** ಅವಳಿಗೊಂದಿಷ್ಟು ಸಾಲುಗಳು **
ಸ್ವಲ್ಪ ಸನಿಹವಾದರೂ ನೀವು ಇರಬೇಕಿತ್ತು ಗೆಳತಿ
ನಿಮ್ಮ ಗಾಳಿ ಶೋಕಿಸಿಕೊಂಡಾದರೂ
ನಾನು ನಲಿದಾಡುತ್ತಿದ್ದೆ
ನಿಮ್ಮ ಒಲವು ಎಂದೂ ಸಿಗದ ವಜ್ರವದು ನನಗೆ
ನಿಮ್ಮ ನಗು ಎಂದೂ ಬಾಡದ ಹೂ
ನನ್ನ ಮನದಂಗಳದಲ್ಲಿ
ಆಕಾಶದಲ್ಲಿರುವ ಚಂದ್ರನ ಬೆಳಕು
ಭೂಮಿಮೇಲೆ ಹೇಗೊ
ದೂರದಲ್ಲಿರುವ ನಿಮ್ಮ ನೆನಪು
ನನ್ನ ಮನದಲ್ಲಿ ಸದಾ ಹಾಗೆ
ನಿಮ್ಮ ಒಂದು ಧ್ವನಿ ಕೇಳಲು ನನ್ನ ಪ್ರತಿ ಕ್ಷಣಗಳು
ನಿಮಗಾಗಿ ಕಾಯ್ದಿರಿಸುವೆ
ಸಮುದ್ರ ಬತ್ತಿಹೋದ ಇತಿಹಾಸ ಇದೆ ಗೆಳತಿ
ಆದ್ರೆ ಈ ಶಿವ
ನಿಮ್ಮನ್ನು ಮರೆಯುವ ಇತಿಹಾಸವನ್ನ
ಕನಸಲ್ಲಿಯೂ ಯೋಚಿಸಲೇಬೇಡಿ ನೀವು.
👋-
ಅವಳ ವಿರಹ, ಈ ಕವಿಯ ಬರಹ ಅಷ್ಟೇ.
ಸಮುದ್ರದ ದಡ ಎಷ್ಟು ಸುಂದರವೋ
ಅದರ ಆಳ ಅಷ್ಟೇ ಭಯಂಕರ,
ಪ್ರೀತಿಯ ಕಲ್ಪನೆ ಎಷ್ಟು ಸುಂದರವೋ
ಅದರ ಅನುಭವವೂ ಅಷ್ಟೇ ಭಯಂಕರ.-
ನಿನ್ನ ನಾ ನೆನೆದರೆ ಸಾಕು
ಕಾಗದದ ಹೊಟ್ಟೆ ತುಂಬುವುದು
ನೀ ಎದುರಿಗೆ ಬಂದರೆ ಸಾಕು
ಕಣ್ಣುಗಳ ದಾಹ ತೀರುವುದು.-
ಮುರಿದ ಎಷ್ಟೋ ಸ್ನೇಹಗಳು
ಬಾರಲ್ಲಿ ಒಂದಾಗಿದ್ದಾವೆ,
ಒಂದಾಗಿದ್ದ ಎಷ್ಟೋ ಸ್ನೇಹಗಳು
ಬಾರಲ್ಲಿ ಮುರಿದುಬಿದ್ದಿವೆ.
*** ನೆನಪಿರಲಿ ***
ಮುರಿದು ಬಿದ್ದಿರುವ ಸ್ನೇಹಕ್ಕಿಂತ
ಒಂದಾಗಿರುವ ಸ್ನೇಹಗಳೆ ಜಾಸ್ತಿ.-
ಗೆಳತೀ
ನನ್ನ ಜೀವನದಲ್ಲಿ ನಿನಗಿಂತ ಕತ್ತಲು ನೀಡಲು
ಆ ಅಮಾವಾಸ್ಯೆ ಚಂದ್ರನಿಂದಲು ಸಾಧ್ಯವಿಲ್ಲ ನೋಡು.-
ಸೂರ್ಯನನ್ನೇ ಗೆಲ್ಲುವ ತೇಜಸ್ಸಿನವನು
ನನ್ನೀ ಹೃದಯದ ಚಂದಾದಾರನವನು
ಸದಾ ನಗುವ ಹೊತ್ತ ಮುಖದವನು
ನನ್ನೀ ಹಣೆಗೆ ಸಿಂಧೂರ ಅವನು
ಹೇಗೆ ವರ್ಣಿಸಲಿ ಇವನಂದವ
ಒಟ್ಟಾರೆ ಕ್ಷಣವೂ ಬಿಡದೆ ಕಾಡುವ
ಚಿಗುರು ಮೀಸೆಯ ದೊರೆ ನನ್ನವ.-
ಗೆಳತೀ
ಕೈಗೆತ್ತಿಕೊಂಡ ಲೇಖನಿಗೆ ಯಾವುದೇ ವಿಷಯ ಸಿಗುತ್ತಿಲ್ಲ,
ನಿನ್ನನ್ನು ಹೊರತು ಪಡಿಸಿ.-
ಅವಳಿಗಾಗಿ ನಾ ಬರೆದ ಪ್ರೇಮ ಪತ್ರಗಳ ಮುಂದೆ
ಅವಳ ಲಗ್ನ ಪತ್ರಿಕೆಗಳ ಸಂಖ್ಯೆ ಕಡಿಮೆ ಬಿತ್ತೋ ಏನೋ
ಅವಳ ಲಗ್ನ ಪತ್ರಿಕೆ ನನ್ನ ಕೈಯಿಗೆ ಸೇರಲೇ ಇಲ್ಲ.-
ಬೆಳಕು ಮುಳುಗುತ್ತಿದೆ
ನಿನ್ನ ನೆನಪುಗಳೊಂದಿಗೆ
ಕತ್ತಲು ಕವಿಯುತ್ತಿದೆ
ನಿನ್ನ ಕನಸುಗಳೊಂದಿಗೆ
ಅಲ್ಪ ಸ್ವಲ್ಪ ಬದುಕಿರುವೆ
ನಿನ್ನ ಕಲ್ಪನೆಗಳೊಂದಿಗೆ.-