ಅನುಭವಗಳೇ ನಿಜವಾದ ಪಾಠ....
ಆರ್,ಹೆಚ್,ಭಾರತಿಚಂದಿರ....-
""ಜೀವನ""
ನಮ್ಮ ದಡ್ಡತನವೇ
ನಮಗೆ ದುಷ್ಟ ಮಾರ್ಗ..
ನಮ್ಮ ಜಾಣತನವೇ
ನಮಗೆ ಸುಗಮ ಮಾರ್ಗ....
ಆರ್,ಹೆಚ್,ಭಾರತಿಚಂದಿರ....-
#ಪ್ರಪಂಚ #
ಒಳ್ಳೆಯವರಿಗೆ ಒಳ್ಳೆಯವರಾಗಿ ,
ಕೆಟ್ಟವರಿಗೆ ಕೆಟ್ಟವರಾಗಿ ,
ಇಲ್ಲಾಂದರೆ ನಿಮ್ಮ ಒಳ್ಳೆಯ
ಸ್ವಭಾವ ದುರುಪಯೋಗ
ಮಾಡಿಕೊಳ್ಳುವರು....
ಆರ್,ಹೆಚ್,ಭಾರತಿಚಂದಿರ....
-
# # ಸ್ನೇಹ # #
ನೆನಪುಗಳು ಹಳೆದಾದರೇನು
ಸ್ನೇಹ ಸಂಬಂಧ ಹೊಸದು..
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು
ಅರೆ ಕ್ಷಣ ಕೂಡಿದ್ದು ,ಸ್ನೇಹದ ಸೇತುವೆ ಹೊಸದು....
ಮನಸ್ಸಿನ ಭಾವ ಅರಿತು ನೋವು ಹಳೆದಾದರೇನು
ಹಚ್ಚ ಹಸಿರಿನ ನಲಿವು ಹೊಸದು..
ಒಂದು ಕ್ಷಣ ದೂರವಾದರೇನು
ಹರಿಯುವ ನೀರಿನ ಹಾಗೆಯೇ
ಶುದ್ಧ ಸ್ನೇಹ ನಮ್ಮದು....
ವಯಸ್ಸಿನ ಮಿತಿ ಆದರೇನು
ಸ್ನೇಹ ಕ್ಕೆ ಮಿತಿ ಉಂಟೆ ..
ಭೇದ ಭಾವ ಇಲ್ಲದ ಸ್ನೇಹ
ಸ್ನೇಹ ಬಾಂಧವ್ಯ ಶಾಶ್ವತ....
ಆರ್,ಹೆಚ್,ಭಾರತಿಚಂದಿರ...-
ನಿನ್ನ ಸಿಟ್ಟು ಅನ್ನದ ಮೇಲೆ ತೋರಿಸುವ ಬದಲು ,
ಸಾಧನೆ ಮೇಲೆ ತೋರಿಸು....
ಆರ್,ಹೆಚ್,ಭಾರತಿಚಂದಿರ....-
ಕನಸು ಕಾಣುವುದು ದೊಡ್ಡದು ಅಲ್ಲ,
ಕನಸು ನನಸಾಗುವುದು ದೊಡ್ಡದು..
ಕನಸು ಕಾಣಲು ಅಲ್ಪ ಕಾಲ,
ನನಸಾಗಲು ದೀರ್ಘಕಾಲ...
ಕನಸಿನ ಬೆಲೆ ಕ್ಷಣಿಕ,
ಸಾಧಿಸಿದ ಮೇಲೆ ಶಾಶ್ವತ....
ಆರ್,ಹೆಚ್,ಭಾರತಿಚಂದಿರ....-
ನಾವು ನಾವಾಗೆ ಇರಬೇಕು,
ಹೊರತು ಬೇರೆಯವರು ಆಗಲು
ಖಂಡಿತಾ ಸಾಧ್ಯವಿಲ್ಲ....
ಆರ್,ಹೆಚ್,ಭಾರತಿಚಂದಿರ....-
ನಾವು ಎಷ್ಟೇ ಒಳ್ಳೆಯದು ಬಯಸಿದರು ,
ಅವರಿಗೆ ಕೆಟ್ಟದ್ದು ಆಗುತ್ತದೆ..
ನಾವು ಎಷ್ಟೇ ಕೆಟ್ಟದ್ದು ಬಯಸಿದರು,
ಅವರಿಗೆ ಒಳ್ಳೆಯದು ಆಗುತ್ತದೆ....
ಆರ್,ಹೆಚ್,ಭಾರತಿಚಂದಿರ....
-
ಸತ್ಯ ಹೇಳಲು ಶುರು ಮಾಡಿದರೆ ಸಾಕು,
ಮಿತ್ರರು ಸಹ ಶತ್ರುಗಳು ಆಗುತ್ತಾರೆ....
ಆರ್,ಹೆಚ್,ಭಾರತಿಚಂದಿರ....-
ನಮ್ಮ ನಾಡು ಕನ್ನಡ ನಾಡು
ವರ್ಣಿಸಲು ಪದಗಳು ಸಾಲದು
ನೋಡಲು ಆಕರ್ಷಣೆ
ಕಿವಿಯಾಕಾರದ ಚಿತ್ರಪಟ....
ಕನ್ನಡ ಸಂಸ್ಕೃತಿಯ ಬೀಡು
ಸಂಸ್ಕಾರದ ಮೂಲ ಗೂಡು
ಕಲಿಯಲು ಸುಲಭ ಕನ್ನಡ
ಭಾವಕ್ಕೆ ಅರ್ಥ ನಮ್ಮ ಕನ್ನಡ....
ನೂರು ಭಾಷೆ ಕಲಿತರು
ನಮ್ಮ ಕನ್ನಡ ಭಾಷೆ ಶ್ರೇಷ್ಠ
ಭುವನೇಶ್ವರಿ ತಾಯಿಯೇ ಉಸಿರು
ಪ್ರತಿ ಕಣದಲ್ಲೂ ಕನ್ನಡ ಕನ್ನಡ ಕನ್ನಡ....
ಆರ್,ಹೆಚ್,ಭಾರತಿಚಂದಿರ.....
-