QUOTES ON #ದುಃಖ

#ದುಃಖ quotes

Trending | Latest
29 DEC 2021 AT 9:54

ಜೀವನದ ಮೌಲ್ಯಗಳನ್ನ ತಿಳಿಸೋದಕ್ಕೆ
ಆಗಾಗ ಭಗವಂತ ಕೆಲವೊಂದು
ವ್ಯಕ್ತಿಗಳನ್ನ ನಮ್ಮ ಜೀವನದಲ್ಲಿ ಪರಿಚಯಿಸ್ತಾನೆ.
ಹೀಗೆ ಬಂದಂತ ವ್ಯಕ್ತಿಗಳು ಪ್ರೀತಿ ಸ್ನೇಹ
ಎನ್ನುವ ಬಂಧಗಳನ್ನ ಕೊಟ್ಟು ದೂರ ಆದಾಗ
ಅವರಿಗಾಗಿ ದುಕ್ಕಿಸಬೇಡಿ,ಅಳಬೇಡಿ ಯಾಕಂದ್ರೆ
ಅಲ್ಲಿಗೆ ಅವರ ಪಾತ್ರ ನಮ್ಮ ಜೀವನದಲ್ಲಿ
ಮುಗಿದಿರುತ್ತೆ...

-


24 FEB 2021 AT 22:20

ಇಷ್ಟು ದಿನ ನಾ ಬರೀ ತಪ್ಪಾಗೆ ತಿಳ್ಕೋಂಡಿದ್ದೇ, ಅದೇನು ಗೊತ್ತಾ..
ಇವ್ರೇಲ್ರುನು ಬರೀ ನನ್ನ behavior ನ ಇಷ್ಟಪಡ್ತಿರ್ಲಿಲ್ಲ ಅಂತ ನಂಗೆ ಗೊತ್ತಿತ್ತು..
ಆದ್ರೆ ಇವಾಗ ತಿಳಿತು ಪಾಪ,
ಇವ್ರಿಗೆ ನಾನ್ನಂದ್ರೇನೇ ಇಷ್ಟ ಇಲ್ಲ ಅಂತ 😏..

-


8 APR 2021 AT 14:56

ಅವಿತು ಅಳುವಾಗ ಅನಿಸಿತು
ಅಂಗೈಲೇ ಅಡಗಿದೆ ಅನುರೂಪದ ಅಮೃತ!


(Read caption)

-


16 APR 2021 AT 20:53

ನೋವಿನ ಸಾಂದ್ರತೆ ಏನೆಂದು
ದುಃಖಿಸಿ ಅಳುವ ಮೋಡ ಹಾಗೂ
ಹನಿಗಳನು ಇಂಗಿಸಿಕೊಂಡ ಭುವಿಗಷ್ಟೇ ಗೊತ್ತು
ಬಾಕಿ ಎಲ್ಲ ಮಳೆಯನು ಸಂಭ್ರಮಿಸುವವರೇ..!

-


27 APR 2020 AT 22:26

ದುಃಖವನ್ನು ಬಚ್ಚಿಟ್ಟುಕ್ಕೊಳ್ಳುವುದು ಒಳ್ಳೆಯದಲ್ಲಾ
ಕಣ್ಣೊಳಗೆ ಬತ್ತಿಸಿಕೊಂಡ ನೋವುಗಲೆಲ್ಲವು
ಕಣ್ಣೀರ ರೂಪದಲ್ಲಿ ಹೊರಬರುವವರೆಗೂ
ಹಿಂಸೆಯ ಅಗ್ನಿ ಕುಂಡದಲ್ಲಿ
ಮೌನವಾಗಿ ಹಲುಬುವುದಂತು ತಪ್ಪುವುದಿಲ್ಲಾ!!
✍️ಶಿಲ್ಪಾ ಪಾಲ್ಕಿ💞


-


3 SEP 2021 AT 15:41

ಹಸಿಮರದ ಕೊರಡು ಅವನ ಪ್ರೀತಿ.
ಪೂರ್ತಿ ಉರಿಯಲೂ ಇಲ್ಲ. ಉಳಿಯಲೂ ಇಲ್ಲ.
ಹೊಗೆಯಿತ್ತು. ಬೂದಿಯಿಲ್ಲ.

-



ದುಃಖ ಕೊಡುವ ನೋವಿಗಿಂತ
ನಮ್ಮನ್ನು ಬದಲಾಯಿಸುವ
ದುಃಖದ ಹುಡುಕಾಟದಲ್ಲಿರುವೆ ಗಾಲಿಬ್

-



ಕಷ್ಟಗಳೆಲ್ಲ ದೂರವಾಗಲಿ
ದುಗುಡವೆಲ್ಲ ಮರೆಯಾಗಲಿ
ಅನುಮಾನವೆಲ್ಲ ನಾಶವಾಗಲಿ
ನೆಮ್ಮದಿ ಶಾಂತಿಯೇ ನೆಲೆಯಾಗಲಿ.

-



ನಿನ್ನ ನೆನಪುಗಳ
ದಾಳಿಯಿಂದ,
ಕಣ್ಣೀರಿನ ಹನಿಗಳು
ಒಂದೊಂದಾಗಿ
ಕಂಡ ಕನಸುಗಳೊಂದಿಗೆ
ಮಣ್ಣು ಸೇರುತಿವೆ.

-


23 JUL 2022 AT 12:21

ಶೋಕ ಮುಖ
ಮೊಗದಲ್ಲಿ ಕಾಣುತ್ತಿಲ್ಲ ಮಂದಹಾಸದ ಚಹರೆ
ನಯನದಲಿ ದರ್ಶನ ಹರಿವ ನೋವಿನ ತೊರೆ
ಅರಿವು ಮೂಡಿಸುವ ಶೋಕದ ವಚನಶಲಾಕೆ
ಇಷ್ಟೊಂದು ಬೇಸರ ವಯ್ಯಾರದ ಬೆಡಗಿಗೇಕೆ

-