ಕುಮಾರ ಕನ್ನಡಿಗ  
595 Followers · 303 Following

read more
Joined 29 January 2020


read more
Joined 29 January 2020

ಹೃದಯದ ಪವಿತ್ರ ಕನ್ನಡಿಯಲ್ಲಿ,
ನೀನು ಪ್ರೀತಿಯ ಪ್ರತಿಬಿಂಬ ಹಂಚಿಕೊಂಡೆ;
ಹೀಗಾಗಿ ಹೃದಯ ನಿನ್ನ ಹಚ್ಚಿಕೊಂಡಿತು.
ಆದರೆ ಹೃದಯ ಚೂರಾಗುವಷ್ಟು ಪ್ರೀತಿ ಇತ್ತು..!

-



ವಿಧವೆಗೆ ಹೂವು,ಕಾಲುಂಗಾರ ತೊಡಸಿ
ಮುತ್ತೈದೆಯಾಗಿ ಕಣ್ತುಂಬ ನೋಡಲು ಬಯಸಿದೆ.

ಆದರೆ ಅವಳು ಮತ್ತೊಬ್ಬನಿಗೆ; ಸೆರಗು ಹಾಸಿ,
ನಾನು ಸೂಳೆ ಎಂದು ಸಾಬೀತುಪಡಿಸಿದಳು....!

-



ಬಡವರಾಗಿದ್ದರೆ ಗಮನ ಕೊಡುವುದಿಲ್ಲ
ಕಷ್ಟಪಟ್ಟು ದುಡಿದರೆ ಎಲ್ಲರು ನೋಡಿ ನಗುತ್ತಾರೆ,

ಯಶಸ್ವಿಯಾಗಿ ಬೆಳದರೆ ಸಂಕಟ ಪಡುತ್ತಾರೆ
ಇದು ಹೀಗಿನ ಕಲಿಯುಗದ ಕಾಲ..!

-



ನೀ ಪವರ್ ಪುಲ್ ಆಗಿ ಅದಿ
ಇದು ಬಾಳ್ ಒಳ್ಳೆ ಮಾತ್ ಐತಿ ನೋಡ್,
ಅದ ನಾ ಪುಲ್ ವಿಕ್ ಅದಿನಿ ಅಂದ್ರ,
ಅದು ಬಾಳ್ ಕೆಟ್ಟ ಮಾತ್ ಐತಿ ನೋಡ್...!

-



ಗಾಂಜಾ, ಡ್ರಗ್ಸ್ ಸರಬರಾಜು ನಿಲ್ಲಿಸಿ,
ನಿಷೇಧ ಮಾಡುವ ಕಾನೂನು ತರಬೇಕು ಸರ್ಕಾರ

ಇಲ್ಲವೆಂದರೇ ಬೆಳೆದು ಬಾಳುವ ಯುವಕರು
ಅತ್ಯಾಚಾರಿಗಳು, ಕೊಲೆಗಾರರು ಬದಲಾಗುತ್ತಾರೆ.!

-



ಪ್ರೀತಿ ಕಡೆಗೆ ಆಮೇಲೆ ಗಮನ ಕೊಡಿ
ಪ್ರಗತಿ ಕಡೆಗೆ ಹೀಗಲೇ ಗಮನ ಹರಿಸಲು ಪ್ರಾರಂಭಿಸಿ,

ಇಷ್ಟದ ಹಿಂದೆ ಹೋಗಿ ಹುಚ್ಚಾಗುವ ಮುನ್ನ
ನಿನ್ನಿಷ್ಟದಂತಹ ಬದುಕು ಮೊದಲು ಬಲಿಷ್ಠ ಪಡಿಸಿಕೊ.!

-



ಯಾರಿಗೂ ಆದ್ಯತೆ ಅವಶ್ಯಕತೆಗೆ
ಬಳಕೆಯಾಗುವ ರೀತಿ ಬದುಕಬೇಡ.

ಬೇಕೇ ಬೇಕು ಎನ್ನುವ ಅನಿವಾರ್ಯತೆ
ಇರುವವರ ಜೊತೆ ಬದುಕು ಇರಲಿ.!

-



ಉತ್ತಮ ಗುಣಗಳು
ಮನಸ್ಸುಗಳನ್ನ ಒಗ್ಗೂಡಿಸುತ್ತದೆ!

ಅತ್ಯುತ್ತಮ ಸಂಬಂಧಗಳು
ಹೃದಯಗಳನ್ನ ಪ್ರಬಲಗೊಳಿಸುತ್ತದೆ.!

-



ಮೋಸ ಯಾವ ರೀತಿ ಮಾಡಬೇಕೆಂದು
ಅವಳು ನನಗೆ ಚನ್ನಾಗಿ ಅರ್ಥ ಮಾಡಿಸಿದಳು.

ಅದನ್ನ ಅನುಭವಿಸಿದ ನನ್ನ ಮನಸ್ಸು
ಯಾರಿಗೂ ಮೋಸ ಮಾಡಬಾರದೆಂದು ಅರಿತೆ.!

-



ಋಣವಿಲ್ಲದ ಕೆಟ್ಟ ಸಂಬಂಧಗಳ
ಹಿಂದೆ ಹೋದರೆ ತೃಣಕ್ಕೆ ಸಮಾನವಾಗುತ್ತದೆ.

ಆ ಸಂಬಂಧಗಳನ್ನು ಮನಸ್ಸಿಂದ ಕಳೆದು;
ಋಣವಿರುವ ಸಂಬಂಧಗಳಿಗೆ ಕೂಡಬೇಕು..!

-


Fetching ಕುಮಾರ ಕನ್ನಡಿಗ Quotes