ಬೇಗುದಿಯಲ್ಲಿ ಬೇಯುತ್ತಿದ್ದಾಗ ಬಂದವನಿವನು..
ಮಾತಲ್ಲೇ ಸೆಳೆದು ನೆಮ್ಮದಿಯ ಬಿಗಿದಪ್ಪುವಂತೆ ಮಾಡಿಹನು!
ನಿನ್ನ ಬಿಟ್ಟಿರಲಾರೆನ್ನುವಷ್ಟು ಪ್ರೀತಿಸುವನು...
ಸಾವಿರ ಗೊಂದಲಗಳಿದ್ದರೂ ನಿನ್ನೊಡನೆ ಬಾಳುವೆನು.
ಇನ್ನೆಂದೆಂದಿಗೂ ನೀ ನನ್ನವನು...-
ನನಗೇಕೆ ಈ ಹುಚ್ಚು ತಿಳಿಯೆ...!
ಬೊಗಸೆ ಪ್ರೀತಿಗೆ ಬಿಗಿದಪ್ಪಿ ಅಳುವಾಸೆ...!
ಬೆಟ್ಟದಷ್ಟು ಕೋಪ ಹೆಚ್ಚಿದಾಗ ನಿರಾಸೆ...!
ಗೊಂದಲಗಳ ನಡುವೆಯೂ
ಜೊತೆಯಾಗಿ ಬಾಳುವಾಸೆ....!
ಸನಿಹವ ಬಯಸುತಲೇ ನಿನ್ನ ಮರೆಯುವಾಸೆ....!
-
ಮೋಡದ ಕೂಗಿಗೆ ಆಕಾಶವೇ ಅಳುತ್ತಿತ್ತು,
ಅಳುವಿನಲೂ ಇಳೆಗೆ ಒಳಿತನೇ ಬಯಸಿತ್ತು..
ಇಳೆಯು ಮಳೆಯನು ಸಂತಸದಿ ಸ್ವೀಕರಿಸಿತ್ತು,
ಸಂತಸವ ಸಕಲ ಜೀವಿಗಳೊಡನೆ ಹಂಚಿಕೊಂಡಿತು..-
ಕೀಲಿ ಕೊಟ್ಟ ಗೊಂಬೆಗಳು ನಾವಲ್ಲ, ಅವುಗಳಿಗಿಂತ ಕಡಿಮೆಯೇನೂ ಇಲ್ಲ, ಗಾಳಿ ಬಂದಕಡೆ ತೂರಿಕೊಳ್ಳದೇ ಸ್ಥಿರವಾಗಿರುವುದ ಬಲ್ಲವನೇ ಜೀವನವ ಗೆಲ್ಲಬಲ್ಲ....!
-
ಸಮಾಜದ ಕಟ್ಟುಪಾಡುಗಳಿಗೆ ಪಂಜರದಲ್ಲಿನ ಗಿಳಿಯಂತಾಗಿರುವೆ ನಾ!
ರೆಕ್ಕೆ ಬಿಚ್ಚಿ ಹಾರುವಾ ಆಸೆಯನು ಬದಿಗಿರಿಸಲಿ ಹೇಗೆ ನಾ!?
ಹಾರಿಹೋದ ಹಕ್ಕಿಯ ಬಗೆಗಿನ ಕಟ್ಟುಕಥೆಯ ಸಹಿಸಲೇ!
ಅಥವಾ ಇವರಿಗೂ ಹಾರುವುದ ಕಲಿಸಲೇ!?-
ಚಂಚಲಿತ ಮನವಿಂದು ಸ್ಥಿರವಾಗಿದೆ,
ಬೇಡದ ಯೋಚನೆ ದೂರವಾಗಿದೆ,
ಪ್ರೀತಿಯ ಅರಸುತಿದ್ದ ಮನ ನೆಮ್ಮದಿಯ ಬಿಗಿದಪ್ಪಿದೆ,
ಹೀಗೆ ಎಂದೂ ನೆಮ್ಮದಿಯಿರಲೆಂದು ದೇವರ ಬೇಡಿದೆ.-
ಕೆಳಬಿದ್ದರೂ ಹೊಳೆಯುವುದು ಮಳೆಹನಿ ಸೂರ್ಯ ಕಿರಣಕೆ!
ಆಸರೆಯ ನೀಡಿಹುದಲ್ಲ ಹುಲ್ಲು ಆ ಬಡ ಜೀವಕೆ..!
-
ಜೀವಕ್ಕೆ ಜೀವ ಕೊಡುವ ಜನರ ಜೊತೆ ಜಗಳವಾಡಿ ಜೇನುಗೂಡ ಅಣುಕಿಸುವ ಜಂಭವೇಕೆ ನಿನಗೆ...!?
-