ್ಟ,
ಅರ್ಹತೆ ಇದ್ದೂ ಸಿಗದಿದ್ದರದುವೇ ದುರಾದೃಷ್ಟ.-