ಮನಸಾಕ್ಷಿಯುಳ್ಳವರು..
(ಲಿಂಗತಾರತಮ್ಯವಿಲ್ಲದೆ...!)-
ಅವಳು ಪತಿವ್ರತೆ
ಆದರೆ ಏನು ಮಾಡೋದು
ಅವನ ಕಲ್ಪನೆಯಲ್ಲಿ
ಅವಳು ಪತಿವ್ರತೆ ಅಲ್ಲ.-
ಅವರು ಪತ್ನಿವ್ರತರಿಗೆ
ಮಾತ್ರ ದೊರೆಯುವರು
ಎಂದನಾ ನನ್ನ ಮನದಾಳದ ಮೌನಜ್ಞ .
😊😊😊😊😊-
ಅಮೃತಕ್ಕೆ ತಾಯಿಯಾಗಿ
ಸಮಸ್ಯೆಗೆ ಗೆಳತಿ ಯಾಗಿ
ಅನಾರೋಗ್ಯ ದಲ್ಲಿ ಮಗುವಂತೆ
ಸರ್ವಸ್ವವೂ ಮಡದಿಯಾಗಿರುವಳೆ
ಪತಿ ವ್ರತೆ....
ಆರ್,ಎಚ್,ಭಾರತಿಚಂದಿರ....-
ತನು ಮನ ಧನಗಳನ್ನು
ಒಬ್ಬ ಮಹಾಶಯನಿಗೆ
ಒಪ್ಪಿಸಿ ಅದರಂತೆ
ನಡೆಯುವವಳೇ
ನಿಜವಾದ ಪತಿವ್ರತೆ-
ಪಾಂಚಾಲಿ
----------------
ಪಾಂಚಾಲದ ಅರಸನ ಮಗಳಿವಳು
ಪಾಂಡವರ ಹೆಮ್ಮೆಯ ಸತಿಯಿವಳು
ಕಷ್ಟ ಅನುಭವಿಸಿದರೂ ಕುಗ್ಗದವಳು
ಪಾಂಚಾಲಿ ಪತಿವ್ರತೆಗೆ ಹೆಸರಾದಳು.-
ಪತಿತೆ ಎನ್ನುವಿರಲ್ಲ ನನ್ನ ನಾನು ಯಾವ ಪತಿವ್ರತೆಗೂ ಕಡಿಮೆ ಏನಿಲ್ಲ
ನೀ ಪ್ರತಿ ರಾತ್ರಿ ನಿನ್ನ ಪತಿಯ ತೋಳಲಿರುವೆ
ಆ ತೋಳು ಸಲಹುದು ನಿನ್ನ ಸಂಸಾರವನ್ನ
ನಾ ಪರರ ತೋಳಲಿರುವೆ ನಾನೇ ನಡೆಸಲು ನನ್ನ ಸಂಸಾರ ನೌಕೆಯನ್ನ
ನೀ ತಾಯಿಯಾಗುವೇ ನಿ ಹೆತ್ತ ಮಕ್ಕಳಿಗೆ
ನಾ ತಾಯಿಯಾಗಿರುವೆ ನನ್ನ ಹೆತ್ತವರಿಗೆ
ನನ್ನ ಬೆನ್ನ ಬಿದ್ದವರಿಗೆ
ನನಗು ನಿಮ್ನ ಹಾಗೆ ಪತಿವ್ರತೆಯಾಗಿ ಬಾಳುವಾಸೆ
ನಾ ಬಯಸಿ ಬರಲಿಲ್ಲ ಈ ಪಾಪ ಕೂಪಕೆ
ಏನು ಮಾಡಲಿ ನನ್ನವರ ತುತ್ತು ಅನ್ನಕ್ಕೆ.......-