QUOTES ON #ಗುರುವಂದನೆ

#ಗುರುವಂದನೆ quotes

Trending | Latest
5 SEP 2020 AT 7:32

ತೊದಲು ನುಡಿಗಳಿಗೆ ಸ್ಪಷ್ಟತೆ ನೀಡಿ
ಪುಟ್ಟ ಕೈಗಳಲಿ ಬಳಪವ ಹಿಡಿಸಿ
ಸಾಕ್ಷರತೆಯ ಕಡೆ ದಾರಿ ತೋರಿದ
ಗುರುಗಳಿಗೆ ನನ್ನ ನಮನಗಳು

ಸಕಾರಾತ್ಮಕ ನಕಾರಾತ್ಮಕಗಳ ತಿಳುವಳಿಕೆ
ಸೋಲು ಗೆಲವುಗಳ ಪರಿಕಲ್ಪನೆ
ಕಲೆ ಸಂಸೃತಿಯ ಅರಿವು ಮೂಡಿಸಿದ
ಗುರುಗಳಿಗೆ ನನ್ನ ನಮನಗಳು

ಅಕ್ಷರದ ಜೊತೆಗೆ ಸುಜ್ಞಾನದ ಕಡೆಗೆ.
ಬದುಕಿನ ಗುರಿಯ ಸಂಶೋಧನೆ
ನಂಬಿಕೆ ವಿಶ್ವಾಸಗಳ ಅರ್ಥ ತಿಳಿಸದ
ಗುರುಗಳಿಗೆ ನನ್ನ ನಮನಗಳು

ಬಾಳಿಗೆ ದಾರಿ ದೀಪವ ಹಿಡಿದು
ಸತ್ಯ ಸುಳ್ಳಿನ ವ್ಯತ್ಯಾಸ ತಿಳಿಸಿ
ಕಲ್ಲನ್ನು ಇಂದು ಶಿಲೆಯಾಗಿಸಿದ
ಗುರುಗಳಿಗೆ ನನ್ನ ನಮನಗಳು

-ಅಂಕಿತಾ ಕೋಪರ್ಡೆ

-


5 SEP 2021 AT 11:03

**ಗಜಲ್ **
ಕತ್ತಲಲ್ಲಿ ಬೆಳಕು ಹುಡುಕಲು ದಾರಿ ತೋರಿಸುವಾತ ಗುರು
ಅಜ್ಞಾನದ ಮಂದಿರದಲ್ಲಿ ಜ್ಞಾನದ ದೀಪ ಹಚ್ಚುವಾತ ಗುರು

ಬೇಕು ಬೇಕುಗಳ ಜೊತೆ ಬಯಕೆಯ ಮಹಾಪೂರ ಬದುಕಲ್ಲಿ
ಕಲಿಕೆಯು ಬತ್ತದ ತೊರೆ ಎಂಬುದ ತಿಳಿಸಿ ಹೇಳುವಾತ ಗುರು

ಹಸಿವು ದಾಹಗಳ ಜೊತೆ ಜೊತೆಯಲ್ಲಿ ಜ್ಞಾನವು ಮಣಭಾರ
ಋಣಭಾರವ ಹೊರಿಸುತ್ತ ಜ್ಞಾನದಾಹ ತೀರಿಸುವಾತ ಗುರು

ಅರಿವೆಂಬ ಗುರುವಿನ ಕೊರತೆ ಸದಾ ಚಿತ್ತ ಚಾಂಚಲ್ಯದಲಿ
ಬರಿದಾಗದ ಅಕ್ಷಯಪಾತ್ರೆ ವಿದ್ಯೆ ಎಂದು ತಿಳಿಸುವಾತ ಗುರು

ಆತ್ಮಾವಲೋಕನವೆಂಬ ಗುರುವಿಗೆ ಗುಲಾಮಳಾಗು ಅರ್ಚನಾ
ಆತ್ಮವಿಶ್ವಾಸದಲ್ಲಿ ಮುನ್ನೆಡೆವ ಮಾರ್ಗ ಸೂಚಿಸುವಾತ ಗುರು
ಅರ್ಚನಾ ಯಳಬೇರು ❣️

-



ಕ್ಷೆ ನೀಡಿಯಾದರೂ
ಕ್ಷಣ ನೀಡುವೆ


‌ ಮೆ ನೀಡಿಯಾದರೂ ನಮ್ಮ
ಣಾರ್ಧ ತಪ್ಪನ್ನು ತಿದ್ದುವೆ


ಲಿಕೆಯ ಜ್ಯೋತಿಯಾಗಿ
ಲಿಸುವೆ

ನಡೆ-ನುಡಿಯನ್ನು ಕಲಿಸಿ
ಜ್ಞಾನದ ದೀಪಬೆಳಗಿಸಿ
ನೀ ಹರಸುವೆ

ಬದುಕಿನ ಅರ್ಥ ಬೋಧಿಸಿ
ತಿಳುವಳಿಕೆಯ ಕಲ್ಪಿಸಿ
ಸಾಧನೆಯ ಹಾದಿ ತೋರಿಸುವೆ

ಗುರಿ ತೋರಿದ ಗುರುವೃಂದವೆ
ಎನ್ನ ಬಾಳಿನ ಅಡಿಪಾಯವೇ
ನಿಮ್ಮೆಲ್ಲರ ನಾ ಸ್ಮರಿಸುತ್ತಾ
ಶಿರಬಾಗಿ ವಂದಿಸುವೆ
ಗುರುವರ್ಯರೆ.... ‌ ~ಗಿರೀಶ್ ಶೆಟ್ಟಿ



-



🌷🙏ಗುರುವಂದನೆ🙏🌷
(ಶೀರ್ಷಿಕೆಯಲ್ಲಿ ಓದಿ)

-



*ಶೀರ್ಷಿಕೆ : ಗುರುಕುಲ*

ಏನೂ ಅರಿಯದ ಬುದ್ದಿಗೆ
ಗುರುವಿನ ರೂಪದಲ್ಲಿರುವ ಅರಿವು
ನಿಸ್ವಾರ್ಥದಿಂದ ಪ್ರಪಂಚದ
ಜ್ಞಾನ ಸಂಸ್ಕೃತಿಗಳ ವಿದ್ಯಾದಾನ
ಮಾಡಿ ಜೀವನದಲ್ಲಿ ಪ್ರಬುದ್ಧನನ್ನಾಗಿ
ಮಾಡುವ ತಾಣವು ಗುರುಕುಲ..!!

-


16 JUL 2019 AT 9:22

ಹೆತ್ತವರು ಮತ್ತು ವಿದ್ಯಾ ಬುದ್ದಿ ‌ಕಲಿಸಿದ
ಗುರುಗಳ ಋಣ ತೀರಿಸಲು ಅಸಾಧ್ಯ,
ಅಜ್ಞಾನ ಕಳೆದು ಸುಜ್ಞಾನದ ಕಡೆಗೆ
ದಾರಿ ತೋರಿಸಿದ ನಮ್ಮ‌ ಬುದ್ಧಿಮಟ್ಟವನ್ನು‌
ಹೆಚ್ವಿಸಿದ ಸಮಸ್ತ ಗುರುಗಳಿಗೆ
ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
🍀💐🙏🙏💐🍀

-


5 SEP 2020 AT 17:11

ಅರಿವಿಲ್ಲದ ಮನಕೆ
ಅರಿವು ತುಂಬಿದ
ಗುರುವಿಗೆ
ನನ್ನ ವಂದನೆ...🙏💐

-


5 SEP 2020 AT 15:07

ಅಜ್ಞಾನವೆಂಬ ಅಂಧಕಾರವ ತೊಲಗಿಸಿ
ಸುಜ್ಞಾನದ ದೀವಿಗೆಯ ಬೆಳಗಿ
ತಪ್ಪುಗಳ ತಿದ್ದಿ, ಕೈ ಹಿಡಿದು ಮುನ್ನಡೆಸೋ ಕನಸುಗಳಿಗೆ ನೀರೆರೆದು ಸಲಹೋ
ಗುರುಗಳೇ ನಿಮಗಿದೋ ನನ್ನ
ಹೃದಯಸ್ಪರ್ಶಿ ಪ್ರಣಾಮ.

-


5 SEP 2021 AT 14:19

ನುಡಿಸಿಂಧು

ಜಾತಿ-ಮತದ ಭೇದ ತೋರದೆ
ಎಲ್ಲರ ಭಾವನೆಗಳಿಗೂ ಏಕರೂಪವ ನೀಡುವರು..
ಜಾಣ- ದಡ್ಡನೆಂದು ಬೇರ್ಪಡಿಸದೇ
ಎಲ್ಲರನ್ನು ಬೆನ್ನುತಟ್ಟುವರು..
ಸಿರಿತನ-ಬಡತನದ ರೂಪ ನೀಡಿದೇ
ಹಣದ ದುರ್ಗಂಧವು ಬಾರದಂತೆ ನೋಡಿಕೊಳ್ಳುವರು..
ಸರ್ವರನು ಸುಜ್ಞಾನದೆಡೆಗೆ ಕೊಂಡೊಯ್ಯುವ
ಗುರುಗಳಿಗೆ ವಂದನೆಗಳು🌹

-


27 NOV 2024 AT 15:23

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು (ಕಾರಂತಜ್ಜನ ನೆರಳಿನಡಿಯಲ್ಲಿ ಕಲೆ ಹಾಗೂ ಸಾಹಿತ್ಯ ವೇದಿಕೆ) ಇದರ ವತಿಯಿಂದ ದಿನಾಂಕ ೨೪/೧೧/೨೦೨೪ ರವಿವಾರದಂದು ಪುಸ್ತಕ ಬಿಡುಗಡೆ, ಗುರುಹಿರಿಯರಿಗೆ ಗೌರವ ಸಮರ್ಪಣೆ ಹಾಗೂ ಕವಿಗೋಷ್ಠಿಯ "ಕವಿ ಸಮ್ಮಿಲನ -2024" ಕಾರ್ಯಕ್ರಮ ನಚಿಕೇತ ವಿದ್ಯಾಸಂಸ್ಥೆ ಸರಳೆಬೆಟ್ಟು ಮಣಿಪಾಲ ಉಡುಪಿಯಲ್ಲಿ ನೆರವೇರಿತು.

-