ಮುಸ್ಸಂಜೆಯ ಮಸುಕಿನಲೊಂದು
ಮುದ್ದಾದ ಮುಗುಳು ನಗೆ
ಮನ್ಮತನೆ ಮಣಿಯುವ
ಶಿಲ್ಪಿಯೆ ಸ್ತಬ್ದವಾಗುವ ಮೈಮಾಟ
ಅಂದದಲಿ ಅಡಗಿಹ ನಲ್ಲೆ
ನೀನಿರುವುದೆಲ್ಲೆ-
ಮನವೇಕೊ ಮೌನಿಯಾಗಿದೆ ಇಂದು
ಮೌನಕೂ ಮಾತು ಬರದಷ್ಟು
ಮಾತಿಲ್ಲದೆ ಮನೆಯೊಳಗೆ ಮನದೊಳಗೆ
ಮಸುಕಾದ ನಸುಕಿನಲು
ಮನವು ಮನಸೊಲುವಷ್ಟು-
ನೆನಪಾಗಿ ಉಳಿದಿಹೆ
ನಲ್ಲನಾಗಿ ಬಂದು
ನೆಪಕೂಡ ಹೇಳದೆ
ನನ್ನ ತೊರೆದೆ ಅಂದು
ನೆರಳಾಗಿರುವೆ ಎಂದೆ
ನಿನ್ನ ನೆರಳೇ ಕಾಣೇಯಾಗಿದೆ
ನೆನಪಾಗೇ ಉಳಿವೆ ಮನದಿ
ನೆಪಮಾತ್ರವಲ್ಲ ನನ್ನೊಲವೆ
ನೀ ಅಡಗಿರುವೆ ನನ್ನೊಳಗೆ
ನೀ ಎಂದೆಂದೂ
ನನ್ನ ಉಸಿರಾಗಿರುವೆಯಲ್ಲ
ನಿನ್ನ ಮರೆತ ಕ್ಷಣ
ನಿನ್ನವಳು ಉಳಿವಳೇ ನಲ್ಲ..-
ಕತ್ತಲೊಳು
ಕಮರಿತೊಂದು ಹೂ
ಬೆತ್ತಲಾಗುವ ಮುನ್ನ..,
ಬೆಳಗಾಗುವ ವೇಳೆಗೆ
ಅರಿತಿತ್ತು.,
ಎಸೆದದ್ದು ಕಸದ ಬುಟ್ಟಿಯಲಿ..!
ತಾ ಅರಳುವಾ ಮುನ್ನ..-
ದೂರದಲ್ಲೆೊಂದು ಧ್ವನಿ ನನ್ನಿನಿಯನದೇ..,
ಕಂಡೂ ಕಾಣದಂತಾಗಿದೆ..
ಮಿಂಚಿ ಮರೆಯಾಗುತಿದೆ..
ಮರೀಚಿಕೆಯ ಹಾಗೆ...-
ಬರಿದಾದ ಬಾಳಲ್ಲಿ ಬೆಳಕಾದೆ ನೀ ಅಂದು..
ಬೆಳಕಿನ ಹಬ್ಬವು ಕೂಡ ಸರಿಸದಾಗಿದೆ ಮನದ ಅಂದಕಾರವನಿಂದು...
ಬಾಳ ಜೋತಿಯನ್ನೇ ಆರಿಸಿದ ಆ ಭಗವಂತನಿಗೆ
ಜೋಡಿ ದೀಪ ಹಚ್ಚಬೇಕಿದೆ ಇಂದು...
ನನ್ನ ಬದುಕ ಗಾಡಾಂಧಾಕಾರಕೆ ತಳ್ಳಿದ ನಿನಗೆ ಅಂದದಿ ಅಲಂಕರಿಸಬೇಕಿದೆ ನಾನಿಂದು...
ನಿನ್ನ ಲೀಲೆಯ ಅರಿಯಲಾರೆನು ಮಾಧವ ನಾ ಎಂದೂ ಎಂದೆಂದೂ...-
ಬಂದು ಹೋಗುವ... ಬಂದುವಲ್ಲಾ... ಗೆಳೆಯ...ಈ ಪ್ರೇಮ...!!
ಈ... ಬದುಕ ಪಯಣಕೆ... ನೀ ಜೊತೆಯಾಗುವೆ... ಎಂದು ನಂಬಿ ಕೈ ಹಿಡಿದೆ...!!
ಆದರೆ...?
ನೀ.. ಈ... ಪಯಣಕ್ಕೆ ಹೆದರಿ... ಮಧ್ಯದಲ್ಲೇ ಕೈ ಬಿಟ್ಟು ಹೋದೆ...
ಹಾಗೆಂದು ನಿನ್ನ ದ್ವೇಷಿಸಲಾರೆ...!!
ಈಗಲೂ... ಈ... ಹೃದಯ ನಿನ್ನನ್ನೇ ಪ್ರೀತಿಸುತ್ತಿದೆ... ಒಲವೆ...!!..!
ಹಣೆಬರಹದಲ್ಲಿ ಕೆಲವು ಸಂಬಂಧಗಳು ಅರ್ಧವೇ ಬರೆದಿದ್ದರೂ
ಅದರ ನೆನಪುಗಳು ತುಂಬಾನೇ ಸುಂದರವಾಗಿ ಇರುತ್ತೆ ಅಲ್ಲವೇ....-
ಕಣ್ಣಂಚಿನ ಕಾಮನೆಗಳು ನೂರು
ಮನದೊಳಗಿನ ಭಾವನೆಗಳು ನೂರು
ಎಲ್ಲವನು ಒಂದಾಗಿಸಿದ ನವಿರು ನೀನು
ಸಪ್ತ ಸ್ವರಗಳು ನೀನು
ಸಪ್ತ ಸಾಗರಗಳ ದಾಟಿದ ಸಾಗರಿಯು ನೀನು
ಮನದ ಸನಿಹದಲೆೇ ಸಾಗುತಿಹ ಸೌಂದರ್ಯ ಲಹರಿಯು ನೀನು
ಕನಸಿನ ಕಣ್ಮಣಿಯು ನೀನು
ಕನಸಲೂ ಕನವರಿಕೆ ತರಿಸುವ ಕುಸುಮ ಕೋಮಲೆಯು ನೀನು-
ಕನಸೆಂಬ
ಕತ್ತಲೆಯ
ಕಾನನದಿ
ಕಳೆದುಹೆೊಗಿಹ ನಿನ್ನ
ಕನವರಿಕೆಯಲೇ
ಕಾಯುತಿಹುದು
ಕಣ್ಣೀರ ಹನಿಯೊಂದು
ಕರಗಬಾರದೇ ನಿನ್ನ ಮನ
ಕಂಗೊಳಿಸಬಾರದೇ ಜೀವನ
ಕಣ್ಣ ರೆಪ್ಪೆ ತೆರೆಯುವ ಮುನ್ನ..,-